Asianet Suvarna News Asianet Suvarna News

ವರ್ಷದ ಮೊದಲ ಮನ್‌ ಕೀ ಬಾತ್‌ನಲ್ಲಿ ಮೋದಿ ಮಾತು: ನಾರಿ ಶಕ್ತಿಗೆ ಶ್ಲಾಘನೆ

"ಸ್ವಚ್ಛ ದೇವಾಲಯ" ಅಭಿಯಾನದಲ್ಲಿ ಜನರ ಬೆಂಬಲವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಗಣರಾಜ್ಯೋತ್ಸವ 2024 ರ ಪರೇಡ್‌ನಲ್ಲಿ ಮಹಿಳಾ ಪಡೆಗಳು ನೀಡಿದ ಕೊಡುಗೆಗಾಗಿಯೂ ಹರ್ಷ ವ್ಯಕ್ತಪಡಿಸಿದ್ದಾರೆ.

pm narendra modi addresses 109th mann ki baat programme ash
Author
First Published Jan 28, 2024, 12:44 PM IST

ನವದೆಹಲಿ (ಜನವರಿ 28, 2024): ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ನ 109ನೇ ಆವೃತ್ತಿ ಪ್ರಸಾರವಾಗಿದೆ. ಭಾಷಣದ ಆರಂಭದಲ್ಲಿ ಪ್ರಧಾನಿ ಮೋದಿ 75ನೇ ಗಣರಾಜ್ಯೋತ್ಸವ ಸಮಾರಂಭದ ಕುರಿತು ಮಾತನಾಡಿದ್ದು, ಅಲ್ಲದೆ, ಸುಪ್ರೀಂ ಕೋರ್ಟ್ ಕೂಡ 75 ವರ್ಷಗಳನ್ನು ಪೂರೈಸಿದೆ ಎಂದು ಹೇಳಿದರು. ಹಾಗೂ, ಭಗವಾನ್ ರಾಮ ಮತ್ತು ಅಯೋಧ್ಯೆಯಲ್ಲಿನ ಮಂದಿರವು ಜನರ ಹೃದಯವನ್ನು ಹೇಗೆ ಮುಟ್ಟಿದೆ ಎಂಬುದರ ಕುರಿತೂ ಅವರು ಮಾತನಾಡಿದರು.

"ಸ್ವಚ್ಛ ದೇವಾಲಯ" ಅಭಿಯಾನದಲ್ಲಿ ಜನರ ಬೆಂಬಲವನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಗಣರಾಜ್ಯೋತ್ಸವ 2024 ರ ಪರೇಡ್‌ನಲ್ಲಿ ಮಹಿಳಾ ಪಡೆಗಳು ನೀಡಿದ ಕೊಡುಗೆಗಾಗಿಯೂ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವರ್ಷ ಹೆಚ್ಚಿನ ಸಂಖ್ಯೆಯ ಮಹಿಳಾ ಸೈನಿಕರು ಪರೇಡ್‌ನಲ್ಲಿ ಭಾಗವಹಿಸಿದ್ದರು ಎಂದೂ ಮನ್ ಕೀ ಬಾತ್‌ನಲ್ಲಿ ಖುಷಿ ಪಟ್ಟಿದ್ದಾರೆ. ತಮ್ಮ ಭಾಷಣದಲ್ಲಿ, ಕ್ರೀಡೆ, ರಕ್ಷಣಾ ಪಡೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ಶಕ್ತಿಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಸ್ವಸಹಾಯ ಗುಂಪುಗಳಲ್ಲಿ ಮಹಿಳೆಯರ ಕೊಡುಗೆಯನ್ನು ಸಹ  ಪ್ರಸ್ತಾಪಿಸಿದರು.

