ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಯೋಧ್ಯೆಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಮೋದಿ ಉಜ್ವಲ ಫಲಾನುಭವಿ ಮನೆಗೆ ತೆರಳಿ ಚಹಾ ಸೇವಿಸಿದ ಘಟನೆ ನಡೆದಿದೆ.
ಆಯೋಧ್ಯೆ(ಡಿ.30) ಶ್ರೀರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿದೆ. ಇದಕ್ಕೂ ಮೊದಲು ಆಯೋಧ್ಯೆಯ ರೈಲು ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಹಲವು ಯೋಜನೆಗಳ ಉದ್ಗಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಆಯೋಧ್ಯೆಗೆ ಭೇಟಿ ನೀಡಿದ್ದಾರೆ. ಈಗಾಗಲೇ ರೈಲು ನಿಲ್ದಾಣ, ವಂದೇ ಭಾರತ್ ರೈಲು ಸೇರಿದಂತೆ ಹಲವು ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಇದರ ನಡುವೆ ಪ್ರಧಾನಿ ಮೋದಿ, ಉಜ್ವಲ ಫಲಾನುಭವಿ ಮನೆಗೆ ತೆರಳಿ ಚಹಾ ಸೇವಿಸಿ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯ 10ನೇ ಕೋಟಿ ಫಲಾನುಭವಿಗಳಾಗಿರುವ ಮಹಿಳೆ ಮನೆಗೆ ತೆರಳಿದ್ದಾರೆ. ದಿಢೀರ್ ಪ್ರಧಾನಿ ಮೋದಿಯೇ ಮನೆಗೆ ಆಗಮಿಸಿ ಚಹಾ ಸೇವಿಸಿರುವುದು ಫಲಾನುಭವಿ ಸಂತಸ ಇಮ್ಮಡಿಗೊಳಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅರ್ಹ ಕುಟುಂಬಕ್ಕೆ ಎಲ್‌ಪಿಜಿ ಸಿಲಿಂಡರ್, ಗ್ಯಾಸ್ ಸ್ಟೌ ಸೇರಿದಂತೆ ಎಲ್ಲಾ ಸೌಲಭ್ಯ ನೀಡಲಾಗುತ್ತದೆ. 10ನೇ ಕೋಟಿ ಫಲಾನುಭವಿಯಾಗಿರುವ ಈ ಮಹಿಳೆ ಮನೆಗೆ ತೆರಳಿದ ಮೋದಿ, ಉಜ್ವಲ ಯೋಜನೆಯಡಿ ಪಡೆದ ಗ್ಯಾಸ್ ಮೂಲಕ ಚಹಾ ತಯಾರಿಸಲಾಗಿದೆ. ಫಲಾನುಭವಿ ಮನೆಯಲ್ಲಿ ಚಹಾ ಸೇವಿಸಿದ ಮೋದಿ ಬಳಿಕ ತಮ್ಮ ಅಧಿಕೃತ ಕಾರ್ಯಕ್ರಮಕ್ಕೆ ತೆರಳಿದ್ದಾರೆ.
ಡಿ.30ರಂದು ಮಂಗಳೂರು-ಮಡ್ಗಾಂವ್ ‘ವಂದೇ ಭಾರತ್’ಗೆ ಪ್ರಧಾನಿ ಮೋದಿ ಹಸಿರು ನಿಶಾನೆ!
ಆಯೋಧ್ಯೆ ಭೇಟಿಯಲ್ಲಿ ಪ್ರಧಾನಿ ಮೋದಿ, 15,700 ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈಗಾಗಲೇ ಆಯೋಧ್ಯೆಯ ನವೀಕೃತ ರೈಲು ನಿಲ್ದಾಣವನ್ನು ಮೋದಿ ಉದ್ಘಾಟಿಸಿದ್ದಾರೆ. ಇದೇ ವೇಳೆ ಹೊಸ ಅಮೃತ್ ಭಾರತ್ ರೈಲುಗಳು ಮತ್ತು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಅಯೋಧ್ಯೆ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗಾಗಿ ಸುಮಾರು 11,100 ಕೋಟಿ ರೂಪಾಯಿ. ಮೊತ್ತದ ಯೋಜನೆಗಳು ಮತ್ತು ಉತ್ತರ ಪ್ರದೇಶದಾದ್ಯಂತ ಇತರ ಯೋಜನೆಗಳಿಗೆ ಸಂಬಂಧಿಸಿದ ಸುಮಾರು 4,600 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳು ಸೇರಿವೆ.
ಅಯೋಧ್ಯೆಯಲ್ಲಿ ಆಧುನಿಕ ವಿಶ್ವ ದರ್ಜೆಯ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು, ಸಂಪರ್ಕ ಸುಧಾರಿಸುವುದು ಮತ್ತು ನಗರದ ಶ್ರೀಮಂತ ಇತಿಹಾಸ ಮತ್ತು ಪರಂಪರೆಗೆ ಅನುಗುಣವಾಗಿ ಅದರ ನಾಗರಿಕ ಸೌಲಭ್ಯಗಳನ್ನು ನವೀಕರಿಸುವುದು ಪ್ರಧಾನ ಮಂತ್ರಿ ಅವರ ದೂರದೃಷ್ಟಿಯಾಗಿದೆ. ಈ ದೂರದೃಷ್ಟಿಗೆ ಪೂರಕವಾಗಿ, ನಗರದಲ್ಲಿ ಹೊಸ ವಿಮಾನ ನಿಲ್ದಾಣ, ಹೊಸ ಪುನರಾಭಿವೃದ್ಧಿ ರೈಲ್ವೆ ನಿಲ್ದಾಣ, ಹೊಸ ನಗರ ರಸ್ತೆಗಳು ಮತ್ತು ಇತರ ನಾಗರಿಕ ಮೂಲಸೌಕರ್ಯಗಳನ್ನು ಉದ್ಘಾಟಿಸಲಾಗುತ್ತಿದೆ. ಇದಲ್ಲದೆ, ಅಯೋಧ್ಯೆ ಮತ್ತು ಸುತ್ತಮುತ್ತಲ ನಾಗರಿಕ ಸೌಲಭ್ಯಗಳ ಸೌಂದರ್ಯೀಕರಣ ಮತ್ತು ನವೀಕರಣಕ್ಕೆ ಕೊಡುಗೆ ನೀಡುವ ಹಲವಾರು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮೋದಿ ಮತ್ತೆ ಪ್ರಧಾನಿ ಆಗುವುದನ್ನ ಯಾರಿಂದಲೂ ತಪ್ಪಿಸಲಾಗಲ್ಲ: ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್ ಭವಿಷ್ಯ
