ಪಿಟಿಐ ನವದೆಹಲಿ(ಡಿ.25): ದೇಶದ ಮೊದಲ ಚಾಲಕ ರಹಿತ ಸ್ವಯಂಚಾಲಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಲಿದ್ದಾರೆ. ಈ ರೈಲು ದಿಲ್ಲಿ ಮೆಟ್ರೋದ ಮೆಜೆಂತಾ ಮಾರ್ಗದಲ್ಲಿ ಸಂಚರಿಸಲಿದೆ.

ಮೆಜೆಂತಾ ಮಾರ್ಗವು 37 ಕಿ.ಮೀ. ಉದ್ದದ್ದಾಗಿದೆ. ಇದು ಜನಕಪುರಿ ಪಶ್ಚಿಮದಿಂದ ಬೊಟಾನಿಕಲ್‌ ಗಾರ್ಡನ್‌ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ. ಇದೇ ವೇಳೆ ಮೋದಿ ಅವರು ಏರ್‌ಪೋರ್ಟ್‌ ಎಕ್ಸ್‌ಪ್ರೆಸ್‌ ಲೈನ್‌ ಪ್ರಯಾಣಿಕರಿಗೆ ‘ಕಾಮನ್‌ ಮೊಬಿಲಿಟಿ’ ಕಾರ್ಡ್‌ ಅನ್ನು ಕೂಡ ಮೋದಿ ಅವರು ಬಿಡುಗಡೆ ಮಾಡಲಿದ್ದಾರೆ.

ಮುಂಬೈ ದಾಳಿ ರೂವಾರಿ ಹಫೀಜ್‌ಗೆ ಮತ್ತೆ 15 ವರ್ಷ ಸಜೆ: ಒಟ್ಟು 36 ವರ್ಷ ಜೈಲು

ಇದು ಒಂದು ರೀತಿಯಲ್ಲಿ ‘ಒನ್‌ ನೇಶನ್‌ ಒನ್‌ ಕಾರ್ಡ್‌’ ರೀತಿಯಲ್ಲಿ ಕೆಲಸ ಮಾಡಲಿದೆ. ಇದು ದೇಶಾದ್ಯಂತ ಮೆಟ್ರೋ, ಬಸ್‌ ಪ್ರಯಾಣ, ಪಾರ್ಕಿಂಗ್‌, ರೀಟೇಲ್‌ ಶಾಪಿಂಗ್‌ ಹಾಗೂ ಹಣ ವಿತ್‌ಡ್ರಾಗೆ ಇದು ನೆರವಾಗಲಿದೆ ಎಂದು ದಿಲ್ಲಿ ಮೆಟ್ರೋ ರೈಲು ನಿಗಮ ಹೇಳಿದೆ.

ಸಂವಹನ ಆಧಾರಿತ ರೈಲು ನಿಯಂತ್ರಣ (ಸಿಬಿಟಿಸಿ) ಎಂದು ಕರೆಯಲ್ಪಡುವ ಹೈಟೆಕ್ ಸಿಗ್ನಲಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಚಾಲಕರಹಿತ ರೈಲುಗಳು ಕಾರ್ಯನಿರ್ವಹಿಸಲಿದೆ.

ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರಪತಿಗೆ ಕಾಂಗ್ರೆಸ್‌ ದೂರು

ಮೆಜೆಂಟಾ ಲೈನ್ (ಜನಕ್ಪುರಿ ವೆಸ್ಟ್-ಬಟಾನಿಕಲ್ ಗಾರ್ಡನ್) ಮತ್ತು ಪಿಂಕ್ ಲೈನ್ (ಮಜ್ಲಿಸ್ ಪಾರ್ಕ್-ಶಿವ ವಿಹಾರ) ದಲ್ಲಿ ಚಲಿಸುವ ರೈಲುಗಳಲ್ಲಿ ಡಿಎಂಆರ್ಸಿ ಈಗಾಗಲೇ ಚಾಲಕರಹಿತ ರೈಲು ತಂತ್ರಜ್ಞಾನವನ್ನು ಬಳಸುತ್ತಿದೆ.