ಮೋದಿ ‘ಮನ್‌ ಕೀ ಬಾತ್‌’ ರಾಮಾಯಣ, ಮಹಾ ಭಾರತ ಧಾರಾವಾಹಿಗಿಂತ ಜನಪ್ರಿಯ: ತ್ರಿಪುರಾ ಸಿಎಂ

ಈ ಮಧ್ಯೆ, ಪದ್ಮ ಪ್ರಶಸ್ತಿ ವಿಜೇತರ ಬಗ್ಗೆ ಹಾಗೂ ಅಂಗಾಂಗ ದಾನಿಗಳ ಬಗ್ಗೆಯೂ ಮೋದಿ ಮಾತನಾಡಿದ್ದಾರೆ. ಅಲ್ಲದೆ, ಆಯುರ್ವೇದ, ಸಿದ್ಧ ಔಷಧ ಪದ್ಧತಿಯು ಜನರಿಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದರ ಕುರಿತು ಮಾತನಾಡಿದರು. ಇನ್ನೊಂದೆಡೆ, ಜನವರಿ 25 ರಂದು ಆಚರಿಸಲಾದ ರಾಷ್ಟ್ರೀಯ ಮತದಾರರ ದಿನದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ 96 ಕೋಟಿ ಅರ್ಹ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಅಲ್ಲದೆ, ಮೊದಲ ಬಾರಿಗೆ ಮತ ಹಾಕಲು ಇಚ್ಛಿಸುವ ಯುವ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವಂತೆಯೂ ಪ್ರಧಾನಿ ಮೋದಿ ಮನವಿ ಮಾಡಿದರು.

ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರ ಜನ್ಮದಿನವಾದ ಇಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಹಾಗೂ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನದಂದು ಪ್ರಧಾನಿ ಮೋದಿ ಅವರನ್ನು ಸ್ಮರಿಸಿದರು. ಅವರ ಶೌರ್ಯ ಮತ್ತು ಧೈರ್ಯ ಮತ್ತು ಭಾರತದ ಸಶಸ್ತ್ರ ಪಡೆಗಳಿಗೆ ಅವರ ಕೊಡುಗೆಯನ್ನು ಶ್ಲಾಘಿಸಿದರು.

ಮನ್‌ ಕೀ ಬಾತ್‌ನಲ್ಲಿ ಬೆಂಗಳೂರು ಫಿಟ್ನೆಸ್‌ ಗುರು ಬಗ್ಗೆ ಮೋದಿ ಪ್ರಸ್ತಾಪ

ತಮ್ಮ ಭಾಷಣದಲ್ಲಿ, ಪ್ರಧಾನಿ ಮೋದಿ ಖೇಲೋ ಇಂಡಿಯಾ ಯೂತ್ ಗೇಮ್ಸ್ ಕುರಿತು ಮಾತನಾಡಿದ್ದು,  ಕ್ರೀಡಾಪಟುಗಳಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಮತ್ತು ಅವರ ಪ್ರತಿಭೆಯನ್ನು ಪೋಷಿಸಲು ಹೇಗೆ ಅವಕಾಶವನ್ನು ನೀಡಲಾಗುತ್ತಿದೆ ಎಂಬುದನ್ನು ಎತ್ತಿ ತೋರಿಸಿದರು.

ಇನ್ನೊಂದೆಡೆ, 2024 ರ ಜನವರಿ 29 ರಂದು ಬೆಳಿಗ್ಗೆ 11 ಗಂಟೆಗೆ “ಪರೀಕ್ಷಾ ಪೇ ಚರ್ಚಾ” ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಘೋಷಿಸಿದ್ದು,  ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ..

108th Mann Ki Baat: 'ರಾಮ ಭಜನೆ' ಮಾಡಲು ಮೋದಿ ಮನವಿ; 108 ಸಂಖ್ಯೆಯ ಮಹತ್ವದ ಬಗ್ಗೆ ಪ್ರಧಾನಿ ಹೇಳಿದ್ದೀಗೆ..

Follow Us:
Download App:
  • android
  • ios