Asianet Suvarna News Asianet Suvarna News

ಚುನಾವಣಾ ಬಾಂಡ್‌ ಯೋಜನೆ ವಿಚಾರಣೆ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಒಪ್ಪಿಗೆ

ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾದ ರಾಜಕೀಯ ಪಕ್ಷಗಳ ವಾರ್ಷಿಕ ಕೊಡುಗೆ ವರದಿಗಳಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಕೊಡುಗೆ ನೀಡುವವರ ಹೆಸರು ಮತ್ತು ವಿಳಾಸಗಳನ್ನು ನಮೂದಿಸುವ ಅಗತ್ಯವಿಲ್ಲ. ಈ ತಿದ್ದುಪಡಿಗಳ ಪರಿಣಾಮವಾಗಿ ರಾಜಕೀಯ ಫಂಡಿಂಗ್‌ ವಿಚಾರದಲ್ಲಿ ಪಾರದರ್ಶಕತೆ ನಾಶವಾಗುತ್ತದೆ ಎಂದು ಅರ್ಜಿದಾರರು ಮನವಿ ಸಲ್ಲಿಸಿದ್ದಾರೆ.

supreme court says it will list electoral bonds matter ash
Author
First Published Nov 14, 2022, 1:08 PM IST

ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣ ಸಂಗ್ರಹ ಅಥವಾ ನಿಧಿಯನ್ನು (Anonymous Funding of Political Parties) ಅನುಮತಿಸುವ ಚುನಾವಣಾ ಬಾಂಡ್ (Eleectoral Bond) ಯೋಜನೆಯನ್ನು ಪ್ರಶ್ನಿಸುವ ವಿಷಯವನ್ನು ಪಟ್ಟಿ (List) ಮಾಡುವುದಾಗಿ ಸುಪ್ರೀಂಕೋರ್ಟ್ (Supreme Court) ಸೋಮವಾರ ಹೇಳಿದೆ. ಚುನಾವಣಾ ಬಾಂಡ್ ಯೋಜನೆಗೆ ಸಂಬಂಧಿಸಿದ ಇತ್ತೀಚಿನ ಅಧಿಸೂಚನೆಯನ್ನು (Notification) ಪ್ರಶ್ನಿಸಿ ಹಿರಿಯ ವಕೀಲ ಅನೂಪ್ ಚೌಧರಿ ಹೊಸ ಮನವಿಯನ್ನು ಪ್ರಸ್ತಾಪಿಸಿದ ನಂತರ ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿ (Chief Justice of India) (ಸಿಜೆಐ) (CJI) ಡಿ.ವೈ ಚಂದ್ರಚೂಡ್ (D.Y. Chandrachud) ಅವರು ಈ ಹೇಳಿಕೆ ನೀಡಿದ್ದಾರೆ.

ಚುನಾವಣಾ ಬಾಂಡ್‌ನ ಈ ಹೊಸ ಅಧಿಸೂಚನೆ ಪ್ರಕಾರ "ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗ ಸಭೆಗಳಿಗೆ ಸಾರ್ವತ್ರಿಕ ಚುನಾವಣೆಯ ವರ್ಷದಲ್ಲಿ" ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ "15 ದಿನಗಳ ಹೆಚ್ಚುವರಿ ಅವಧಿಯನ್ನು" ಒದಗಿಸಲು ಯೋಜನೆಯನ್ನು ತಿದ್ದುಪಡಿ ಮಾಡಿದೆ. "ಅವರು ಯೋಜನೆಯ ವಿರುದ್ಧ ಅಧಿಸೂಚನೆಯನ್ನು ಹೊರಡಿಸುತ್ತಿದ್ದಾರೆ. ಈ ಅಧಿಸೂಚನೆಯು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ" ಎಂದು  ಹಿರಿಯ ವಕೀಲ ಅನೂಪ್ ಚೌಧರಿ ಹೇಳಿದರು. ಈ ಮನವಿಗೆ ಪ್ರತಿಕ್ರಿಯೆ ನೀಡಿದ ಸುಪ್ರೀಂಕೋರ್ಟ್‌ ಸಿಜೆಐ ಚಂದ್ರಚೂಡ್, ನಾವು ಅದನ್ನು ಪಟ್ಟಿ ಮಾಡುತ್ತೇವೆ, ಈ ವಿಷಯದ ವಿಚಾರಣೆ ಬರುತ್ತದೆ ಎಂದು ಹೇಳಿದ್ದಾರೆ. 

