ಬೆಂಗಳೂರು(ಮೇ.15): ಕೊರೋನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಕಾರಣ ಪರಿಸ್ಥಿತಿ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ದೇಶದ ಹಲವು ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಪರಿಣಾಮ ಪ್ರಧಾನಿ ನರೇಂದ್ರ ಮೋದಿ ಇದೀಗ ಕೊರೋನಾ ಪಾಸಿಟಿವೀಟಿ ರೇಟ್ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. 

"

ಕೇಂದ್ರದಿಂದ ಕಳುಹಿಸಿದ ವೆಂಟಿಲೇಟರ್‌ ಬಳಕೆ, ಆಡಿಟ್‌ಗೆ ಆದೇಶ: ರಾಜ್ಯಗಳಿಗೆ ಢವಢವ!.

ಕರ್ನಾಟಕದಲಲ್ಲಿ ಕೊರೋನಾ ಹೆಚ್ಚಿರುವ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮೋದಿ ಸಂವಾದ ನಡೆಸಿದ್ದಾರೆ. ಮಂಗಳವಾರ(ಮೇ.18) ಬೆಳಗ್ಗೆ 11 ಗಂಟೆ ಮೋದಿ ವಿಡಿಯೋ ಸಂವಾದ ನಡೆಸಲಿದ್ದಾರೆ. ಈ ವೇಳೆ ಪ್ರತಿ ಜಿಲ್ಲೆಗಳ ಕೋವಿಡ್ ಸ್ಥಿತಿ-ಗತಿ ಕುರಿತ ಮಾಹಿತಿ ಪಡೆಯಲಿದ್ದಾರೆ. ಬಳಿಕ ಸೂಕ್ತ ಸಲಹೆ ನೀಡಲಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಮಾಂತರ, ಉತ್ತರ ಕನ್ನಡ, ಹಾಸನ ಬಳ್ಳಾರಿ, ಮೈಸೂರು, ತುಮಕೂರು, ಕೋಲಾರ, ಕೊಡಗು, ಉಡುಪಿ, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ, ಮಂಡ್ಯ, ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಜೊತೆ ಮೋದಿ ಸಂವಾದ ನಡೆಸಲಿದ್ದಾರೆ.