Asianet Suvarna News Asianet Suvarna News

ವಿದೇಶದಲ್ಲಿರುವ ಇಂಡಿಯನ್ ಮಿಷನ್, ವಾಣಿಜ್ಯ ಪಾಲುದಾರರ ಜೊತೆ ಪ್ರಧಾನಿ ಮೋದಿ ನಾಳೆ ಸಂವಾದ!

  • ಮೇಕ್ ಇನ್ ಇಂಡಿಯಾ ಫಾರ್ ವರ್ಲ್ಡ್ ಕಾರ್ಯಕ್ರಮದಡಿ ಪ್ರಧಾನಿ ಮೋದಿ ಸಂವಾದ
  • ಆಗಸ್ಟ್ 6 ರಂದು ಭಾರತೀಯ ಮಿಷನ್‌ ಮುಖ್ಯಸ್ಥರು, ವಾಣಿಜ್ಯ ಕ್ಷೇತ್ರದ ಪಾಲುದಾರ ಜೊತೆ ಸಂವಾದ
  • ಸ್ಥಳೀಯ ಉತ್ಪನ್ನಗಳು ವಿಶ್ವ ಮಾರುಕಟ್ಟೆ ಸೇರಿದಂತೆ ಹಲವು ವಿಚಾರ ಚರ್ಚೆ
PM Modi to interact Indian Missions abroad and stakeholders of  trade commerce sector on 6th August ckm
Author
Bengaluru, First Published Aug 5, 2021, 10:33 PM IST
  • Facebook
  • Twitter
  • Whatsapp

ನವದೆಹಲಿ(ಆ.05): ಮೊದಲ ಕೊರೋನಾ ಅಲೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವೋಕಲ್ ಫಾರ್ ಲೋಕಲ್ ಅಭಿಯಾನ ಆರಂಭಿಸಿದರು. ಈ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ವಿಶೇಷ ಕಾಳಜಿ ವಹಿಸಿದರು. ಇದರ ಮುಂದುವರಿದ ಭಾಗವಾಗಿ ಇದೀಗ ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿರುವ ಇಂಡಿಯನ್ ಮಿಷನ್ ಹಾಗೂ ವಾಣಿಜ್ಯ ಕ್ಷೇತ್ರದ ಪಾಲುದಾರರ ವಿಶೇಷ ಸಂವಾದ ನಡೆಸಲಿದ್ದಾರೆ.

ಆರ್ಟಿಕಲ್ 370 ರದ್ದು, ರಾಮ ಮಂದಿರ ಅಡಿಗಲ್ಲು, ಹಾಕಿ ಪದಕ; ಆಗಸ್ಟ್ 5ರ ಇತಿಹಾಸ ಹೇಳಿದ ಮೋದಿ!

ಆಗಸ್ಟ್ 6 ರಂದು ಸಂಜೆ 6 ಗಂಟೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಮೇಕ್ ಇನ್ ಇಂಡಿಯಾ ಫಾರ್ ವರ್ಲ್ಡ್ ಕ್ರಾರ್ಯಕ್ರಮದಡಿ ಸ್ಥಳೀಯ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕುರಿತು ಚರ್ಚಿಸಲಿದ್ದಾರೆ. 

ಈ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾರತೀಯ ಮಿಷನ್, ವಿದೇಶದಲ್ಲಿರುವ ವಾಣಿಜ್ಯ ಕ್ಷೇತ್ರದ ಹಲವು ಪರಿಣಿತರು ಪಾಲ್ಗೊಳ್ಳಲಿದ್ದಾರೆ. ಭಾರತದ ರಫ್ತು ಮತ್ತು ಜಾಗತಿಕ ವ್ಯಾಪಾರ, ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಿಗಿಸುವ ಕುರಿತು ಸಂವಾದ ನಡೆಸಲಿದ್ದಾರೆ.  ಭಾರದ ರಫ್ತು ಬೃಹತ್ ಉದ್ಯೋಗ ಸೃಷ್ಟಿ ಮಾಡಲಿದೆ. MSME ವಲಯದಲ್ಲಿನ ಕಾರ್ಮಿಕರಿಗೆ ಅನೂಕಲವಾಗಲಿದೆ. ಇದು ಆರ್ಥಿಕತೆ ಮೇಲೂ ಉತ್ತಮ ಫಲಿತಾಂಶ ನೀಡಲಿದೆ. ಈ ಕುರಿತು ಮೋದಿ ಕ್ಷೇತ್ರದ ತಜ್ಞರ ಜೊತೆ ಸಂವಾದ ನಡೆಸಲಿದ್ದಾರೆ.

ಸ್ವದೇಶಿ ನಿರ್ಮಿತ ಯುದ್ಧ ನೌಕೆ ವಿಕ್ರಾಂತ್ ಸಂಚಾರ ಆರಂಭ; ಐತಿಹಾಸಿಕ ಕ್ಷಣ ಎಂದ ಪ್ರಧಾನಿ ಮೋದಿ!

ಭಾರತದ ರಫ್ತು ಸಾಮರ್ಥ್ಯವನ್ನು ವಿಸ್ತರಿಸಲು, ಜಾಗತಿಕ ಬೇಡಿಕೆಗೆ ಅನುಗುಣವಾಗಿ ಉತ್ಪನ್ನಗಳನ್ನು ಪೂರೈಸಲು ಎಲ್ಲಾ ಪಾಲುದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸಂವಹನ ನಡೆಯಲಿದೆ.   ಸಂವಾದದ ಸಮಯದಲ್ಲಿ ಕೇಂದ್ರ ವಾಣಿಜ್ಯ ಸಚಿವರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಪಾಲ್ಗೊಳ್ಳಲಿದ್ದಾರೆ. 

Follow Us:
Download App:
  • android
  • ios