ನವದೆಹಲಿ (ಜ. 27)  ಜನವರಿ 28 ರಂದು ದೆಹಲಿಯ ಕಾರಿಯಪ್ಪ ಮೈದಾನದಲ್ಲಿ ನಡೆಯಲಿರುವ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. 

ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್,  ರಕ್ಷಣಾ ಇಲಾಖೆ ವಿಭಾಗದ ಮುಖ್ಯಸ್ಥರು ಮತ್ತು ಸಶಸ್ತ್ರ ಸೇನಾ ಪಡೆಗಳ ಮೂವರೂ ಮುಖ್ಯಸ್ಥರು  ಭಾಗವಹಿಸಲಿದ್ದಾರೆ.

'ಮೋದಿ ಜತೆ ಗೇಮ್ ಆಡುವ ಆಸೆ'

ಪ್ರಧಾನ ಮಂತ್ರಿ  ಗೌರವ ವಂದನೆ, ಎನ್‌ಸಿಸಿ ದಳಗಳ ಪರೇಡ್ ಪರಿಶೀಲಿಸುತ್ತಾರೆ ಮತ್ತು ಸಂಜೆ ನಡೆಯುವ ಸಾಂಸ್ಕೃತಿಕ ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದಾರೆ.