ರತನ್ ಟಾಟಾ ನಿಧನದ ಬಳಿಕ ಮೋದಿ ಮಹತ್ವದ ಹೆಜ್ಜೆ, ನಾಳೆ ಟಾಟಾ ಏರ್‌ಕ್ರಾಫ್ಟ್ ಉದ್ಘಾಟನೆ!

ರತನ್ ಟಾಟಾ ನಿಧನದ ಬಳಿಕ ಇದೀಗ ಪ್ರಧಾನಿ ಮೋದಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ನಾಳೆ ಟಾಟಾ ಏರ್‌ಕ್ರಾಫ್ಟ್ ಸಂಕೀರ್ಣವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. 

PM Modi to inaugurate TATA Aircraft Complex after Ratan tata demise ckm

ವಡೋದರ(ಅ.27)  ಭಾರತದ ರತ್ನ ರತನ್ ಟಾಟಾ ನಿಧನದ ಬಳಿಕ ಟಾಟಾ ಗ್ರೂಪ್, ಟಾಟಾ ಟ್ರಸ್ಟ್ ಸಂಸ್ಥೆಗಳಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟಾಟಾ ಟ್ರಸ್ಟ್ ಮುಖ್ಯಸ್ಥನಾಗಿ ನೊಯೆಲ್ ಟಾಟಾ ನೇಮಕಗೊಂಡಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ರತನ್ ಟಾಟಾ ನಿಧನದ ಬಳಿಕ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಡೋದರದಲ್ಲಿ ಟಾಟಾ ಏರ್‌ಕ್ರಾಫ್ಟ್ ಸಂಕೀರ್ಣ ಉದ್ಘಾಟನೆ ಮಾಡಲಿದ್ದಾರೆ. ಮೋದಿ ನಾಳೆ(ಅ.28) ಗುಜರಾತ್ ಭೇಟಿಯಲ್ಲಿ ಟಾಟಾ ಏರ್‌ಕ್ರಾಫ್ಟ್ ಸಂಕೀರ್ಣ ಉದ್ಘಾಟನೆಗೊಳ್ಳಲಿದೆ.

ಮೋದಿಗೆ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಸಾಥ್ ನೀಡಲಿದ್ದಾರೆ. ಮೋದಿ ಹಾಗೂ ಪೆಡ್ರೋ ಜಂಟಿಯಾಗಿ ಟಾಟಾ ಏರ್‌ಕ್ರಾಫ್ಟ್ ಸಂಕೀರ್ಣ ಉದ್ಘಾಟನೆ ಮಾಡಲಿದ್ದಾರೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕ್ಯಾಂಪಸ್ ನಲ್ಲಿ ಸಿ -295 ವಿಮಾನಗಳನ್ನು ತಯಾರಿಸುವ ಟಾಟಾ ವಿಮಾನ ಸಂಕೀರ್ಣವನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಸಿ -295 ಕಾರ್ಯಕ್ರಮದಡಿ ಒಟ್ಟು 56 ವಿಮಾನಗಳಿವೆ, ಅದರಲ್ಲಿ 16 ವಿಮಾನಗಳನ್ನು ಸ್ಪೇನ್ ನಿಂದ ನೇರವಾಗಿ ಏರ್ ಬಸ್ ಮೂಲಕ ತರಲಾಗಿದೆ. ಉಳಿದ 40 ವಿಮಾನಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ.

ರತನ್ ಟಾಟಾ 10,000 ಕೋಟಿ ರೂ ಆಸ್ತಿಯಲ್ಲಿ ಮುದ್ದಿನ ನಾಯಿಗೂ ಇದೆ ಅತೀ ದೊಡ್ಡ ಪಾಲು!

