Asianet Suvarna News Asianet Suvarna News

ಎಲ್ಲಾ ರೀತಿಯ ಮೀಸಲಾತಿಯನ್ನು ವಿರೋಧಿಸಿದ್ದರು ನೆಹರು: ಮುಖ್ಯಮಂತ್ರಿಗಳಿಗೆ ಬರೆದ ಪತ್ರ ನೆನಪಿಸಿದ ಮೋದಿ!

ಒಬಿಸಿಗಳಿಗೆ ಎಂದಿಗೂ ಸಂಪೂರ್ಣ ಮೀಸಲಾತಿ ನೀಡದ ಕಾಂಗ್ರೆಸ್, ಬಿಜೆಪಿಗೆ ಸಾಮಾಜಿಕ ನ್ಯಾಯದ ಪಾಠ ಹೇಳಬಾರದು ಎಂದು ಪ್ರಧಾನಿ ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

PM Narendra Modi cites letter to chief ministers Nehru was against all forms of reservation san
Author
First Published Feb 7, 2024, 4:08 PM IST

ನವದೆಹಲಿ (ಫೆ.7): ಕಾಂಗ್ರೆಸ್ ಯಾವಾಗಲೂ ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರ ವಿರುದ್ಧವಾಗಿತ್ತು  ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಜವಾಹರಲಾಲ್ ನೆಹರು ಅವರು ಉದ್ಯೋಗದಲ್ಲಿ ಯಾವುದೇ ರೀತಿಯ ಮೀಸಲಾತಿಗೆ ಎಂದಿಗೂ ಒಲವು ತೋರಿರಲಿಲ್ಲ ಎಂದು ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಮೋದಿ, ಮಾಜಿ ಪ್ರಧಾನಿ ನೆಹರು ಅವರು ಅಂದಿನ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಓದಿದರು. "ನಾನು ಅದರ ಅನುವಾದವನ್ನು ಓದುತ್ತಿದ್ದೇನೆ: 'ನಾನು ಯಾವುದೇ ರೀತಿಯ ಮೀಸಲಾತಿಯನ್ನು ಇಷ್ಟಪಡುವುದಿಲ್ಲ. ಅದರಲ್ಲೂ ಪ್ರಮುಖವಾಗಿ ಕೆಲಸಗಳಲ್ಲಿ ಮೀಸಲಾತಿ ಇರೋದನ್ನು ಇಷ್ಟಪಡೋದಿಲ್ಲ. ಅಸಮರ್ಥತೆ ಮತ್ತು ದ್ವಿತೀಯ ದರ್ಜೆ ಮಾನದಂಡಗಳಿಗೆ ಕಾರಣವಾಗುವ ಯಾವುದೇ ಅಂಶವನ್ನು ನಾನು ಬಲವಾಡಿ ವಿರೋಧಿಸುತ್ತೇನೆ' ಎಂದು ನೆಹರು ಅವರು ಪತ್ರದಲ್ಲಿ ಬರೆದಿದ್ದರು ಎಂದು ಮೋದಿ ಹೇಳಿದ್ದಾರೆ.

1961ರ ಜೂನ್ 27 ರಂದು ಜವಾಹರಲಾಲ್ ನೆಹರು ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಉಲ್ಲೇಖಿಸಿ ಪಿಎಂ ಮೋದಿ ಅವರು ಹಿಂದುಳಿದ ವರ್ಗಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದರು. ಆದರೆ ಜಾತಿ ಆಧಾರಿತ ಉದ್ಯೋಗಗಳನ್ನು ಮೀಸಲಿಡುವ ಮೂಲಕ ಅದನ್ನು ಮಾಡಬಾರದು ಎಂದಿದ್ದರು.

