Asianet Suvarna News Asianet Suvarna News

ಉಕ್ರೇನ್‌ ಯುದ್ಧ ಆರಂಭದ ಬಳಿಕ ಇಂದು ರಷ್ಯಾಕ್ಕೆ ಪ್ರಧಾನಿ ಮೋದಿ ಪ್ರಥಮ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಿಂದ ನಾಲ್ಕು ದಿನಗಳ ರಷ್ಯಾ ಹಾಗೂ ಆಸ್ಟ್ರಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾ ಸಮರ ಆರಂಭಿಸಿದ ಬಳಿಕ ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. 
 

PM Modis Visit to Russia Breathing New Life into a Time Tested Partnership gvd
Author
First Published Jul 8, 2024, 6:26 AM IST

ನವದೆಹಲಿ (ಜು.08): ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಿಂದ ನಾಲ್ಕು ದಿನಗಳ ರಷ್ಯಾ ಹಾಗೂ ಆಸ್ಟ್ರಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾ ಸಮರ ಆರಂಭಿಸಿದ ಬಳಿಕ ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಆಹ್ವಾನದ ಮೇಲೆ ತೆರಳುತ್ತಿರುವ ಅವರು ಸೋಮವಾರ, ಮಂಗಳವಾರ ರಷ್ಯಾದಲ್ಲಿ ಹಲವು ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬುಧವಾರ ಆಸ್ಟ್ರಿಯಾಕ್ಕೆ ತೆರಳಲಿರುವ ಪ್ರಧಾನಿ, ಗುರುವಾರದವರೆಗೂ ಅಲ್ಲಿರಲಿದ್ದಾರೆ. 46 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾ ಪ್ರವಾಸ ಕೈಗೊಳ್ಳುತ್ತಿರುವುದು ಇದೇ ಮೊದಲು.

ರಷ್ಯಾ- ಭಾರತ ಮಾತುಕತೆ: ರಷ್ಯಾ ಪ್ರವಾಸದ ಸಂದರ್ಭದಲ್ಲಿ ಪುಟಿನ್‌ ಅವರ ಜತೆಗೂಡಿ ಭಾರತ ಹಾಗೂ ರಷ್ಯಾ ವಾರ್ಷಿಕ ಶೃಂಗ ಸಭೆಯಲ್ಲಿ ಮೋದಿ ಅವರು ಭಾಗವಹಿಸಲಿದ್ದಾರೆ. ಉಭಯ ದೇಶಗಳ ಬಾಂಧವ್ಯದ ಕುರಿತು ವಿಸ್ತೃತ ಸಮಾಲೋಚನೆ ನಡೆಸಲಿರುವ ಅವರು, ಸಮಕಾಲೀನ ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಕುರಿತು ಅತ್ಯುನ್ನತ ಮಟ್ಟದ ಚರ್ಚೆಯನ್ನು ನಡೆಸಲಿದ್ದಾರೆ. ಮೋದಿ ಅವರ ಭೇಟಿ ಅತ್ಯಂತ ಮಹತ್ವದ್ದು ಹಾಗೂ ಸುಸಜ್ಜಿತವಾಗಿರಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ರಷ್ಯಾ ಅಧ್ಯಕ್ಷರ ಅಧಿಕೃತ ನಿವಾಸ ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ತಿಳಿಸಿದ್ದಾರೆ. 2019ರಲ್ಲಿ ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದರು. ಪೂರ್ವ ರಷ್ಯಾದಲ್ಲಿರುವ ವ್ಲಾದಿವೋಸ್ಟೊಕ್‌ನಲ್ಲಿ ಆರ್ಥಿಕ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದರು.

ಅಕ್ಕಿ ಕೊಡ್ತೇವೆ, ಆದರೆ ಖರೀದಿಗೆ ರಾಜ್ಯದಲ್ಲಿ ಹಣವೇ ಇಲ್ಲ: ಪ್ರಲ್ಹಾದ್ ಜೋಶಿ

ಭ್ರಷ್ಟಾಚಾರ ನಿರ್ಮೂಲನೆಗೆ ಭಾರತ ಸೇರಿ ಬ್ರಿಕ್ಸ್‌ ರಾಷ್ಟ್ರಗಳ ಸಹಕಾರ: ಆಧುನಿಕ ಡಿಜಿಟಲ್‌ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತ ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಬದ್ಧವಾಗಿದೆ. ಈ ಬಗ್ಗೆ ತನ್ನ ಸಹೋದರ(ಬ್ರಿಕ್ಸ್‌) ರಾಷ್ಟ್ರಗಳ ಸಹಕಾರದಲ್ಲಿ ಮುನ್ನಡೆಯುವುದಾಗಿ ಭಾರತದ ರಾಜತಾಂತ್ರಿಕ ನಿಯೋಗ ಬ್ರಿಕ್ಸ್‌ ಶೃಂಗದಲ್ಲಿ ಒತ್ತಿ ಹೇಳಿದೆ. ಇದೇ ವೇಳೆ ಭಾರತ ಶಾಂತಿಪ್ರಿಯ ರಾಷ್ಟ್ರ. ಯಾವುದೇ ರೀತಿಯ ಅಪರಾಧವನ್ನು ಸಹಿಸುವುದಿಲ್ಲ, ವಸುಧೈವ ಕುಟುಂಬ ಎಂಬ ಪರಿಕಲ್ಪನೆಯಲ್ಲಿ ಜೀವನ ಪದ್ಧತಿ ನಡೆಯುತ್ತಿದೆ ಎಂಬುದನ್ನು ಬ್ರಿಕ್ಸ್‌ ಸಮುದಾಯಕ್ಕೆ ಸ್ಪಷ್ಟಪಡಿಸಿದೆ.

