Asianet Suvarna News Asianet Suvarna News

ಕೊರೋನಾ ಸ್ಫೋಟ; ಕೇಂದ್ರ ಮಂತ್ರಿ ಮಂಡಲ ಸಭೆ ಕರೆದ ಪ್ರಧಾನಿ ಮೋದಿ!

ಕೊರೋನಾ ವೈರಸ್ 2ನೇ ಅಲೆ ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಹಲವು ಸುತ್ತಿನ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ, ರಾಜ್ಯಪಾಲರು, ಉನ್ನತ ಅಧಿಕಾರಿಗಳು, ತಜ್ಞರು ಸೇರಿದಂತೆ ಹಲವು ಸಭೆ ನಡೆಸಿದ್ದಾರೆ. ಇದೀಗ ಕೊರೋನಾ ಮಿತಿ ಮೀರುತ್ತಿರುವ ಕಾರಣ ಕೇಂದ್ರ ಮಂತ್ರಿ ಮಂಡಲ ಸಭೆ ಕರೆದಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

PM Modi will chair Union Council of Ministers meeting on Friday due to surge of Covid ckm
Author
Bengaluru, First Published Apr 29, 2021, 7:36 PM IST

ನವದೆಹಲಿ(ಏ.29): ಕೊರೋನಾ ವೈರಸ್ ಸ್ಥಿತಿಗತಿ, ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಸೇರಿದಂತೆ ಹಲವು ಮಹತ್ವದ ವಿಚಾರ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಭೆ ಕರೆದಿದ್ದಾರೆ. ನಾಳೆ(ಏ.30) ಬೆಳಗ್ಗೆ 11 ಗಂಟೆಗೆ ಕೇಂದ್ರ ಮಂತ್ರಿ ಮಂಡಲ ಸಭೆ ಕರೆದಿದ್ದಾರೆ. 

ಆಕ್ಸಿಜನ್ ಕೊರತೆಗೆ ಮೋದಿ ಪರಿಹಾರ; ಸರ್ಕಾರಿ ಆಸ್ಪತ್ರೆಗಳಲ್ಲಿ 551 ಉತ್ಪಾದಕ ಘಟಕ ಸ್ಥಾಪನೆ!

ವರ್ಚುವಲ್ ಮೀಟಿಂಗ್ ಮಾಡಲಿರುವ ಮೋದಿ, ದೇಶದ ಕೊರೋನಾ ವೈರಸ್ ಸ್ಥಿತಿಗತಿಗಳ ಕುರಿತ ಪರಿಶೀಲನೆ ನಡೆಸಲಿದ್ದಾರೆ. ಕೊರೋನಾ 2ನೇ ಅಲೆ ವಕ್ಕರಿಸಿದ ಬಳಿಕ ಕರೆದ ಮೊದಲ ಮಂತ್ರಿಮಂಡಲ ಸಭೆ ಇದಾಗಿದ್ದು, ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಕೊರೋನಾ ನಿರ್ವಹಿಸಲು ಸೇನೆ ಸಜ್ಜು, ತಯಾರಿ ಪರಿಶೀಲಿಸಿದ ಪಿಎಂ!...

ದೇಶದಲ್ಲಿನ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಭಾರತೀಯ ಸೇನಾ ಪಡೆ ಕೈಗೊಂಡಿರುವ ಕಾರ್ಯಗಳ ಕುರಿತು ಪ್ರಧಾನಿ ಮೋದಿ ಸಭೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಫಾರ್ಮಾ ಕಂಪನಿಗಳ ಜೊತೆ ಲಸಿಕೆ ಪೂರೈಕೆ ಕುರಿತು ಸಭೆ ನಡೆಸಲಾಗಿದೆ. ಇದೀಗ ಮಂತ್ರಿ ಮಂಡಲ ಸಭೆ ಈ ನಿಟ್ಟಿನಲ್ಲಿ ಮತ್ತಷ್ಟು ಮಹತ್ವ ಪಡೆದಿದೆ.

Follow Us:
Download App:
  • android
  • ios