ಆಯುಷ್ಮಾನ್ ಭಾರತ ಅಡಿ ಉಚಿತ ಕೊರೋನಾ ಚಿಕಿತ್ಸೆ!
ಆಯುಷ್ಮಾನ್ ಭಾರತ ಅಡಿ ಉಚಿತ ಕೊರೋನಾ ಚಿಕಿತ್ಸೆ!| ಖಾಸಗಿ ಆಸ್ಪತ್ರೆ, ಲ್ಯಾಬ್‌ಗಳಿಗೂ ಸೌಲಭ್ಯ ವಿಸ್ತರಣೆ
ನವದೆಹಲಿ(ಏ.05): ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆ ಫಲಾನುಭವಿಗಳಿಗೆ ಕೊರೋನಾ ವೈರಸ್ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಇನ್ನು ಲಭ್ಯವಾಗಲಿದೆ. ಯೋಜನೆಯಡಿ ನೋಂದಣಿ ಆಗಿರುವ ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಲ್ಲಿ ಉಚಿತ ಚಿಕಿತ್ಸೆ ಹಾಗೂ ರೋಗ ತಪಾಸಣೆ ಸೌಲಭ್ಯ ದೊರಕಲಿದೆ.
ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೊಳಿಸುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಶನಿವಾರ ಈ ವಿಷಯ ತಿಳಿಸಿದೆ.
‘ಯೋಜನೆಗೆ ದೇಶದ 50 ಕೋಟಿ ಜನರು ಅರ್ಹರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಪ್ರಯೋಗಶಾಲೆಗಳಲ್ಲಿ ಈಗಾಗಲೇ ಕೊರೋನಾ ರೋಗಿಗಳಿಗೆ ಉಚಿತ ಚಿಕಿತ್ಸೆ ಹಾಗೂ ತಪಾಸಣೆ ಲಭ್ಯವಿದೆ. ಈಗ ಯೋಜನೆಯ ನೋಂದಾಯಿತ ಖಾಸಗಿ ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಿಗೂ ಈ ಸೌಲಭ್ಯ ವಿಸ್ತರಣೆ ಆಗಲಿದೆ’ ಎಂದು ಅದು ಹೇಳಿದೆ. ಪ್ರಯೋಜನ ಲಭಿಸಲಿದೆ.