ಇದನ್ನು ಓದಿ: ಚುನಾವಣಾ ಬಾಂಡ್ ಗಳೇ ರಾಜಕೀಯ ಪಕ್ಷಗಳ ತಿಜೋರಿ; 2018ರಿಂದ ಇಲ್ಲಿಯ ತನಕ 10,791ಕೋಟಿ ರೂ. ಸಂಗ್ರಹ

ಎಲೆಕ್ಟೋರಲ್ ಬಾಂಡ್ ಎನ್ನುವುದು ಪ್ರಾಮಿಸರಿ ನೋಟ್ ಅಥವಾ ಬೇರರ್ ಬಾಂಡ್‌ನ ಒಂದು ಸಾಧನವಾಗಿದ್ದು, ವ್ಯಕ್ತಿ ಅಥವಾ ಸಂಸ್ಥೆಯು ಭಾರತದ ಪ್ರಜೆಯಾಗಿದ್ದರೆ ಅಥವಾ ಭಾರತದಲ್ಲಿ ಸಂಘಟಿತ ಅಥವಾ ಸ್ಥಾಪಿಸಲ್ಪಟ್ಟಿದ್ದರೆ ಅದನ್ನು ಯಾವುದೇ ವ್ಯಕ್ತಿ, ಕಂಪನಿ, ಸಂಸ್ಥೆ ಅಥವಾ ವ್ಯಕ್ತಿಗಳ ಸಂಘದಿಂದ ಖರೀದಿಸಬಹುದಾಗಿದೆ.

ಹಲವು ಡಿನಾಮಿನೇಷನ್‌ಗಳಲ್ಲಿ ಬರುವ ಬಾಂಡ್‌ಗಳನ್ನು ನಿರ್ದಿಷ್ಟವಾಗಿ ದೇಶದಲ್ಲಿ ಅದರ ಅಸ್ತಿತ್ವದಲ್ಲಿರುವ ಯೋಜನೆಯಲ್ಲಿ ರಾಜಕೀಯ ಪಕ್ಷಗಳಿಗೆ ನಿಧಿಯ ಕೊಡುಗೆಯ ಉದ್ದೇಶಕ್ಕಾಗಿ ನೀಡಲಾಗುತ್ತದೆ. ಎಲೆಕ್ಟೋರಲ್ ಬಾಂಡ್‌ಗಳನ್ನು ಹಣಕಾಸು ಕಾಯಿದೆ 2017 ರ ಮೂಲಕ ಪರಿಚಯಿಸಲಾಯಿತು, ಇದು ಅಂತಹ ಬಾಂಡ್‌ಗಳನ್ನು ಪರಿಚಯಿಸಲು  RBI ಕಾಯ್ದೆ, ಆದಾಯ ತೆರಿಗೆ ಕಾಯ್ದೆ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆ ಸೇರಿ ಇತರ ಮೂರು ಕಾನೂನುಗಳನ್ನು ತಿದ್ದುಪಡಿ ಮಾಡಿದೆ.

ಇದನ್ನೂ ಓದಿ: ಚುನಾವಣಾ ಬಾಂಡ್‌: 2,555 ಕೋಟಿ ಗಳಿಸಿದ ಬಿಜೆಪಿ!

