Asianet Suvarna News Asianet Suvarna News

ನಾನು ಸಿಎಂ ಆದರೂ ಬದಲಾಗಲಿಲ್ಲ ಜನ ಸಾಮಾನ್ಯನಾಗೇ ಉಳಿದೆ: ಪ್ರಧಾನಿ ಮೋದಿ

ಮುಖ್ಯಮಂತ್ರಿಯಾದ ಮೇಲೆ ಈ ವ್ಯಕ್ತಿ ಬದಲಾಗುತ್ತಾರೆ ಎಂದು ಹಲವರು ಹೇಳಿದರು. ಆದರೆ ಮುಖ್ಯಮಂತ್ರಿಯಾದಾಗ ನಾನು ಬದಲಾಗಬಾರದು ಎಂದು ನಿರ್ಧರಿಸಿದೆ. ಬದಲಾಗಲಿಲ್ಲ. ಹೀಗಾಗಿ ಜನಸ್ನೇಹಿ ಯೋಜನೆ ಜಾರಿಗೆ ತಂದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

PM Modi told I have not changed even though i was CM I remain as common man akb
Author
First Published Apr 28, 2023, 9:27 AM IST

ಗಾಂಧಿನಗರ: ಮುಖ್ಯಮಂತ್ರಿಯಾದ ಮೇಲೆ ಈ ವ್ಯಕ್ತಿ ಬದಲಾಗುತ್ತಾರೆ ಎಂದು ಹಲವರು ಹೇಳಿದರು. ಆದರೆ ಮುಖ್ಯಮಂತ್ರಿಯಾದಾಗ ನಾನು ಬದಲಾಗಬಾರದು ಎಂದು ನಿರ್ಧರಿಸಿದೆ. ಬದಲಾಗಲಿಲ್ಲ. ಹೀಗಾಗಿ ಜನಸ್ನೇಹಿ ಯೋಜನೆ ಜಾರಿಗೆ ತಂದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

2003ರಲ್ಲಿ ತಾವು ಗುಜರಾತ್‌ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಸ್ವಾಗತ್‌ ಯೋಜನೆಗೆ (Swagat Yojana) 20 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಯೋಜನೆಗಳ ಕಾಲಮಿತಿ ಅನುಷ್ಠಾನಕ್ಕೆ ಸ್ವಾಗತ್‌ ಯೋಜನೆಯನ್ನು ಮುಖ್ಯಮಂತ್ರಿ ಆದ ಬಳಿಕ ಜಾರಿಗೆ ತಂದೆ. ಇದೇ ಮಾದರಿಯಲ್ಲಿ ಪ್ರಧಾನಿ ಆದ ಬಳಿಕ ಕೇಂದ್ರದಲ್ಲಿ ಪ್ರಗತಿ ಯೋಜನೆ ಜಾರಿಗೊಳಿಸಿದೆ. ಅಧಿಕಾರಕ್ಕೆ ಬಂದ ನಂತರ ರಾಜಕಾರಣಿಗಳ ವರ್ತನೆಯೇ ಬದಲಾಗಿ ಬಿಡುತ್ತದೆ ಎಂದು ಜನ ಭಾವಿಸುತ್ತಾರೆ. ಆದರೆ ನಾನು ಈ ರೀತಿ ಆಗಬಾರದು, ಅಧಿಕಾರಕ್ಕೆ ಅಂಟಿಕೊಂಡು ಅದರ ದಾಸನಾಗಬಾರದು ಎಂದು ಮನಃಸಂಕಲ್ಪ ಮಾಡಿದ್ದೆ. ಅದಕ್ಕೆಂದೇ ಸಿಎಂ ಆದ ನಂತರ ಜನಸ್ನೇಹಿ ಸ್ವಾಗತ್‌ ಕಾರ‍್ಯಕ್ರಮ (People Friendly Swagat program) ಜಾರಿಗೆ ತಂದೆ. ಜನರೊಂದಿಗೇ ಉಳಿದೆ ಎಂದರು.

