ಇ- ಕೋರ್ಟ್ ಯೋಜನೆಗೆ ಇಂದು ಮೋದಿ ಚಾಲನೆ: ಸುಪ್ರೀಂ ಕೋರ್ಟಲ್ಲಿ ಸಂವಿಧಾನ ದಿನಾಚರಣೆ ವೇಳೆ ಉದ್ಘಾಟನೆ
ನ್ಯಾಯಾಧೀಶರಿಗೆ ಡಿಜಿಟಲ್ ಸ್ವರೂಪದಲ್ಲಿ ನ್ಯಾಯಾಲಯದ ದಾಖಲೆಗಳನ್ನು ಒದಗಿಸುವ ವ್ಯವಸ್ಥೆ ಇದಾಗಿದೆ. ಈ ಮೂಲಕ ಪೇಪರ್‌ಲೆಸ್ ಕೋರ್ಟ್ ರಚನೆಗೆ ಕಡೆಗೆ ಮಹತ್ವದ ಹೆಜ್ಜೆ ಇಟ್ಟಂತೆ ಆಗಲಿದೆ.

- ವಚ್ರ್ಯುವಲ್ ಜಸ್ಟಿಸ್ ಕ್ಲಾಕ್, ಜಸ್ಟ್ ಇಸ್ ಮೊಬೈಲ್ ಆ್ಯಪ್ ಶುರು
- ಡಿಜಿಟಲ್ ಕೋರ್ಚ್, ವೆಬ್‌ಸೈಟ್ ನಿರ್ವಹಣಾ ವ್ಯವಸ್ಥೆಗೆ ಚಾಲನೆ
- ಸುಪ್ರೀಂ ಕೋರ್ಟಲ್ಲಿ ಸಂವಿಧಾನ ದಿನಾಚರಣೆ ವೇಳೆ ಉದ್ಘಾಟನೆ
ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಗೆ ಡಿಜಿಟಲ್ (Digital) ಸ್ಪರ್ಶ ನೀಡಲು ರೂಪಿಸಲಾಗಿರುವ ‘ಇ ಕೋರ್ಟ್’ (e court) ಯೋಜನೆಯಡಿ ರೂಪಿಸಲಾಗಿರುವ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಶನಿವಾರ ಇಲ್ಲಿ ಚಾಲನೆ ನೀಡಲಿದ್ದಾರೆ. ಸಂವಿಧಾನದ ದಿನದ (Constitution Day) ಅಂಗವಾಗಿ ಸುಪ್ರೀಂಕೋರ್ಟ್‌ನಲ್ಲಿ (Supreme Court) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಲ್ಲಿ ಈ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಅರ್ಜಿದಾರರು, ವಕೀಲರು, ನ್ಯಾಯಾಂಗ ಅಧಿಕಾರಿಗಳು, ನ್ಯಾಯಾಧೀಶರಿಗೆ ತಂತ್ರಜ್ಞಾನ ಆಧರಿತ ಸೇವೆ ನೀಡುವ ಸಲವಾಗಿ ‘ಇ ಕೋರ್ಟ್’ ಯೋಜನೆಯನ್ನು ರೂಪಿಸಲಾಗಿದೆ. ಇದರಡಿ ಮೋದಿ ಅವರು ವರ್ಚ್ಯುವಲ್ ಜಸ್ಟಿಸ್ ಕ್ಲಾಕ್, ಜಸ್ಟ್ ಇಸ್ ಮೊಬೈಲ್ ಆ್ಯಪ್, ಡಿಜಿಟಲ್ ಕೋರ್ಟ್, ವೆಬ್‌ಸೈಟ್ ನಿರ್ವಹಣಾ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ.
