Asianet Suvarna News Asianet Suvarna News

Ukraine Crisis: ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ರಾಷ್ಟ್ರಪತಿ ಕೋವಿಂದ್‌ಗೆ ಮಾಹಿತಿ ಕೊಟ್ಟ ಪ್ರಧಾನಿ ಮೋದಿ!

* ಉಕ್ರೇನ್ ರಷ್ಯಾ ನಡುವಿನ ಯುದ್ಧ ಆರನೇ ದಿನಕ್ಕೆ

* ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರುತ್ತಿರುವ ಭಾರತ

* ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ರಾಷ್ಟ್ರಪತಿ ಕೋವಿಂದ್‌ಗೆ ಮಾಹಿತಿ ಕೊಟ್ಟ ಪ್ರಧಾನಿ ಮೋದಿ

PM Narendra Modi briefs President Kovind on Ukraine crisis pod
Author
Bnagalore, First Published Mar 1, 2022, 11:42 AM IST

ನವದೆಹಲಿ(ಮಾ.01): ಕಳೆದ ಆರು ದಿನಗಳಿಂದ ರಷ್ಯಾದ ಉಕ್ರೇನ್ ಮೇಲಿನ ದಾಳಿ ನಡುವೆ, ಸಿಲುಕಿರುವ ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಭಾರತವು ವೇಗವಾಗಿ ಕೆಲಸ ಮಾಡುತ್ತಿದೆ. ಕಳೆದ ಎರಡು ದಿನಗಳಲ್ಲಿ ಪ್ರಧಾನಿ ಮೋದಿ ಮೂರು ಬಾರಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಮಂಗಳವಾರ ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಉಕ್ರೇನ್‌ನಲ್ಲಿ 16 ಸಾವಿರ ಭಾರತೀಯರು

ವಾಸ್ತವವಾಗಿ, ಭಾರತದ ಸುಮಾರು 16 ಸಾವಿರ ಜನರು ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಪೈಕಿ ಸುಮಾರು 1,500 ಮಂದಿಯನ್ನು ವಾಪಸ್ ಕರೆತರಲಾಗಿದೆ. ಆಪರೇಷನ್ ಗಂಗಾ ಮೂಲಕ, ವಿಶೇಷ ವಿಮಾನಗಳ ಮೂಲಕ ಉಕ್ರೇನ್‌ನ ಗಡಿ ದೇಶಗಳಾದ ಹಂಗೇರಿ, ಪೋಲೆಂಡ್ ಮತ್ತು ರೊಮೇನಿಯಾದ ವಿದ್ಯಾರ್ಥಿಗಳನ್ನು ಸರ್ಕಾರವು ಏರ್‌ಲಿಫ್ಟ್ ಮಾಡುತ್ತಿದೆ. ಉತ್ತರ ಪ್ರದೇಶದ ಐದನೇ ಹಂತದ ಚುನಾವಣೆ ಮುಗಿದ ಬೆನ್ನಲ್ಲೇ ಯುಪಿಯಿಂದ ದೆಹಲಿಗೆ ಆಗಮಿಸಿದ ಪ್ರಧಾನಿ ಮೋದಿ ಭಾನುವಾರವೇ ಮೊದಲ ಉನ್ನತ ಮಟ್ಟದ ಸಭೆ ನಡೆಸಿದರು. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಕರೆತರುವುದು ತನ್ನ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದರು.

Russia Ukraine Crisis: ಜೀವ ಉಳಿಸಿಕೊಳ್ಳಿ ಮತ್ತು ಜಾಗ ಖಾಲಿ ಮಾಡಿ: ರಷ್ಯಾ ಯೋಧರಿಗೆ ಉಕ್ರೇನ್‌ ಅಧ್ಯಕ್ಷ ಆಫರ್‌!