ಹಣಕಾಸು ಕಾಯ್ದೆ, 2017 ಚುನಾವಣಾ ನಿಧಿಯ ಉದ್ದೇಶಕ್ಕಾಗಿ ಯಾವುದೇ ಶೆಡ್ಯೂಲ್ಡ್ ಬ್ಯಾಂಕ್‌ನಿಂದ ನೀಡಲಾಗುವ ಚುನಾವಣಾ ಬಾಂಡ್‌ಗಳ ವ್ಯವಸ್ಥೆಯನ್ನು ಪರಿಚಯಿಸಿತು. ಹಾಗೂ, ಹಣಕಾಸು ಕಾಯ್ದೆಯನ್ನು ಮನಿ ಬಿಲ್‌ ಆಗಿ ಅಂಗೀಕರಿಸಲಾಯಿತು. ಇದರರ್ಥ ಈ ಮಸೂದೆಗ ಅಂಗೀಕರಿಸಲು ರಾಜ್ಯಸಭೆಯ ಒಪ್ಪಿಗೆ ಅಗತ್ಯವಿಲ್ಲ.

ಹಣಕಾಸು ಕಾಯ್ದೆ 2017 ಮತ್ತು ಹಣಕಾಸು ಕಾಯ್ದೆ 2016 ರ ಮೂಲಕ ರಾಜಕೀಯ ಪಕ್ಷಗಳ ಅನಿಯಮಿತ, ಅನಿಯಂತ್ರಿತ ನಿಧಿ ಸಮಗ್ರಹಕ್ಕೆ ಬಾಗಿಲು ತೆರೆದಿರುವ ಕಾರಣದಿಂದ ವಿವಿಧ ಕಾನೂನುಗಳಿಗೆ ಮಾಡಿದ ಕನಿಷ್ಠ 5 ತಿದ್ದುಪಡಿಗಳನ್ನು ಪ್ರಶ್ನಿಸಿ ವಿವಿಧ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಅಂಡ್ ಕಾಮನ್ ಕಾಸ್ ಎಂಬ 2 ಎನ್‌ಜಿಒಗಳು ಸಹ ಆಡಳಿತಾರೂಢ ಬಿಜೆಪಿ ಸರ್ಕಾರ ರಾಜ್ಯಸಭೆಯಲ್ಲಿ ಬಹುಮತವಿಲ್ಲದಿರುವ ಕಾರಣ ಮನಿ ಬಿಲ್ ಮಾರ್ಗವನ್ನು ಅಳವಡಿಸಿಕೊಂಡಿದೆ ಎಂದು ಮನವಿ ಮಾಡಿತ್ತು. 

ಇದನ್ನೂ ಓದಿ: ಪಕ್ಷಗಳ ದೇಣಿಗೆ ವಿವರ ಬಹಿರಂಗ ಮಾಡಲ್ಲ: ಮಾಹಿತಿ ಹಕ್ಕು ಆಯೋಗ!

ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾದ ರಾಜಕೀಯ ಪಕ್ಷಗಳ ವಾರ್ಷಿಕ ಕೊಡುಗೆ ವರದಿಗಳಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಕೊಡುಗೆ ನೀಡುವವರ ಹೆಸರು ಮತ್ತು ವಿಳಾಸಗಳನ್ನು ನಮೂದಿಸುವ ಅಗತ್ಯವಿಲ್ಲ. ಈ ತಿದ್ದುಪಡಿಗಳ ಪರಿಣಾಮವಾಗಿ ರಾಜಕೀಯ ಫಂಡಿಂಗ್‌ ವಿಚಾರದಲ್ಲಿ ಪಾರದರ್ಶಕತೆ ನಾಶವಾಗುತ್ತದೆ ಎಂದು ಅರ್ಜಿದಾರರು ಮನವಿ ಸಲ್ಲಿಸಿದ್ದಾರೆ.

ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾರ್ಚ್ 2021 ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.

ಇದನ್ನೂ ಓದಿ: ಲೋಕ ಚುನಾವಣೆ ವೇಳೆ ಪಕ್ಷಗಳಿಗೆ 4,444 ಕೋಟಿ ರೂ. ದೇಣಿಗೆ ಬಾಂಡ್‌!

Follow Us:
Download App:
  • android
  • ios