* ಲೋಕಸಭಾ ಚುನಾವಣೆಗೆ ಇನ್ನೂ 3 ವರ್ಷ ಬಾಕಿ* ಇಂಡಿಯಾ ಟುಡೇ ಸಮೂಹವು ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆ ಜನರ ಅಭಿಪ್ರಾಯ* ಮುಂದಿನ ಪ್ರಧಾನಿಯಾಗಿ ಮೋದಿಯೇ ಮೊದಲ ಆಯ್ಕೆ

ನವದೆಹಲಿ(ಆ.17): ಲೋಕಸಭಾ ಚುನಾವಣೆಗೆ ಇನ್ನೂ 3 ವರ್ಷ ಬಾಕಿ ಇರುವಾಗಲೇ ಇಂಡಿಯಾ ಟುಡೇ ಸಮೂಹವು ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ‘ಮೂಡ್ ಆಫ್ ದ ನೇಷನ್’ ಹೆಸರಲ್ಲಿ ದೇಶವ್ಯಾಪಿ ಸಮೀಕ್ಷೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶೇ.24ರಷ್ಟು ಜನರ ಬೆಂಬಲ ಪಡೆಯುವ ಮೂಲಕ ನಂ.1 ಆಗಿ ಹೊರಹೊಮ್ಮಿದ್ದಾರೆ. ಅಚ್ಚರಿ ಎಂದರೆ ಎರಡನೇ ಸ್ಥಾನದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇದ್ದಾರೆ. ಅವರಿಗೆ ಶೇ.11ರಷ್ಟು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಶೇ.10, ದೆಹಲಿ ಸಿಎಂ ಕೇಜ್ರಿವಾಲ್, ಮಮತಾ ತಲಾ ಶೇ.8, ಅಮಿತ್ ಶಾ ಶೇ.7, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾಗೆ ಶೇ.4ರಷ್ಟು ಬೆಂಬಲ ಸಿಕ್ಕಿದೆ.