Asianet Suvarna News Asianet Suvarna News

PM Narendra Modi Birthday: ತಮಿಳುನಾಡು ಬಿಜೆಪಿಯಿಂದ ನವಜಾತ ಶಿಶುಗಳಿಗೆ ಚಿನ್ನದ ಉಂಗುರ

PM Narendra Modi Birthday: ನವಜಾತ ಶಿಶುಗಳಿಗೆ ಚಿನ್ನದ ಉಂಗುರಗಳನ್ನು ನೀಡುವ ಮೂಲಕಮೂಲಕ ಪ್ರಧಾನಿ ನರೇಂದ್ರ ಮೋದಿ  ಹುಟ್ಟುಹಬ್ಬವನ್ನು ಆಚರಿಸಲು ತಮಿಳುನಾಡು ಬಿಜೆಪಿ ನಿರ್ಧರಿಸಿದೆ

PM Narendra Modi Birthday Tamil Nadu BJP to distribute gold rings among newborns mnj
Author
First Published Sep 16, 2022, 1:58 PM IST

ಚೆನ್ನೈ (ಸೆ. 16):  ಸೆಪ್ಟೆಂಬರ್ 17ರಂದು ನವಜಾತ ಶಿಶುಗಳಿಗೆ ಚಿನ್ನದ ಉಂಗುರಗಳನ್ನು ನೀಡುವ ಮೂಲಕ ಹಾಗೂ 720 ಕೆಜಿ ಮೀನು ವಿತರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹುಟ್ಟುಹಬ್ಬವನ್ನು ಆಚರಿಸಲು ಬಿಜೆಪಿ ತಮಿಳುನಾಡು ಘಟಕ ನಿರ್ಧರಿಸಿದೆ.   ಚೆನ್ನೈನಲ್ಲಿರುವ ಸರ್ಕಾರಿ ಆರ್‌ಎಸ್‌ಆರ್‌ಎಂ ಆಸ್ಪತ್ರೆಯಲ್ಲಿ ಪ್ರಧಾನಿ ಜನ್ಮದಿನದಂದು ಜನಿಸಿದ ಎಲ್ಲಾ ಮಕ್ಕಳಿಗೆ ಚಿನ್ನದ ಉಂಗುರವನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಮೀನುಗಾರಿಕೆ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಉಸ್ತುವಾರಿ ಸಚಿವ ಎಲ್ ಮುರುಗನ್ ಹೇಳಿದ್ದಾರೆ.  ಪ್ರತಿ ಉಂಗುರದಲ್ಲಿ ಸುಮಾರು 2-ಗ್ರಾಂ ಚಿನ್ನವಿದ್ದು ಸುಮಾರು ₹5000 ಬೆಲೆಯದ್ದಾಗಿದೆ ಎಂದು ಅವರು ತಿಳಿಸಿದ್ದಾರೆ. 

ಪಕ್ಷದ ಸ್ಥಳೀಯ ಘಟಕವು ಆ ದಿನ ನಿರ್ದಿಷ್ಟ ಆಸ್ಪತ್ರೆಯಲ್ಲಿ ಸುಮಾರು 10-15 ಹೆರಿಗೆಗಳಾಗಬಹುದು ಎಂದು ಅಂದಾಜಿಸಿದೆ. ಇದು ಫ್ರೀಬಿ (Freebie) ಅಲ್ಲ, ಅಂದು ಜನಿಸಿದ ಶಿಶುಗಳನ್ನು ಸ್ವಾಗತಿಸುವ ಮೂಲಕ ನಾವು ನಮ್ಮ ಪ್ರಧಾನಿಯವರ ಜನ್ಮದಿನವನ್ನು ಆಚರಿಸುತ್ತಿದ್ದೇವೆ ಎಂದು ಮುರುಗನ್ ಹೇಳಿದ್ದಾರೆ. 

ಇನ್ನು ಹಿಂದಿನ ವರ್ಷಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳಂತೆಯೇ ಈ ವರ್ಷವು ಎಲ್ಲ ರಾಜ್ಯಗಳಲ್ಲಿ 'ಸೇವಾ ಪಖ್ವಾಡಾ' (ಸೇವಾ ಪಾಕ್ಷಿಕ) ಆಚರಿಸಿಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅರುಣ್ ಸಿಂಗ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.  ಈ ವೇಳೆ  ರಕ್ತದಾನ ಮತ್ತು ಇತರ ವೈದ್ಯಕೀಯ ತಪಾಸಣೆ ಶಿಬಿರಗಳನ್ನು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.  ಇನ್ನು ಮೋದಿ ಹುಟ್ಟುಹಬ್ಬದ ಅಂಗಾವಗಿ ಕೇಕ್ ಕತ್ತರಿಸದಂತೆ ಅಥವಾ ಹವನಗಳನ್ನು ಆಯೋಜಿಸದಂತೆ ಹಿರಿಯ ಬಿಜೆಪಿ ನಾಯಕರು ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ ಎನ್ನಲಾಗಿದೆ. 

