ಪುಣೆ(ಡಿ.08): ಪ್ರಧಾನಿ ಮೋದಿ ವಿರೋಧಿ ಪಾಳೆಯದ ಪ್ರಮುಖ ಬಿಜೆಪಿ ನಾಯಕ ಅರುಣ್ ಶೌರಿ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆದರೆ ಭಿನ್ನಮತದ ಹೊರತಾಗಿಯೂ ಪ್ರಧಾನಿ ಮೋದಿ ಪುಣೆಯ ಆಸ್ಪತ್ರೆಗೆ ಭೇಟಿ ನೀಡಿ ಅರುಣ್ ಶೌರಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, ಇಂದು ಆಸ್ಪತ್ರೆಯಲ್ಲಿ ಅರುಣ್ ಶೌರಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾಗಿ ತಿಳಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿ ಅರುಣ್ ಶೌರಿ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ, ಆರೋಗ್ಯ ವಿಚಾರಿಸಿದ್ದಲ್ಲದೇ ಕೆಲವು ಹೊತ್ತು ಆತ್ಮೀಯ ಚರ್ಚೆಯೂ ನಡೆಸಿದರು.

ಇನ್ನು ತಮ್ಮ ವಿರೋಧಿ ಎಂದೇ ಹೇಳಲಾದ ಅರುಣ್ ಶೌರಿ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಮೋದಿ ಟೀಕೆ: ಸಿನ್ಹಾ ಆಯ್ತು, ಈಗ ಅರುಣ್ ಶೌರಿ ಸರದಿ

ಭಿನ್ನಮತವನ್ನು ಬದಿಗೊತ್ತಿ ಅರುಣ್ ಶೌರಿ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ಕೂಡ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.