Asianet Suvarna News Asianet Suvarna News

ಸುದೀರ್ಘ ದಿನ ಪೂರೈಸಿದ ಕಾಂಗ್ರೇಸೇತರ ಪ್ರಧಾನಿ; ಮತ್ತೊಂದು ದಾಖಲೆ ಬರೆದ ಮೋದಿ!

ನರೇಂದ್ರ ಮೋದಿ ಪ್ರಧಾನಿಯಾಗಿ ಹಲವು ದಾಖಲೆ ಬರೆದಿದ್ದಾರೆ. ಅಯೋಧ್ಯೆ ಭೇಟಿ ನೀಡಿದ ಮೊದಲ ಪ್ರಧಾನಿ, ಟ್ವಿಟರ್‌ನಲ್ಲಿ ಗರಿಷ್ಠ ಫಾಲೋವರ್ಸ್ ಹೊಂದಿದ ಪ್ರಧಾನಿ ಸೇರಿದಂತೆ ಹಲವು ದಾಖಲೆಗಳನ್ನು ಮೋದಿ ಬರೆದಿದ್ದಾರೆ. ಇದೀಗ ಸುದೀರ್ಘ ಅವಧಿ ಪೂರೈಸಿದ ಕಾಂಗ್ರೇಸೇತರ ಪ್ರಧಾನಿ ಅನ್ನೋ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

PM Narendra modi becomes the longest serving Indian PM of non-Congress origin
Author
Bengaluru, First Published Aug 13, 2020, 8:41 PM IST

ನವದೆಹಲಿ(ಆ.13): ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ್ದಾರೆ. ಸುದೀರ್ಘ ಅವಧಿ ಪೂರೈಸಿದ ಕಾಂಗ್ರೇಸೇತರ ಪ್ರಧಾನಿ ಅನ್ನೋ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. 67 ವರ್ಷದ ನರೇಂದ್ರ ಮೋದಿ ಇದೀಗ ಮಾಜಿ ಪ್ರಧಾನಿ, ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ದಾಖಲೆ ಮುರಿದಿದ್ದಾರೆ. ಇಷ್ಟೇ ಅಲ್ಲ ಸುದೀರ್ಘ ಅವಧಿಗೆ ಪ್ರಧಾನಿಯಾದ ಭಾರತದ ನಾಲ್ಕನೇ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಹೊಸ ಶಿಕ್ಷಣ ರೀತಿ ಬಗ್ಗೆ ಪ್ರಧಾನಿ ಮಾತು..! ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ಮೋದಿ.

ಬಿಜೆಪಿಯಿಂದ ಪ್ರಧಾನಿ ಪಟ್ಟ ಅಲಂಕರಿಸಿದ ಅಟಲ್ ಬಿಹಾರಿ ವಾಜಪೇಯಿ 2,268 ದಿನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಮೋದಿ ಈ ದಾಖಲೆಯನ್ನು ಮುರಿದಿದ್ದಾರೆ.  ಈ ಮೂಲಕ ಬಿಜೆಪಿಯಿಂದ ಅತೀ ಹೆಚ್ಚು ದಿನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮೊದಲಿಗ ಅನ್ನೋ ದಾಖಲೆ ಬರೆದಿದ್ದಾರೆ. 

ರಾಮಮಂದಿರಕ್ಕೆ ಹೋರಾಡಿದ ಅಡ್ವಾಣಿಯನ್ನ ಕಡೆಗಣಿಸಿದ್ರಾ ಮೋದಿ? ಪ್ರಧಾನಿಗೆ ಗುಂಡೂರಾವ್‌ ಪ್ರಶ್ನೆ

ಭಾರತದ ಪ್ರಧಾನಿಯಾಗಿ ಅತೀ ಹೆಚ್ಚು ದಿನ ಸೇವೆ ಸಲ್ಲಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನ ಜವಾಹರ್ ಲಾಲ್ ನೆಹರುವಿಗೆ ಸಲ್ಲಲಿದೆ. ನೆಹರು ಬರೋಬ್ಬರಿ 16 ವರ್ಷ 286 ದಿನ ಪ್ರಧಾನಿಯಾಗಿದ್ದರು. ಎರಡನೇ ಸ್ಥಾನವನ್ನು ಇಂದಿರಾ ಗಾಂಧಿ ಅಲಂಕರಿಸಿದ್ದಾರೆ. ನೆಹರು ಪುತ್ರಿ ಇಂದಿರಾ ಗಾಂಧಿ 11 ವರ್ಷ 59 ದಿನ ಪ್ರಧಾನಿಯಾಗಿದ್ದರು.

3ನೇ ಸ್ಥಾನದಲ್ಲಿ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಪಾತ್ರರಾಗಿದ್ದಾರೆ. ಮನ್‌ಮೋಹನ್ ಸಿಂಗ್ 10 ವರ್ಷ 4 ದಿನ ಪ್ರಧಾನಿಯಾಗಿದ್ದರು. ನಾಲ್ಕನೇ ಸ್ಥಾನದಲ್ಲಿದ್ದ ಅಟಲ್ ಬಿಹಾರಿ ವಾಜಪೇಯ್ ಅವರನ್ನು ನರೇಂದ್ರ ಮೋದಿ ಹಿಂದಿಕ್ಕಿದ್ದಾರೆ. ಮೊದಲ ಮೂರು ಸ್ಥಾನದಲ್ಲಿ ಕಾಂಗ್ರೆಸ್ ಪ್ರಧಾನಿಗಳು ರಾರಾಜಿಸುತ್ತಿದ್ದಾರೆ.  

ಪ್ರಧಾನಿಯಾಗಿ ನರೇಂದ್ರ ಮೋದಿ 6 ವರ್ಷ ಪೂರೈಸಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿ, 2019ರ ಚುನಾವಣೆಯಲ್ಲಿ 303 ಸ್ಥಾನ ಗೆಲ್ಲೋ  ಮೂಲಕ ಅಭೂತಪೂರ್ವ ಗೆಲುವಿನ ಮೂಲಕ 2ನೇ ಬಾರಿ ಪ್ರಧಾನಿಯಾಗಿದ್ದರು. 

Follow Us:
Download App:
  • android
  • ios