ಒಬಿಸಿಗಳಿಗೆ ಸಂಪೂರ್ಣ ಮೀಸಲಾತಿ ನೀಡದ ಕಾಂಗ್ರೆಸ್ ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿಗೆ ಬೋಧಿಸಬಾರದು ಎಂದು ಪ್ರಧಾನಿ ಮೋದಿ ಹೇಳಿದರು. ‘‘ಒಬಿಸಿಗೆ ಯಾವತ್ತೂ ಸಂಪೂರ್ಣ ಮೀಸಲಾತಿ ನೀಡದ ಕಾಂಗ್ರೆಸ್ ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ನೀಡಲಿಲ್ಲ, ಬಾಬಾ ಸಾಹೇಬರನ್ನು ಭಾರತ ರತ್ನಕ್ಕೆ ಅರ್ಹರೆಂದು ಪರಿಗಣಿಸದ ಕಾಂಗ್ರೆಸ್ ತನ್ನ ಕುಟುಂಬಕ್ಕೆ ಮಾತ್ರ ಭಾರತ ರತ್ನ ನೀಡುತ್ತಲೇ ಇತ್ತು. ಸಾಮಾಜಿಕ ನ್ಯಾಯದ ಪಾಠ, ನಾಯಕರಾಗಿ ಯಾವುದೇ ಗ್ಯಾರಂಟಿ ಇಲ್ಲದವರು ಮೋದಿಯವರ ಗ್ಯಾರಂಟಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ, ”ಎಂದು ಪ್ರಧಾನಿ ಮೋದಿ ಹೇಳಿದರು.

ಕಳೆದ ಮೂರು ದಿನಗಳಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಹಾದಿಯಲ್ಲಿ ಜವಹರಲಾಲ್‌ ನೆಹರೂ ಅವರನ್ನು ಉಲ್ಲೇಖಿಸಿರುವುದು ಇದು ಎರಡನೇ ಬಾರಿಯಾಗಿದೆ. ಸೋಮವಾರ, ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಜವಾಹರಲಾಲ್ ನೆಹರು ಅವರು ತಮ್ಮ ಅಮೆರಿಕನ್ ಮತ್ತು ಚೀನಾದ ಪ್ರಜೆಗಳಿಗೆ ಹೋಲಿಸಿದರೆ ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತಿಕೆ ಹೊಂದಿದ್ದಾರೆಂದು ಭಾವಿಸಿದ್ದರು.

ಬ್ರಿಟಿಷರ ನೆರಳಿನಲ್ಲಿ ಆಡಳಿತದ ನಡೆಸಿತ್ತು ಕಾಂಗ್ರೆಸ್, ರಾಜ್ಯಸಭೆಯಲ್ಲಿ ಇತಿಹಾಸ ಬಿಚ್ಚಿಟ್ಟ ಮೋದಿ!

"ಪ್ರಧಾನಿ ನೆಹರೂ ಅವರು ಕೆಂಪು ಕೋಟೆಯಿಂದ ಹೇಳಿದ್ದನ್ನು ಸದನಲ್ಲಿ ಹೇಳಿದ ಮೋದಿ, ಭಾರತೀಯರಿಗೆ ಸಾಮಾನ್ಯವಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸವಿಲ್ಲ, ನಾವು ಯುರೋಪ್ ಅಥವಾ ಜಪಾನ್ ಅಥವಾ ಚೀನಾ ಅಥವಾ ರಷ್ಯಾ ಅಥವಾ ಅಮೆರಿಕದ ಜನರಂತೆ ನಾವು ಕೆಲಸ ಮಾಡುವುದಿಲ್ಲ ಎಂದು ಭಾವಿಸಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದರು. ಇಂದಿರಾ ಗಾಂಧಿಯವರ ಚಿಂತನೆಯೂ ಭಿನ್ನವಾಗಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ಭಾರತೀಯರು ಕಷ್ಟಗಳಿಂದ ಓಡಿಹೋಗುತ್ತಾರೆ ಎಂಬ ಮಾಜಿ ಪ್ರಧಾನಿಯವರ ಹೇಳಿಕೆಯನ್ನು ಪ್ರಸ್ತಾಪಿಸಿದರು.

ನನ್ನ ದೇಶ ಕೇವಲ ದೆಹಲಿಯಲ್ಲ, ಬೆಂಗಳೂರು ಕೂಡ ನನ್ನ ದೇಶ; ವಿಪಕ್ಷಗಳಿಗೆ ಚಾಟಿ ಬಿಸಿದ ಪ್ರಧಾನಿ ಮೋದಿ !

Follow Us:
Download App:
  • android
  • ios