ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ, ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ಹಾಗೂ ಖಾಸಗಿ ಕಂಪನಿಗಳೂ ಅಮೆರಿಕದ ಸ್ಪೇಸ್‌ ಎಕ್ಸ್‌ ಮಾದರಿಯಲ್ಲಿ ಉಪಗ್ರಹ ಉಡಾವಣೆ ಮಾಡುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಬಾಹ್ಯಾಕಾಶ ಪ್ರಚಾರ ಹಾಗೂ ದೃಢೀಕರಣ ಕೇಂದ್ರ (ಇನ್‌-ಸ್ಪೇಸ್‌) ಕೇಂದ್ರ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿದರು.

ಅಹಮದಾಬಾದ್‌ (ಜೂ.11): ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ, ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ಹಾಗೂ ಖಾಸಗಿ ಕಂಪನಿಗಳೂ ಅಮೆರಿಕದ ಸ್ಪೇಸ್‌ ಎಕ್ಸ್‌ ಮಾದರಿಯಲ್ಲಿ ಉಪಗ್ರಹ ಉಡಾವಣೆ ಮಾಡುವುದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ಬಾಹ್ಯಾಕಾಶ ಪ್ರಚಾರ ಹಾಗೂ ದೃಢೀಕರಣ ಕೇಂದ್ರ (ಇನ್‌-ಸ್ಪೇಸ್‌) ಕೇಂದ್ರ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿದರು.

ಗುಜರಾತ್‌ನ ಬೋಪಾಲ್‌ ಎಂಬಲ್ಲಿ ಈ ಘಟಕ ತಲೆಯೆತ್ತಿದೆ. ಈ ವೇಳೆ ಮಾತನಾಡಿದ ಮೋದಿ, ‘ 21ನೇ ಶತಮಾನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವು ಜಾಗತಿಕ ಕ್ರಾಂತಿಗೆ ಕಾರಣವಾಗಲಿದೆ. ಖಾಸಗಿ ವಲಯದವರು ಕೈಜೋಡಿಸುವ ಮೂಲಕ ಬಾಹ್ಯಾಕಾಶ ವಲಯದಲ್ಲಿ ನಿರಂತರ ಸುಧಾರಣೆಗಳು ಕಂಡು ಬರಲಿದ್ದು, ಐಟಿ ಕ್ಷೇತ್ರದಂತೇ ದೇಶದ ಬಾಹ್ಯಾಕಾಶ ಕ್ಷೇತ್ರವು ಜಗತ್ತಿನಲ್ಲಿ ಮುಂದಾಳತ್ವ ವಹಿಸಲಿ ಎಂದು ಆಶಿಸುತ್ತೇನೆ’ ಎಂದರು.

Yoga Day in Mysuru; ಜೂನ್ 20 ರಂದು 1 ಲಕ್ಷ ಫಲಾನುಭವಿಗಳ ಜತೆ ಮೋದಿ ಸಂವಾದ

ಏನಿದು ಇನ್‌-ಸ್ಪೇಸ್‌?: ಇನ್‌-ಸ್ಪೇಸ್‌ ಸರ್ಕಾರದ ಒಡೆತನದಲ್ಲಿರುವ ಬಾಹ್ಯಾಕಾಶ ಸಂಸ್ಥೆಗಳ ಸೌಲಭ್ಯವನ್ನು ಸರ್ಕಾರೇತರ ಖಾಸಗಿ ಸಂಸ್ಥೆಗಳು ಬಳಸಿಕೊಂಡು ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಮತಿಸುವ ನೋಡಲ್‌ ಏಜೆನ್ಸಿಯಾಗಿದೆ. 2020 ಜೂನ್‌ನಲ್ಲಿ ಕೇಂದ್ರ ಕ್ಯಾಬಿನೆಟ್‌ ಇದಕ್ಕೆ ಅನುಮೋದನೆ ನೀಡಿತ್ತು. ಈ ಮೂಲಕ ಇಸ್ರೋ ಮೂಲಸೌಕರ್ಯಗಳನ್ನು ಬಳಸಿಕೊಂಡು ಆಸಕ್ತ ಖಾಸಗಿ ಸಂಸ್ಥೆಗಳು ಉಪಗ್ರಹ ಉಡಾವಣೆಯಂಥ ತಮ್ಮ ಬಾಹ್ಯಾಕಾಶ ಸಂಬಂಧಿ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ.

ಬೆಂಗಳೂರು ಟೆಕ್‌ ಶೃಂಗಕ್ಕೆ ಮೋದಿ ಆಹ್ವಾನ: 25ನೇ ವರ್ಷದ ಬೆಂಗಳೂರು ತಂತ್ರಜ್ಞಾನ ಸಮಾವೇಶವು (ಬಿಟಿಎಸ್‌-25) ಟೆಕ್‌4ನೆಕ್ಸ್ಟ್‌-ಜೆನ್‌ ಘೋಷ ವಾಕ್ಯದೊಂದಿಗೆ ನ.16ರಿಂದ 18ರವರೆಗೆ ಅರಮನೆ ಮೈದಾನದಲ್ಲಿ ನಡೆಯಲು ಉದ್ದೇಶಿಸಿದ್ದು ಸಮಾವೇಶದ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.

‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ಯ (ಬಿಟಿಎಸ್‌) 25ನೇ ವರ್ಷದ ಸಮಾವೇಶವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಜಾಗತಿಕ ನಾವೀನ್ಯತಾ ಸಹಭಾಗಿ (ಜಿಐಎ) ರಾಷ್ಟ್ರಗಳ ಕಾನ್ಸುಲ್‌ ಜನರಲ್‌, ಡೆಪ್ಯುಟಿ ಕಾನ್ಸುಲ್‌ ಜನರಲ್‌ ಮತ್ತು ಗೌರವ ಕಾನ್ಸುಲ್‌ ಜನರಲ್‌ಗಳೊಂದಿಗೆ ಐಟಿ-ಬಿಟಿ ಸಚಿವ ಡಾ.ಸಿ.ಎನ್‌ ಅಶ್ವತ್‌ನಾರಾಯಣ ಸಮಾಲೋಚನೆ ನಡೆಸಿದರು.

ಹೆದ್ದಾರಿ ಅಕ್ಕಪಕ್ಕ ಗಿಡ ನೆಡಿಸಿ: ಪ್ರಧಾನಿಗೆ ಮಕ್ಕಳ ಪತ್ರ

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನ.16ರಿಂದ ಮೂರು ದಿನ ಬಿಟಿಎಸ್‌-25 ಸಮಾವೇಶ ನಡೆಯಲಿದ್ದು 48ಕ್ಕೂ ಹೆಚ್ಚು ರಾಷ್ಟ್ರಗಳು ಪಾಲ್ಗೊಳ್ಳಲಿವೆ. ಈ ಸಮಾವೇಶದ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ರಾಜ್ಯವು ಈಗಾಗಲೇ 30ಕ್ಕೂ ಹೆಚ್ಚು ಜಿಐಎ ಸಹಭಾಗಿತ್ವಗಳನ್ನು ಹೊಂದಿದ್ದು, 50ಕ್ಕೂ ಹೆಚ್ಚು ಮಹತ್ವದ ಯೋಜನೆಗಳು ಪ್ರಗತಿಯಲ್ಲಿವೆ.