 ಮೋದಿ ಹೇಳಿದ ಆತ್ಮಹತ್ಯೆ ಜೋಕಿಗೆ ರಾಹುಲ್‌, ಪ್ರಿಯಾಂಕಾ ಕಿಡಿ

ಆತ್ಮಹತ್ಯೆ (Suicide) ತಮಾಷೆಯ ಸಂಗತಿಯಲ್ಲ. ಅದರ ಬಗ್ಗೆ ಅಸೂಕ್ಷ್ಮವಾಗಿ ಮಾತನಾಡುವುದರ ಬದಲು ಜನರಿಗೆ ತಿಳಿವಳಿಕೆ ನೀಡುವ ಕೆಲಸ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ. ಮಾಧ್ಯಮ ಸಂವಾದವೊಂದರಲ್ಲಿ ಬುಧವಾರ ಮಾತನಾಡಿದ್ದ ಪ್ರಧಾನಿ ಮೋದಿ, (Narendra Modi) ಹೇಗೆ ಒಬ್ಬ ಪ್ರೊಫೆಸರ್‌ ತಾನು ಇಷ್ಟೆಲ್ಲಾ ವರ್ಷಗಳ ಕಾಲ ಮಗಳಿಗೆ ಸರಿಯಾಗಿ ಬರೆಯಲು ಕಲಿಸಿದ್ದರೂ ಆಕೆ ಸೂಸೈಡ್‌ ನೋಟ್‌ನಲ್ಲಿ ಕಾಗುಣಿತದ (Spelling Mistake)ತಪ್ಪು ಬರೆದಿದ್ದಾಳೆಂದು ಆಕ್ಷೇಪ ವ್ಯಕ್ತಪಡಿಸಿದ್ದ ಬಗ್ಗೆ ತಮಾಷೆ ಮಾಡಿದ್ದರು.

Karnataka Assembly Elections 2023: ನಾಳೆ, ನಾಡಿದ್ದು ಕರ್ನಾಟಕದಲ್ ...

ಅದಕ್ಕೆ ಗುರುವಾರ ಕಿಡಿಕಾರಿರುವ ರಾಹುಲ್‌ ಗಾಂಧಿ (rahul Gandhi), ಆತ್ಮಹತ್ಯೆಯೆಂಬ ಪಿಡುಗಿನಿಂದ ಸಾವಿರಾರು ಕುಟುಂಬಗಳು ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಿವೆ. ಅವರ ಬಗ್ಗೆ ತಮಾಷೆ ಮಾಡಬಾರದು ಎಂದು ಹೇಳಿದ್ದಾರೆ. ಇದೇ ವೇಳೆ ಪ್ರಿಯಾಂಕಾ ಗಾಂಧಿ ಕೂಡ ಟ್ವೀಟ್‌ ಮಾಡಿ, ಖಿನ್ನತೆ ಹಾಗೂ ಆತ್ಮಹತ್ಯೆ ತಮಾಷೆಯ ವಿಷಯವಲ್ಲ. 2021ರಲ್ಲಿ 164033 ಭಾರತೀಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ ಯುವಕರೇ ಹೆಚ್ಚಿದ್ದಾರೆ. ಈ ದುರಂತ ಜೋಕ್‌ ಅಲ್ಲ. ಇಂತಹ ವಿಷಯದ ಬಗ್ಗೆ ಅಸೂಕ್ಷ್ಮವಾಗಿ ಮಾತನಾಡುವುದನ್ನು ಬಿಟ್ಟು ಮಾನಸಿಕ ಆರೋಗ್ಯದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷ ಪ್ರಧಾನಿ ಮಾತಿನ ವಿಡಿಯೋವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ (Scial Media) ಹಂಚಿಕೊಂಡು ಆಕ್ಷೇಪ ವ್ಯಕ್ತಪಡಿಸಿದೆ.

ಕಾಂಗ್ರೆಸ್‌ಗೇ ವಾರಂಟಿ ಇಲ್ಲ, ಕೈ ಗ್ಯಾರಂಟಿಗೆ ಅರ್ಥವೇ ಇಲ್ಲ: ಪ್ರಧಾನಿ ...

Follow Us:
Download App:
  • android
  • ios