ರಿಪಬ್ಲಿಕ್‌ ಆಫ್ ರಷ್ಯಾದ ಸೈಂಟ್‌ ಪೀಟರ್ಸ್‌ ಬರ್ಗ್‌ನಲ್ಲಿ ಬುಧವಾರ ಮುಕ್ತಾಯಗೊಂಡ ಎರಡು ದಿನಗಳ ಬ್ರಿಕ್ಸ್‌ ಪ್ರಾಸಿಕ್ಯೂಷನ್‌ ಸರ್ವಿಸಸ್‌ ಮುಖ್ಯಸ್ಥರ ಶೃಂಗ ಸಭೆಯಲ್ಲಿ ಭಾರತ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಬ್ರಿಕ್ಸ್‌ ರಾಷ್ಟ್ರಗಳ ರಾಜತಾಂತ್ರಿಕರ ಜೊತೆಗಿನ ದ್ವಿಪಕ್ಷೀಯ ಒಡಂಬಡಿಕೆ ವೇಳೆ ಭಾರತದ ರಾಜತಾಂತ್ರಿಕ ನಿಯೋಗದ ನೇತೃತ್ವ ವಹಿಸಿದ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ಈ ವಿಷಯ ಮಂಡಿಸಿದ್ದಾರೆ. ಭಾರತದ ಈ ಪ್ರಸ್ತಾಪಕ್ಕೆ ಬ್ರಿಕ್ಸ್‌ ರಾಷ್ಟ್ರಗಳು ಸಹಮತ ಸೂಚಿಸಿವೆ.

ಡೆಂಘೀ ಆಯ್ತು, ಈಗ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ

ಕ್ರಿಮಿನಲ್ಸ್‌ ಪತ್ತೆಗೆ ಡಿಜಿಟಲ್‌ ನೆರವು: ಅಪರಾಧಿಗಳನ್ನು ಪತ್ತೆಮಾಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ನೆರವಿಗೆ ಡಿಜಿಟಲ್‌ ವ್ಯವಸ್ಥೆ ಪೂರಕವಾಗಿದೆ. ಡಿಜಿಟಲ್‌ ಪರಿಹಾರಗಳಿಗೆ ಹೊಂದಿಕೊಳ್ಳುವಂತೆ ಕಾನೂನನ್ನು ರೂಪಿಸಿಕೊಳ್ಳಬೇಕು. ಇವುಗಳ ಬಗ್ಗೆ ಮುಂದಡಿ ಇರಿಸಲು ಬ್ರಿಕ್ಸ್‌ ರಾಜತಾಂತ್ರಿಕ ಶೃಂಗ ಸಭೆ ಉತ್ತಮ ವೇದಿಕೆಯಾಗಿದೆ ಎಂದು ನಟರಾಜ್‌ ಅಭಿಪ್ರಾಯಪಟ್ಟರು. ಕೋರ್ಟ್‌ಗಳಲ್ಲಿ ಪರಿಣಾಮಕಾರಿ ತಂತ್ರಜ್ಞಾನ: ಭಾರತದ ಕಾನೂನು ಜಾರಿಯಲ್ಲಿ ಆಧುನಿಕ ಡಿಜಿಟಲ್‌ ವ್ಯವಸ್ಥೆ ಕುರಿತು ವಿಚಾರ ಮಂಡಿಸಿದ ಕೆ.ಎಂ.ನಟರಾಜ್‌, ಹಲವು ದಶಕಗಳಿಂದ ಭಾರತದಲ್ಲಿ ಕಾನೂನು ವ್ಯವಸ್ಥೆ ಗಮನಾರ್ಹ ತಾಂತ್ರಿಕ ಪ್ರಗತಿ ಕಂಡಿದೆ. ಡಿಜಿಟಲ್‌ ಡೇಟಾಬೇಸ್‌ಗಳ ಪರಿಚಯದಿಂದ ವಿಡಿಯೋ ಕಾನ್ಫರೆನ್ಸ್‌ನ ಪರಿಣಾಮಕಾರಿ ಅನುಷ್ಠಾನವರೆಗೆ ಪ್ರಗತಿಯಾಗಿದೆ. ಅಲ್ಲದೆ ನ್ಯಾಯಾಂಗದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಸುಧಾರಣೆಗೆ ಕಾರಣವಾಗಿದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios