ಆಯೋಧ್ಯೆ ಭೇಟಿ ವೇಳೆ ಪ್ರಧಾನಿ ಮೋದಿ ದಿಢೀರ್ ಆಗಿ ಉಜ್ವಲ ಫಲಾನುಭವಿ ಮನೆಗೆ ಭೇಟಿ ನೀಡಿದ್ದರು. ಚಹಾ ಸೇವಿಸಿದ ಮೋದಿ ಮಾತುಕತೆ ನಡೆಸಿದ ಮೋದಿ ಇದೀಗ ಮೀರಾ ಕುಟುಂಬಕ್ಕೆ ಉಡುಗೊರೆ ಕಳುಹಿಸಿದ್ದಾರೆ. ಜೊತೆಗೆ ಪತ್ರವನ್ನೂ ಬರೆದಿದ್ದಾರೆ. 

ನವದೆಹಲಿ(ಜ.03) ಆಯೋಧ್ಯ ಶ್ರೀರಾಮ ಮಂದಿರ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಆಯೋಧ್ಯೆ ರೈಲು ನಿಲ್ದಾಣ, ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಆಯೋಧ್ಯೆ ತೆರಳಿದ ಪ್ರಧಾನಿ ಮೋದಿ ದಿಢೀರ್ ಉಜ್ವಲ ಫಲಾನುಭವಿ ಮೀರಾ ಮಾಂಜಿ ಮನೆಗೆ ಭೇಟಿ ನೀಡುವ ಮೂಲಕ ಅಚ್ಚರಿ ನೀಡಿದ್ದರು. ಇದೀಗ ಪ್ರಧಾನಿ ಮೋದಿ ಮೀರಾ ಮಾಂಜಿ ಮನೆಗೆ ಉಡುಗೊರೆ ಹಾಗೂ ಪತ್ರ ಕಳುಹಿಸುವ ಮೂಲಕ ಮತ್ತೊಂದು ಅಚ್ಚರಿ ನೀಡಿದ್ದಾರೆ. ಮೀರಾ ಮಕ್ಕಳಿಗೆ ಉಡುಗೊರೆ ಕಳುಹಿಸಿರುವ ಮೋದಿ, ಮೀರಾ ಮಾಂಜಿಗೆ ಪತ್ರದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಚಹಾ ಕಪ್‌ಗಳ ಸೆಟ್, ಮಕ್ಕಳಿಗೆ ಡ್ರಾವಿಂಗ್ ಬುಕ್, ಕಲರ್ ಪೆನ್ಸಿಲ್ ಸೇರಿದಂತೆ ಹಲವು ಉಡುಗೊರೆಗಳನ್ನು ಪ್ರಧಾನಿ ಮೋದಿ ಮೀರಾ ಮಾಂಜಿ ಮನೆಗೆ ಕಳುಹಿಸಿದ್ದಾರೆ. ಭಾರತದ ಪ್ರಧಾನಿ, ವಿಶ್ವದ ಅತ್ಯಂತ ಜನಪ್ರಿಯ ನಾಯಕ, ದೇಶ ವಿದೇಶಗಳ ಗಣ್ಯರ ಜೊತೆಗೆ ಸಭೆಗಳ ಮೂಲಕ ಸದಾ ಬ್ಯೂಸಿಯಾಗಿರುವ ಮೋದಿ ತಮ್ಮ ಮನೆಗೆ ಆಗಮಿಸಿದ ಸಂಸತದಲ್ಲಿ ಮೀರಾ ಮಾಂಜಿ ಕುಟುಂಬ ತೇಲಾಡಿತ್ತು. ಇದೀಗ ಮೋದಿಯ ಉಡುಗೊರೆ ಹಾಗೂ ಪತ್ರ ಮೀರಾ ಕುಟುಂಬದ ಸಂತಸ ಇಮ್ಮಡಿಗೊಳಿಸಿದೆ.

ಆಯೋಧ್ಯೆ ಭೇಟಿ ವೇಳೆ ಉಜ್ವಲ ಫಲಾನುಭವಿ ಮನೆಗೆ ತೆರಳಿ ಚಹಾ ಸೇವಿಸಿದ ಪ್ರಧಾನಿ ಮೋದಿ!