4 ಸಚಿವರು ಉಕ್ರೇನ್ ಗಡಿಗೆ

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಮೋದಿ ಸರ್ಕಾರ ನಾಲ್ವರು ಸಚಿವರನ್ನು ಉಕ್ರೇನ್‌ನ ನೆರೆಯ ರಾಷ್ಟ್ರಗಳ ಗಡಿಗೆ ಕಳುಹಿಸಿದೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ ಅವರು ಉಕ್ರೇನ್ ಗಡಿಗೆ ತೆರಳಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಸಮನ್ವಯಗೊಳಿಸಲು ಮತ್ತು ಸಹಾಯ ಮಾಡುತ್ತಾರೆ. ಸಿಂಧಿಯಾ ಅವರು ರೊಮೇನಿಯಾ ಮತ್ತು ಮೊಲ್ಡೊವಾದಿಂದ ವಿದ್ಯಾರ್ಥಿಗಳ ಸ್ಥಳಾಂತರಿಸುವಿಕೆಯನ್ನು ಮೇಲ್ವಿಚಾರಣೆ ನಡೆಸಿದರೆ, ರಿಜಿಜು ಸ್ಲೋವಾಕಿಯಾಕ್ಕೆ ಹೋಗುತ್ತಾರೆ. ಹರ್ದೀಪ್ ಪುರಿ ಹಂಗೇರಿ ಮತ್ತು ವಿಕೆ ಸಿಂಗ್ ಪೋಲೆಂಡ್‌ನಿಂದ ವಿದ್ಯಾರ್ಥಿಗಳ ಸ್ಥಳಾಂತರಿಸುವಿಕೆಯನ್ನು ಖಚಿತಪಡಿಸುತ್ತಾರೆ.

Russia Ukraine Crisis: ರಷ್ಯಾಗೆ ಕ್ರೀಡಾ ಜಗತ್ತಿನಿಂದ ಬಹಿಷ್ಕಾರ!

ಹಿಂಸಾಚಾರ ನಿಲ್ಲಿಸುವಂತೆ ಮನವಿ ಮಾಡಿದ್ದ ಮೋದಿ

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ಅವರು ಹಿಂಸಾಚಾರವನ್ನು ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಮನವಿ ಮಾಡಿದ್ದರು. ಮೋದಿ ಮತ್ತು ಪುಟಿನ್ ಸುದೀರ್ಘ ಮಾತುಕತೆ ನಡೆಸಿದ್ದರು. ಆದಾಗ್ಯೂ, ರಷ್ಯಾದ ನಿಲುವು ಈ ಮಾತುಕತೆಯಿಂದ ಪ್ರಭಾವಿತವಾಗಿಲ್ಲ. ಕಳೆದ ಆರು ದಿನಗಳಿಂದ ರಷ್ಯಾ ನಿರಂತರವಾಗಿ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ.

ತನ್ನ ಪ್ರಜೆಗಳನ್ನು ರಕ್ಷಿಸಿ ಮಾದರಿಯಾದ ಭಾರತ: ತನ್ನವರ ರಕ್ಷಣೆಗೆ ಮುಂದಾಗದ ಚೀನಾ!

ರಷ್ಯಾದಿಂದ ದಾಳಿಗೆ ತುತ್ತಾಗಿರುವ ಉಕ್ರೇನ್‌ನಿಂದ ತಮ್ಮ ನಾಗರಿಕರ ರಕ್ಷಣೆಗೆ ಭಾರತ ಸೇರಿ ಹಲವು ದೇಶಗಳು ಮುಂದಾಗಿದ್ದರೆ, ಚೀನಾ ಮಾತ್ರ ಈ ವಿಷಯದಲ್ಲಿ ಅಸಡ್ಡೆ ತೋರಿದೆ ಎಂಬ ಟೀಕೆ ವ್ಯಕ್ತವಾಗಿದೆ. ತನ್ನ ನಾಗರಿಕರ ತೆರವು ಕಾರ್ಯಾಚರಣೆಗೆ ಈಗಿನ ಪರಿಸ್ಥಿತಿ ಸುರಕ್ಷಿವಲ್ಲ ಎಂದು ಚೀನಾ ಸರ್ಕಾರ ಕಾರಣ ನೀಡಿದೆ.ಈ ಕುರಿತು ಹೇಳಿಕೆ ನೀಡಿರುವ ಉಕ್ರೇನ್‌ನಲ್ಲಿನ ಚೀನಾ ರಾಯಭಾರಿ ಫ್ಯಾನ್‌ ಕ್ಸಿಯಾನ್‌ರಾಂಗ್‌, ‘ನಮ್ಮೆಲ್ಲಾ ನಾಗರಿಕರನ್ನು ಬಿಟ್ಟು ನಾನು ಉಕ್ರೇನ್‌ನಿಂದ ತೆರಳಿದ್ದೇನೆ ಎಂಬ ಸುದ್ದಿ ಸುಳ್ಳು. ನಾವು ಇಲ್ಲಿಂದ ತೆರವು ಕಾರ್ಯಾಚರಣೆ ಆರಂಭಿಸಲು, ಪರಿಸ್ಥಿತಿ ಸುಧಾರಣೆ ಆಗುವವರೆಗೂ ಕಾಯಬೇಕು. ಎಲ್ಲರಿಗೂ ಗರಿಷ್ಠ ಭದ್ರತೆ ಒದಗಿಸಲು ಸರ್ಕಾರ ಬದ್ಧವಾಗಿದೆ ಮತ್ತು ನಾವು ಎಲ್ಲರಿಗೂ ಸುರಕ್ಷತೆಯನ್ನು ಖಾತರಿಪಡಿಸುತ್ತೇವೆ. ನಾವು ಎಲ್ಲಾ ರೀತಿಯಲ್ಲಿ ಸೂಕ್ತ ವ್ಯವಸ್ಥೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಉಕ್ರೇನ್‌ನಲ್ಲಿ ತನ್ನ ಪ್ರಜೆಗಳ ತೆರವು ಮಾಡದ ಅಮೆರಿಕ!:  ಭಾರತ ಸರ್ಕಾರ ತನ್ನ ನಾಗರಿಕರ ತೆರವು ಕಾರ್ಯಾಚರಣೆಗೆ ಸಾಕಷ್ಟುಕ್ರಮ ಕೈಗೊಂಡ ಹೊರತಾಗಿಯೂ ವಿಪಕ್ಷಗಳಿಂದ ಟೀಕೆಗೆ ತುತ್ತಾಗಿದ್ದರೆ, ಇತ್ತ ಅಮೆರಿಕ ಸರ್ಕಾರ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿರುವ ತನ್ನ ನಾಗರಿಕರ ತೆರವು ಕಾರ್ಯಾಚರಣೆ ತನ್ನ ಹೊಣೆಯಲ್ಲ ಎಂದು ಪೂರ್ಣವಾಗಿ ಕೈತೊಳೆದುಕೊಂಡಿದೆ.