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಭಾರತದಲ್ಲಿ ಈ 40 ವಿಮಾನಗಳನ್ನು ತಯಾರಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ಸೌಲಭ್ಯವು ಭಾರತದಲ್ಲಿ ಮಿಲಿಟರಿ ವಿಮಾನಗಳಿಗೆ ಮೊದಲ ಖಾಸಗಿ ವಲಯದ ಅಂತಿಮ ಜೋಡಣೆ ರೇಖೆ (ಎಫ್ಎಎಲ್) ಆಗಲಿದೆ. ಇದು ತಯಾರಿಕೆಯಿಂದ ಜೋಡಣೆ, ಪರೀಕ್ಷೆ ಮತ್ತು ಅರ್ಹತೆ, ವಿಮಾನದ ಸಂಪೂರ್ಣ ಜೀವನಚಕ್ರದ ವಿತರಣೆ ಮತ್ತು ನಿರ್ವಹಣೆಯವರೆಗೆ ಸಂಪೂರ್ಣ ಪರಿಸರ ವ್ಯವಸ್ಥೆಯ ಸಂಪೂರ್ಣ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ. ಟಾಟಾ ಹೊರತುಪಡಿಸಿ, ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಘಟಕಗಳಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮತ್ತು ಖಾಸಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಈ ಕಾರ್ಯಕ್ರಮಕ್ಕೆ ಕೊಡುಗೆ ನೀಡಲಿವೆ. 

ಮಿಲಿಟರಿ ಏರ್‌ಕ್ರಾಫ್ಟ್ ನಿರ್ಮಾಣ ಹಾಗೂ ಜೋಡಣೆಯಲ್ಲಿ ಕೈಜೋಡಿಸಿದ ಭಾರತದ ಮೊದಲ ಖಾಸಗಿ ಸೆಕ್ಟರ್ ಟಾಟಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 2022ರಲ್ಲಿ ಪ್ರಧಾನಿ ಮೋದಿ ಇದೇ ಜೋಡಣೆ ಫ್ಯಾಕ್ಟರಿ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ 2 ವರ್ಷದಲ್ಲಿ ಉದ್ಘಾಟನೆ ಮಾಡಲಿದ್ದಾರೆ.

ರತನ್ ಟಾಟಾ ನಿಧನದ ಬಳಿಕ ಇತ್ತೀಚೆಗೆ ರತನ್ ಟಾಟಾ ಬರೆದ ವಿಲ್ ಭಾರಿ ಸದ್ದು ಮಾಡಿದೆ. ರತನ್ ಟಾಟಾ ತಮ್ಮ 10,000 ಕೋಟಿ ರೂಪಾಯಿ ಆಸ್ತಿಯಲ್ಲಿ ಹಲವರಿಗೆ ಪಾಲು ನೀಡಿದ್ದಾರೆ. ಈ ಪೈಕಿ ತಮ್ಮ ಮುದ್ದಿನ ನಾಯಿ, ಆಡುಗೆ ಮಾಡುತ್ತಿದ್ದ ಸಿಬ್ಬಂದಿ, ಗೆಳೆಯನಂತಿದ್ದ ಶಂತನು ನಾಯ್ಡು ಸೇರಿದಂತೆ ಕೆಲ ಪ್ರಮುಖರಿಗೆ ತಮ್ಮ ಆಸ್ತಿ ಪಾಲನ್ನು ಹಂಚಿದ್ದಾರೆ.   

ವಡೋದರದಲ್ಲಿ ಕಾರ್ಯಕ್ರಮ ಬಳಿಕ ಪ್ರಧಾನಿ ಮೋದಿ ಅಮ್ರೇಲಿಯ ದುಧಲಾದಲ್ಲಿ ಭಾರತ್ ಮಾತಾ ಸರೋವರವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅವರು ಅಮ್ರೇಲಿಯ ಲಾಥಿಯಲ್ಲಿ 4,800 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ರತನ್ ಟಾಟಾ ನಿಧನದ ಬೆನ್ನಲ್ಲೇ ಟಾಟ್ ಗ್ರೂಪ್ಸ್ ಮಹತ್ವದ ಘೋಷಣೆ, 5 ಲಕ್ಷ ಉದ್ಯೋಗ ಸೃಷ್ಟಿ!

Latest Videos
Follow Us:
Download App:
  • android
  • ios