720 KG ಮೀನು ವಿತರಣೆ:  ಇನ್ನು ಈ ವರ್ಷ ಮೋದಿ 72 ನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ  720 ಕೆಜಿ ಮೀನು ವಿತರಿಸುತ್ತಿದ್ದೇವೆ. ಇದಕ್ಕಾಗಿ ನಾವು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಕ್ಷೇತ್ರವನ್ನು ಆಯ್ಕೆ ಮಾಡಿದ್ದೇವೆ. ಪ್ರಧಾನಿ ಸಸ್ಯಾಹಾರಿ ಎಂಬುದು ನಮಗೆ ತಿಳಿದಿದೆ.  ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯೂ (PMMSY) ಮೀನು ಸೇವನೆಯನ್ನು ಪ್ರೋತ್ಸಾಹಿಸುತ್ತದೆ. ಹೀಗಾಗಿ ವಿತರಿಸುತ್ತಿದ್ದೇವೆ ಎಂದು ಎಂದು ಮೀನುಗಾರಿಕಾ ಸಚಿವರು ಹೇಳಿದ್ದಾರೆ. ಪ್ರಧಾನ ಮೋದಿ ಜನ್ಮದಿನವನ್ನು ಕರಾವಳಿ ಸ್ವಚ್ಛತಾ ದಿನವನ್ನಾಗಿಯೂ ಗುರುತಿಸಲಾಗುತ್ತಿದೆ. 

Modi 72nd Birthday: ಮೋದಿ ನಡೆದು ಬಂದ ಹಾದಿ, ಸಿಎಂ - ಪಿಎಂ ಆಗಿ 21 ವರ್ಷ ಅಧಿಕಾರದ ಸೊಬಗು

ಮೋದಿ ಜನ್ಮದಿನದಂದೇ ಮಧ್ಯಪ್ರದೇಶ ಕಾಡಿಗೆ ಚೀತಾ: 70 ವರ್ಷಗಳ ಹಿಂದೆ ಭಾರತದ ಅರಣ್ಯದಿಂದ ನಾಮಾವಶೇಷಗೊಂಡಿರುವ ವಿಶ್ವದ ಅತ್ಯಂತ ವೇಗದ ಪ್ರಾಣಿ ಚೀತಾಗಳನ್ನು ದೇಶದ ಕಾಡಿಗೆ ಬಿಡುಗಡೆ ಮಾಡುವ ಐತಿಹಾಸಿಕ ಕ್ಷಣಕ್ಕೆ ಭಾರತೀಯರು ಶನಿವಾರ ಸಾಕ್ಷಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 73ನೇ ಜನ್ಮದಿನದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಆಫ್ರಿಕಾ ಖಂಡದಿಂದ ತರಲಾಗುವ 8 ಚೀತಾಗಳನ್ನು ಬಿಡುಗಡೆ ಮಾಡಲಿದ್ದಾರೆ. ಇದರೊಂದಿಗೆ 7 ದಶಕಗಳ ಬಳಿಕ ದೇಶದ ಅರಣ್ಯದಲ್ಲಿ ಚೀತಾ ಯುಗ ಆರಂಭವಾಗಲಿದೆ.

ಮಹಾರಾಜ ರಾಮಾನುಜ ಪ್ರತಾಪ್‌ ಸಿಂಗ್‌ ದೇವ್‌ ಅವರು 1947ರಲ್ಲಿ ಕೊನೆಯ ಚೀತಾವನ್ನು ಕೊಂದಿದ್ದರು. 1952ರಲ್ಲಿ ಭಾರತದಿಂದ ಚೀತಾ ನಾಮಾವಶೇಷವಾಗಿದೆ ಎಂದು ಘೋಷಿಸಲಾಗಿತ್ತು. 2009ರಿಂದ ಚೀತಾ ತರುವ ಪ್ರಯತ್ನಗಳು ನಡೆಯುತ್ತಿದ್ದವಾದರೂ ಅದು ಈಗ ತಾರ್ಕಿಕ ಘಟ್ಟಕ್ಕೆ ತಲುಪಿದೆ. ಶನಿವಾರ ಬೆಳಗ್ಗೆ 10.45ಕ್ಕೆ ಚೀತಾಗಳನ್ನು ದೇಶದ ಅರಣ್ಯಕ್ಕೆ ಪ್ರಧಾನಿ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ.

HBD Narendra Modi: ಜಗತ್ತನ್ನೇ ಭಾರತದತ್ತ ತಿರುಗಿಸಿದ ಗುಜರಾತಿನ ಸಾಮಾನ್ಯ ಕುಟುಂಬದಿಂದ ಬಂದ ಸಾಧಕ!

Follow Us:
Download App:
  • android
  • ios