ಇದನ್ನೂ ಓದಿRussia Ukraine Crisis: ಸಂಧಾನ ಸಭೆ ಅಪೂರ್ಣ: ಎರಡು ದೇಶಗಳ ನಡುವೆ 6ನೇ ದಿನವೂ ಘೋರಯುದ್ಧ

ಈ ಕುರಿತು ಉಕ್ರೇನ್‌ನಲ್ಲಿರುವ ತನ್ನ ನಾಗರಿಕರಿಗೆ ಸಲಹೆ ನೀಡಿರುವ ಅಮೆರಿಕ ಸರ್ಕಾರ, ‘ಪರಿಸ್ಥಿತಿ ಸುರಕ್ಷಿತ ಎನ್ನಿಸಿದರೆ ಖಾಸಗಿ ಅವಕಾಶಗಳನ್ನು ಬಳಸಿಕೊಂಡು ಉಕ್ರೇನ್‌ ದೇಶದಿಂದ ಹೊರಬನ್ನಿ ಎಂದು ನಾವು ಅಮೆರಿಕದ ಎಲ್ಲಾ ಪ್ರಜೆಗಳಿಗೂ ಸಲಹೆ ನೀಡುತ್ತಿದ್ದೇವೆ. ಜೊತೆಗೆ ಹೀಗೆ ಹೊರಡುವ ಮುನ್ನ ಸುರಕ್ಷಿತ ಎನ್ನಿಸುವ ಮಾರ್ಗ ಮತ್ತು ಅಪಾಯದ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳಿ. ]

ಪೋಲೆಂಡ್‌ ಮತ್ತು ಮಾಲ್ಡೋವಾದ ಬಹುತೇಕ ಗಡಿಗಳಲ್ಲಿ ನಾಗರಿಕರ ಬಹುದೊಡ್ಡ ಸರದಿ ಇದೆ. ಪರಿಣಾಮ ನೀವು ಅಲ್ಲಿ ಸಾಕಷ್ಟುಸಮಯ ಕಾಯಬೇಕಾಗಿ ಬರಬಹುದು. ಹೀಗಾಗಿ ಹಂಗೇರಿ, ಸ್ಲೊವಾಕಿಯಾ, ರೊಮೇನಿಯಾ ಗಡಿಗಳ ಮೂಲಕ ತೆರವಾಗುವ ಯತ್ನ ಮಾಡಿ. ಆದರೆ ಅಲ್ಲಿಯೂ ಹಲವು ಗಂಟೆ ಕಾಯಬೇಕಾಗಿ ಬರಬಹುದು’ ಎಂಬ ಸಂದೇಶ ರವಾನಿಸಿದೆ.ಈ ಮೂಲಕ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ನಿಮ್ಮ ರಕ್ಷಣೆ ನಿಮ್ಮ ಹೊಣೆ. ಪರಿಸ್ಥಿತಿ ನೋಡಿಕೊಂಡು ನಿಮ್ಮ ಅಪಾಯದಲ್ಲೇ ನೀವು ಅಲ್ಲಿಂದ ಜಾಗ ಖಾಲಿ ಮಾಡಿ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದೆ.

Follow Us:
Download App:
  • android
  • ios