ರಾಮಮಂದಿರಕ್ಕೆ ಹೋರಾಡಿದ ಅಡ್ವಾಣಿಯನ್ನ ಕಡೆಗಣಿಸಿದ್ರಾ ಮೋದಿ? ಪ್ರಧಾನಿಗೆ ಗುಂಡೂರಾವ್ ಪ್ರಶ್ನೆ
ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ| ಅಯೋಧ್ಯೆಗಾಗಿ ಹೋರಾಡಿದವರು ಅಡ್ವಾಣಿ| ಅವರ ಹೆಸರನ್ನೇ ನೆನಪಿಸಿಕೊಳ್ಳೋಕೆ ಆಗಲಿಲ್ವೇ, ಉಪಕಾರ ಸ್ಮರಣೆ ಇಲ್ಲವಾಯಿತೇ ಪ್ರಧಾನಿ ಮೋದಿಗೆ| ಪ್ರಧಾನಿ ನಡೆಯ ವಿರುದ್ಧ ಡಿ.ಗುಂಡೂರಾವ್ ವ್ಯಂಗ್ಯ|
ಬೆಂಗಳೂರು(ಆ.06): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗವೇಕು ಎಂಬುದು ಕೋಟ್ಯಂತರ ಹಿಂದೂಗಳ ಕನಸಾಗಿತ್ತು. ಶತಮಾನಗಳ ಕನಸಿಗೆ ನಿನ್ನೆಯಷ್ಟೇ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ್ದರು. ಆದರೆ, ರಾಮಮಂದಿರಕ್ಕಾಗಿ ಹೋರಾಡಿದ ಬಿಜೆಪಿಯ ಹಿರಿಯ ಮುತ್ಸದ್ದಿ ಎಲ್.ಕೆ. ಅಡ್ವಾಣಿ ಅವರನ್ನ ಕಡೆಗಣಿಸಿದ್ದಕ್ಕೆ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂವಾರ್ ಅಸಮಾಧನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ದಿನೇಶ್ ಗುಂಡೂರಾವ್, ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಎಂಬಂತೆ, ಅಯೋಧ್ಯೆಗಾಗಿ ಹೋರಾಡಿದ ಅಡ್ವಾಣಿಯವರ ಹೆಸರು ನೆನಪಿಸಿಕೊಳ್ಳದಷ್ಟು ಉಪಕಾರ ಸ್ಮರಣೆ ಇಲ್ಲವಾಯಿತೇ ಪ್ರಧಾನಿ ಮೋದಿಯವರಿಗೆ..?? ಎಂದು ಪ್ರಶ್ನಿಸಿದ್ದಾರೆ.
ರಾಮಮಂದಿರ ಹೋರಾಟ ಶುರುವಾಗಿದ್ದು ಹೇಗೆ?: ಇಲ್ಲಿದೆ ರೋಚಕ ಮಾಹಿತಿ
ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಸಂತೋಷದ ವಿಚಾರವಾಗಿದೆ. ಶ್ರೀರಾಮ ಭೋದಿಸಿದ ಸಹಬಾಳ್ವೆಯ ತತ್ವ ಎಲ್ಲರಿಗೂ ಮಾದರಿಯಾಗಲಿ. ಅವತಾರ ಪುರುಷ ಶ್ರೀರಾಮನ ಅನುಗ್ರಹದಿಂದ ಅಸಹಿಷ್ಣುತೆ ಅಳಿಯಲಿ, ಏಕತೆ ಉಳಿಯಲಿ ಎಂದು ಬರೆದುಕೊಂಡಿದ್ದಾರೆ.
ನಿನ್ನೆ ನಡೆದ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಯೋಧ್ಯೆಗಾಗಿ ಹೋರಾಡಿದ ಎಲ್. ಅಡ್ವಾಣಿ ಅವರು ಆಗಮಿಸಿರಲಿಲ್ಲ. ಹೀಗಾಗಿ ದಿನೇಶ್ ಗುಂಡೂರಾವ್ ಅಯೋಧ್ಯೆಗಾಗಿ ಹೋರಾಡಿದ ಅಡ್ವಾಣಿಯವರ ಹೆಸರು ನೆನಪಿಸಿಕೊಳ್ಳದಷ್ಟು ಉಪಕಾರ ಸ್ಮರಣೆ ಇಲ್ಲವಾಯಿತೇ ಪ್ರಧಾನಿ ಮೋದಿಯವರಿಗೆ..?? ಎಂದು ಪ್ರಶ್ನಿಸಿದ್ದಾರೆ.