ವರ್ಚ್ಯುವಲ್ ಜಸ್ಟಿಸ್ ಕ್ಲಾಕ್:
ನ್ಯಾಯಾಲಯ ಮಟ್ಟದಲ್ಲಿ ನ್ಯಾಯ ವಿತರಣೆ ಹೇಗೆ ನಡೆಯುತ್ತಿದೆ ಎಂಬುದರ ತತ್‌ಕ್ಷಣದ ಮಾಹಿತಿ ನೀಡುವ ವ್ಯವಸ್ಥೆ ಇದಾಗಿದೆ. ಯಾವ ನ್ಯಾಯಾಲಯದಲ್ಲಿ ಎಷ್ಟು ಕೇಸು ದಾಖಲಾಗಿವೆ? ಎಷ್ಟು ಅರ್ಜಿಗಳ ವಿಚಾರಣೆ ಆರಂಭವಾಗಿದೆ, ಎಷ್ಟು ಕೇಸು ಇತ್ಯರ್ಥವಾಗಿದೆ, ಬಾಕಿ ಇರುವ ಪ್ರಕರಣಗಳ ಸಂಖ್ಯೆ ಬಗ್ಗೆ ದಿನವಹಿ, ವಾರ ಮತ್ತು ಮಾಸಿಕ ಲೆಕ್ಕಾಚಾರದಲ್ಲಿ ವಿವರಗಳು ಆಯಾ ಜಿಲ್ಲಾ ಕೋರ್ಟ್‌ಗಳ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಇದನ್ನು ಜನಸಾಮಾನ್ಯರು ಕೂಡಾ ನೋಡಬಹುದು.
ಇದನ್ನು ಓದಿ: ಕೇಂದ್ರ ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ತೀವ್ರ ಅತೃಪ್ತಿ
‘ಜಸ್ಟ್ ಇಸ್’ ಆ್ಯಪ್:
‘ಜಸ್ಟ್ ಇಸ್’ ಆ್ಯಪ್ 2.0 ಎನ್ನುವುದು ಕೆಳಹಂತದ ನ್ಯಾಯಾಂಗ ಅಧಿಕಾರಿಗಳಿಗಾಗಿ (ಜಡ್ಜ್ ಮತ್ತು ಇತರ ಕೋರ್ಟ್ ಸಿಬ್ಬಂದಿಗೆ) ರೂಪಿಸಲಾಗದ ಆ್ಯಪ್. ಈಗಾಗಲೇ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ಲಭ್ಯವಿದ್ದ ಈ ಆ್ಯಪ್ ಅನ್ನು ಇದೀಗ ಜಿಲ್ಲಾ ಹಂತಕ್ಕೂ ವಿಸ್ತರಿಸಲಾಗುತ್ತಿದೆ. ಎಷ್ಟು ಪ್ರಕರಣ ಬಾಕಿ ಇದೆ, ಎಷ್ಟು ಇತ್ಯರ್ಥಗೊಂಡಿದೆ ಎಂಬ ಮಾಹಿತಿ ಕೈ ಬೆರಳಲ್ಲೇ ಲಭ್ಯವಾಗುತ್ತದೆ. ತಮ್ಮ ನಿರ್ವಹಿಸುವ ಪ್ರಕರಣಗಳ ಜೊತೆಗೆ ತಮ್ಮ ಅಧೀನವಾಗಿ ಕಾರ್ಯನಿರ್ವಹಿಸುವ ಜಡ್ಜ್‌ಗಳ ಪ್ರಕರಣಗಳ ಮಾಹಿತಿಯೂ ಅವರಿಗೆ ಸಿಗುತ್ತದೆ. ಇದನ್ನು ಬಳಸಿಕೊಂಡು ಕೋರ್ಟ್ ವ್ಯವಹಾರ, ಪ್ರಕರಣಗಳನ್ನು ಇನ್ನಷ್ಟು ಕ್ಷಮತೆಯಿಂದ ಮಾಡಲು ಅವಕಾಶ ಲಭಿಸುತ್ತದೆ.
ಡಿಜಿಟಲ್ ಕೋರ್ಟ್:
ನ್ಯಾಯಾಧೀಶರಿಗೆ ಡಿಜಿಟಲ್ ಸ್ವರೂಪದಲ್ಲಿ ನ್ಯಾಯಾಲಯದ ದಾಖಲೆಗಳನ್ನು ಒದಗಿಸುವ ವ್ಯವಸ್ಥೆ ಇದಾಗಿದೆ. ಈ ಮೂಲಕ ಪೇಪರ್‌ಲೆಸ್ ಕೋರ್ಟ್ ರಚನೆಗೆ ಕಡೆಗೆ ಮಹತ್ವದ ಹೆಜ್ಜೆ ಇಟ್ಟಂತೆ ಆಗಲಿದೆ.
