ಬ್ರಿಟಿಷರ ನೆರಳಿನಲ್ಲಿ ಆಡಳಿತದ ನಡೆಸಿತ್ತು ಕಾಂಗ್ರೆಸ್, ರಾಜ್ಯಸಭೆಯಲ್ಲಿ ಇತಿಹಾಸ ಬಿಚ್ಚಿಟ್ಟ ಮೋದಿ!
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಹಾಗೂ ವಿಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ನವದೆಹಲಿ(ಫೆ.07) ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ವಿಪಕ್ಷಗಳ ವಿರುದ್ಧ ಚಾಟಿ ಬೀಸಿದ ಬಳಿಕ ಇಂದು ರಾಜ್ಯಸಭೆಯಲ್ಲಿ ಮೋದಿ ಪ್ರಖರ ಭಾಷಣದ ಮೂಲಕ ವಿಪಕ್ಷಗಳನ್ನು ಕಂಗಾಲು ಮಾಡಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಆಡಳಿತ, ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯವನ್ನು ಹೇಗೆ ನಿರ್ಲಕ್ಷ್ಯ ಮಾಡಲಾಗಿತ್ತು ಅನ್ನೋದನ್ನೂ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಬ್ರಿಟಿಷ್ ನೆರಳಿನಲ್ಲೇ ಆಡಳಿತ ನಡೆಸಿತು. ಗುಲಾಮಿ ಮಾನಸಿಕತೆಯಿಂದ ಹೊರಬರುವ ಪ್ರಯತ್ನ ಮಾಡಲೇ ಇಲ್ಲ ಎಂದು ಮೋದಿ ಹೇಳಿದರು.
ಬ್ರಿಟಿಷರಿಂದ ನೀವು ಪ್ರಭಾವಿತರಾಗಿಲ್ಲದಿದ್ದರೆ ಇದುವರೆಗೆ ಬ್ರಿಟಿಷರು ಮಾಡಿದ ಕಾನೂನಿನಲ್ಲೇ ದೇಶ ಮುನ್ನಡೆಸಿದ್ದೇಕೆ? ನೀವು ಬ್ರಿಟಿಷರಿಂದ ಪ್ರಭಾವಿತರಾಗಿಲ್ಲಿದ್ದರೆ, ವಾಹನಗಳಲ್ಲಿ ಕೆಂಪು ಗೂಟದ ಲೈಟ್ ನಿಲ್ಲಿಸಲಿಲ್ಲ ಯಾಕೆ? , ರಾಜಪಥವನ್ನು ಕರ್ತವ್ಯಪಥ ಮಾಡಲು ಇಷ್ಟು ವರ್ಷ ಬೇಕಾಯಿತೆ? ನೀವು ಬ್ರಿಟಿಷರಿಂದ ಪ್ರಬಾವಿತರಾಗಿಲ್ಲ ಎಂದಾದರೆ, ಅಂಡಮಾನ್ ನಿಕೋಬಾರ್‌ನಲ್ಲಿ ಬ್ರಿಟಿಷರ ಧ್ವಜ ಯಾಕೆ ಇಡಲಾಗಿತ್ತು. ಭಾರತದ ಮದರ್ ಆಫ್ ಡೆಮಾಕ್ರಸಿ ಎಂದೇ ಗುರುತಿಸಿಕೊಂಡಿದೆ.ಆದರೆ ಇದನ್ನು ಜಗತ್ತಿಗೆ ಹೇಳಲು ನಿಮ್ಮನ್ನು ತಡೆದವರು ಯಾರು? ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇರ ವಾಗ್ದಾಳಿ ನಡೆಸಿದ್ದಾರೆ.
ಮೊದಲ ಬಾರಿಗೆ ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸಲಿದೆ ಕೇಂದ್ರ ಸರ್ಕಾರ, ಏನಿದು ವೈಟ್ ಪೇಪರ್?
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಸುದೀರ್ಘವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಹಾಗೂ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ದಶಕಗಳ ಕಾಲ ಎಸ್‌ಸಿ, ಎಸ್‌ಟಿ, ಒಬಿಸಿಗೆ ಮಾಡಿದ ಅನ್ಯಾಯವನ್ನು ಮೋದಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನಾನು ಈ ರೀತಿ ಯಾವುದೇ ಆರಕ್ಷಣೆಯನ್ನು ಇಷ್ಟಪಡುವುದಿಲ್ಲ. ಎಸ್‌ಸಿ, ಎಸ್‌ಟಿ, ಒಬಿಸಿಗೆ ಆರಕ್ಷಣೆ ಉದ್ಯೋಗ ಸಿಕ್ಕರೆ, ಸರ್ಕಾರ ಪತನವಾಗಲಿದೆ ಈ ಕುರಿತು ಅಂದಿನ ಪ್ರಧಾನಿ ನೆಹರೂ ಮುಖ್ಯಮಂತ್ರಗಳಿಗೆ ಬರೆದಿರುವ ಪತ್ರದ ಸಾರಾಂಶ ಒದಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿಗಳನ್ನು ಅಧಿಕಾರದಿಂದ ಕಾಂಗ್ರೆಸ್ ದೂರವಿಟ್ಟಿತು. ಇದೀಗ ಬಿಜೆಪಿ ಸರ್ಕಾರ ಈ ಅವಕಾಶವನ್ನು ನೀಡಿದೆ.
ಈ ಸಮುದಾಯಗಳಿಗೆ ಬಿಜೆಪಿ ಸರ್ಕಾರ ಎಲ್ಲಾ ನೆರವು ನೀಡುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಅವಕಾಶ ನೀಡಲಾಗಿದೆ. ಹೀಗಾಗಿ ಸ್ನಾತಕೋತ್ತರ ವಿದ್ಯಾಭ್ಯಾಸದಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು, ಪ್ರೌಢಶಿಕ್ಷಣ, ಪದವಿ, ಇತರ ವೃತ್ತಿಪರ ಕೋರ್ಸ್‌ಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಸೇರಿದಂತೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಡಾಕ್ಟರ್, ಎಂಜಿನೀಯರ್ಸ್ ಕನಸುಗಳು ನನಸಾಗುವತ್ತ ಸಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
Narendra Modi: ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳಿಸಲಿದೆ : ಸಂಸತ್‌ನಲ್ಲಿ ಮೋದಿಯಿಂದ 2ನೇ ಅವಧಿ ಕೊನೆ ಭಾಷಣ
ಬಿಜೆಪಿ ಸರ್ಕಾರ ಹಲವು ಅಭಿಯಾನಗಳ ಮೂಲಕ ದೇಶದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡಿದೆ. ಸ್ವಚ್ಚ ಭಾರತ ಅಭಿಯಾನದ ಮೂಲಕ ದೇಶದಲ್ಲಿ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಲಾಗಿತ್ತು.