ಜಾಗತಿಕ ನಾಯಕರ ಅನುಮೋದನೆ ಟ್ರಾಕರ್ ರೇಟಿಂಗ್ ಪ್ರಕಟ 13 ದೇಶಗಳ ನಾಯಕರ ಪೈಕಿ ಮೋದಿಗೆ ಹೆಚ್ಚು ಮತ, ಮೊದಲ ಸ್ಥಾನ ಅಮರಿಕ ಅಧ್ಯಕ್ಷ ಜೋ ಬೈಡನ್‌ಗೆ 5ನೇ ಸ್ಥಾನ ಸರ್ವೇ ರಿಪೋರ್ಟ್ ಪ್ರಕಟಿಸಿದ ಪ್ರಸಿದ್ಧ ಮಾರ್ನಿಂಗ್ ಕನ್ಸಲ್ಟೆನ್ಸಿ
ನ್ಯೂಯಾರ್ಕ್(ಸೆ.04):ಜಾಗತಿಕ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಹಲವು ಸಮೀಕ್ಷೆಗಳಲ್ಲಿ ಮೊದಲ ಸ್ಥಾನ ಬಾಚಿಕೊಂಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ, ಅಭಿವೃದ್ಧಿ ವೇಗ, ಉತ್ತಮ ನಾಯಕತ್ವ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಮೀಕ್ಷೆಯಲ್ಲಿ ಮೋದಿ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಇದೀಗ ಮೋದಿಗೆ ಮತ್ತೊಂದು ಗರಿ ಸೇರಿಕೊಂಡಿದೆ. ವಿಶ್ವದ ಜನಪ್ರಿಯ ನಾಯಕರಲ್ಲಿ ಮೋದಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಮುಂದಿನ ಪ್ರಧಾನಿ ಯಾರಾಗಬೇಕು? ಮೋದಿಯೇ ನಂಬರ್ 1 ಆಯ್ಕೆ!
ಅಮೆರಿಕದ ಖ್ಯಾತ ಮಾರ್ನಿಂಗ್ ಕನ್ಸಲ್ಟೆನ್ಸಿ ಪೊಲಿಟಿಕಲ್ ಇಂಟೆಲಿಜೆನ್ಸಿ ನಡೆಸಿದ ಸಮೀಕ್ಷೆ ಮೋದಿಗೆ ಮತ್ತೊಂದು ಹಿರಿಮೆ ತಂದುಕೊಟ್ಟಿದೆ. ಮಾರ್ನಿಂಗ್ ಕನ್ಸೆಲ್ಟೆನ್ಸಿ ಸಂಸ್ಥೆ, ಜಾಗತಿಕ ನಾಯಕರ ಅನುಮೋದನೆ ಟ್ರಾಕರ್ ರೇಟಿಂಗ್ ಪರೀಕ್ಷಿಸಿದೆ. ಈ ಪರೀಕ್ಷೆಯಲ್ಲಿ ಮೋದಿಗೆ ಶೇಕಡಾ 70ರಷ್ಟು ಮಂದಿ ಅನುಮೋದನೆ ನೀಡಿದ್ದಾರೆ. ಇದರೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಾಗತಿಗ ಬೆಳವಣಿಗೆ, ಕೊರೋನಾ, ಆರ್ಥಿಕ ಹೊಡೆತ, ಅಭಿವೃದ್ಧಿ , ನಾಯಕತ್ವ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸಮೀಕ್ಷೆ ನಡೆಸಲಾಗಿದೆ. ಮೇ-ಜೂನ್ ತಿಂಗಳಲ್ಲಿ ಕೊರೋನಾ ಹೊಡೆತವನ್ನು ನಿಭಾಯಿಸಿ ನಾಯಕರ ಪೈಕಿ ಮೋದಿ ಶೇಕಡಾ 66 ಜಾಗತಿಕ ಅನುಮೋದನೆ ರೇಟಿಂಗ್‌ನೊಂದಿಗೆ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಇದೀಗ ಶೇಕಡಾ 70 ರಷ್ಟು ರೇಟಿಂಗ್‌ನೊಂದಿಗೆ ಮತ್ತೆ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ನಾಯಕರ ಜಾಗತಿಕ ಅನೋದನೆ ಟ್ರಾಕರ್ ರೇಟಿಂಗ್ ಪರೀಕ್ಷಿಸಿದೆ. ಪ್ರತಿ ದಿನ 11,000 ವಯಸ್ಕರನ್ನು ಸಂದರ್ಶಿಸಿ ಮಾಹಿತಿ ಕಲೆಹಾಕಿದೆ. ಬಳಿಕ ವರದಿ ಪ್ರಕಟಿಸಿದೆ.
ಜಾಗತಿಕ ನಾಯಕರ ಅನುಮೋದನೆ ಟ್ರಾಕರ್ ರೇಟಿಂಗ್:
ನರೇಂದ್ರ ಮೋದಿ(ಭಾರತ): 70%
ಲೋಪೆಜ್ ಒಬ್ರಡಾರ್(ಮೆಕ್ಸಿಕೋ): 64%
ಡ್ರ್ಯಾಗಿ(ಇಟಲಿ): 63%
ಮರ್ಕೆಲ್(ಜರ್ಮನಿ): 52%
ಜೋ ಬೈಡನ್(ಅಮೆರಿಕ): 48%
ಸ್ಕಾಟ್ ಮಾರಿಸನ್(ಆಸ್ಟ್ರೇಲಿಯಾ): 48%
ಜಸ್ಟಿನ್ ಟ್ರುಡೆವ್(ಕೆನಡಾ): 45%
ಬೊರಿಸ್ ಜಾನ್ಸನ್(ಯುಕೆ): 41%
ಜೈರ್ ಬೊಲ್ಸಾನಾರೋ(ಬ್ರೆಜಿಲ್): 39%
ಮೂನ್ ಜೈಇನ್(ಸೌಥ್ ಕೊರಿಯಾ): 38%
ಪೆಡ್ರೋ ಸ್ಯಾಂಚೆಜ್(ಸ್ಪೇನ್): 35%
ಇಮ್ಯಾನ್ಯುಯೆಲ್ ಮಾರ್ಕೊನ್(ಫ್ರಾನ್ಸ್): 34%
ಯೋಶಿಧ ಸುಗಾ(ಜಪಾನ್): 25%