ಇದನ್ನೂ ಓದಿ: ಚುನಾವಣಾ ಬಾಂಡ್ ಯೋಜನೆ ವಿಚಾರಣೆ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಪ್ಪಿಗೆ
‘ಎಸ್3ವಾಸ್’ ವೆಬ್‌ಸೈಟ್ ವ್ಯವಸ್ಥೆ:
ಇದು ಜಿಲ್ಲಾ ಹಂತದ ನ್ಯಾಯಾಲಯಗಳ ವೆಬ್‌ಸೈಟ್ ನಿರ್ವಹಣೆಗೆ ಅನುಕೂಲ ಕಪ್ಪಿಸುವ ಕ್ಲೌಡ್ ಆಧರಿತ ವ್ಯವಸ್ಥೆ. ವೆಬ್‌ಗೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿ ಮತ್ತು ಸೇವೆಗಳ ಕುರಿತು ಮಾಹಿತಿಯ ಸೃಷ್ಟಿ, ಅದಕ್ಕೊಂದು ಸ್ವರೂಪ ನೀಡುವ ಮತ್ತು ನಿರ್ವಹಣೆ ಮಾಡಲು ಒಂದು ಚೌಕಟ್ಟನ್ನು ಒದಗಿಸುವ ವ್ಯವಸ್ಥೆಯಾಗಿದೆ. ಇದು ಬಹು ಭಾಷೆಯಲ್ಲಿ ಲಭ್ಯವಿದ್ದು, ಜನಸ್ನೇಹಿ ಮತ್ತು ಅಂಗವಿಕಲರ ಸ್ನೇಹಿಯಾಗಿರಲಿದೆ.
ಡಿಜಿಟಲ್ ಕೋರ್ಟ್:
ನ್ಯಾಯಾಧೀಶರಿಗೆ ಡಿಜಿಟಲ್ ಸ್ವರೂಪದಲ್ಲಿ ನ್ಯಾಯಾಲಯದ ದಾಖಲೆಗಳನ್ನು ಒದಗಿಸುವ ವ್ಯವಸ್ಥೆ ಇದಾಗಿದೆ. ಈ ಮೂಲಕ ಪೇಪರ್‌ಲೆಸ್ ಕೋರ್ಟ್ ರಚನೆಗೆ ಕಡೆಗೆ ಮಹತ್ವದ ಹೆಜ್ಜೆ ಇಟ್ಟಂತೆ ಆಗಲಿದೆ.
ಇದನ್ನೂ ಓದಿ: ಜಡ್ಜ್‌ಗಳ ನೇಮಕ ವಿಳಂಬ: ಕೇಂದ್ರ ಸರ್ಕಾರದ ಬಗ್ಗೆ Supreme Court ಗರಂ
‘ಎಸ್3ವಾಸ್’ ವೆಬ್‌ಸೈಟ್ ವ್ಯವಸ್ಥೆ:
ಇದು ಜಿಲ್ಲಾ ಹಂತದ ನ್ಯಾಯಾಲಯಗಳ ವೆಬ್‌ಸೈಟ್ ನಿರ್ವಹಣೆಗೆ ಅನುಕೂಲ ಕಪ್ಪಿಸುವ ಕ್ಲೌಡ್ ಆಧರಿತ ವ್ಯವಸ್ಥೆ. ವೆಬ್‌ಗೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿ ಮತ್ತು ಸೇವೆಗಳ ಕುರಿತು ಮಾಹಿತಿಯ ಸೃಷ್ಟಿ, ಅದಕ್ಕೊಂದು ಸ್ವರೂಪ ನೀಡುವ ಮತ್ತು ನಿರ್ವಹಣೆ ಮಾಡಲು ಒಂದು ಚೌಕಟ್ಟನ್ನು ಒದಗಿಸುವ ವ್ಯವಸ್ಥೆಯಾಗಿದೆ. ಇದು ಬಹುಭಾಷೆಯಲ್ಲಿ ಲಭ್ಯವಿದ್ದು, ಜನಸ್ನೇಹಿ ಮತ್ತು ಅಂಗವಿಕಲರ ಸ್ನೇಹಿಯಾಗಿರಲಿದೆ.