ಯೋಧ್ಯೆಗೆ ಶನಿವಾರ ಭೇಟಿ ನೀಡಿದಾಗ ಮೀರಾ ಮಾಂಝಿ ಎಂಬ ಬಡ ಮಹಿಳೆಯ ಮನೆಗೆ ದಿಢೀರ್‌ ಭೇಟಿ ನೀಡಿ ಅಚ್ಚರಿ ಮೂಡಿಸಿದರು. ಅಲ್ಲದೆ, ಮೀರಾಗೆ ಕುಟುಂಬ ಸಮೇತರಾಗಿ ಜ.22ರಂದು ನಡೆಯಲಿರುವ ರಾಮಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗಲು ಆಹ್ವಾನ ನೀಡಿದ್ದರು.

Scroll to load tweet…

ಮೀರಾ ಅವರು ಉಜ್ವಲಾ ಯೋಜನೆಯ ‘ಫಲಾನುಭವಿ ನಂ.10 ಕೋಟಿ’ ಆಗಿದ್ದಾರೆ. ಅರ್ಥಾತ್‌ ಉಜ್ವಲಾ ಎಲ್‌ಪಿಜಿ ಯೋಜನೆ 10 ಕೋಟಿ ಫಲಾನುಭವಿಗಳಿಗೆ ತಲುಪಿದ್ದು, 10ನೇ ಕೋಟಿಯ ಫಲಾನುಭವಿ ಮೀರಾ ಆಗಿದ್ದಾರೆ. ಹೀಗಾಗಿ ಮೋದಿ ಅವರು ಮೀರಾರನ್ನು ಭೇಟಿಯಾದರು. ಇದೇ ವೇಳೆ ಜನಸಾಮಾನ್ಯರಂತೆ ಮೋದಿ ಮಾತುಕತೆ ನಡೆಸಿದ್ದರು. 

ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಬಾಬರ್ ಹುಟ್ಟೂರು ಸೇರಿ 153 ದೇಶದ ಪವಿತ್ರ ನೀರು ಬಳಕೆ!

ಮೋದಿಗೆ ಚಹಾ ಕೊಟ್ಟ ಮೀರಾ:
ಮೋದಿ ಭೇಟಿಯ ಅನುಭವ ಹಂಚಿಕೊಂಡ ಮೀರಾ, ‘ಮೋದಿ ತಮ್ಮ ಮನೆಗೆ ಬರುತ್ತಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ. ಕೇವಲ 1 ತಾಸಿನ ಹಿಂದಷ್ಟೇ ನಮ್ಮ ರಾಜಕೀಯ ನಾಯಕರೊಬ್ಬರು ಬರುತ್ತಾರೆ ಎಂದು ಗೊತ್ತಾಯಿತು. ಅದು ನರೇಂದ್ರ ಮೋದಿ ಎಂದು ಗೊತ್ತಾದಾಗ ಅಚ್ಚರಿ ಆಯಿತು. ಮೋದಿ ಅವರು ಉಜ್ವಲ ಯೋಜನೆಯಲ್ಲಿ ನಮಗೆ ಸಿಗುತ್ತಿರುವ ಪ್ರಯೋಜನಗಳ ಬಗ್ಗೆ ಕೇಳಿದರು. ಅಲ್ಲದೆ, ‘ಇಂದು ಏನು ಅಡುಗೆ ಮಾಡಿರುವೆ?’ ಎಂದರು ನಾನು ಅನ್ನ, ದಾಲ್ ಮತ್ತು ತರಕಾರಿ ಪಲ್ಯ ಮತ್ತು ಚಹಾ ಮಾಡಿದ್ದೇನೆ ಎಂದು ಹೇಳಿದೆ. ಅದಕ್ಕೆ ಮೋದಿ ಅವರು, ‘ಬಹಳ ಥಂಡಿ ಇದೆ. ಒಂದು ಕಪ್‌ ಚಹಾ ಕೊಡು’ ಎಂದರು. ‘ನೀನು ಮಾಡಿದ ಚಹಾದ ಸಿಹಿ ಸಲ್ಪ ಜಾಸ್ತಿ ಇದೆ’ ಎಂದರು. ನಾನು ಮಾಡೋ ಚಹಾನೇ ಹೀಗೆ ಎಂದೆ’ ಎಂದು ವಿವರಿಸಿದರು.