ನವದೆಹಲಿ(ಜೂ.03): ಕೊರೋನಾ ವೈರಸ್ 2ನೇ ಅಲೆಯಿಂದ ಭಾರತ ಲಸಿಕೆ ಅಭಾವ ಎದುರಿಸುತ್ತಿದೆ. ಇದರ ನಡುವೆ ಅಮೆರಿಕ ಭಾರತಕ್ಕೆ 25 ಮಿಲಿಯನ್ ಡೋಸ್ ಲಸಿಕೆ ನೀಡುವ ಭರವಸೆ ನೀಡಿದೆ. ಅಮೆರಿಕದ ಜೋ ಬೈಡನ್ ನೇತೃತ್ವದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. 

ಲಸಿಕೆ ಹಾಕಿದ ಬಳಿಕವೂ ಕೊರೋನಾ ಪರೀಕ್ಷೆ ಮಾಡಿಸಬೇಕೆ?.

ಅಮೆರಿಕ ನಿರ್ಧಾರವನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಪ್ರಧಾನಿ ನರೇಂದ್ರ ಮೋದಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಪ್ರಧಾನಿ ಮೋದಿ ಮಾತನಾಡಿದ ಹ್ಯಾರಿಸ್ ಜೂನ್ ತಿಂಗಳ ಒಳಗೆ 25 ಮಿಲಿಯನ್ ಡೋಸ್ ಲಸಿಕೆ ಭಾರಕ್ಕೆ ಪೂರೈಸುವುದಾಗಿ ಭರವಸೆ ನೀಡಿದ್ದಾರೆ. ಅಮೆರಿಕ ನಿರ್ಧಾರಕ್ಕೆ ಪ್ರದಾನಿ ಮೋದಿ ಧನ್ಯವಾದ ಹೇಳಿದ್ದಾರೆ. ಇಷ್ಟೇ ಅಲ್ಲ ಈ ಮೂಲಕ ಅಮೆರಿಕ ನೀಡಿದ ಬೆಂಬಲವನ್ನು ಪ್ರಶಂಸಿದ್ದಾರೆ 

ಕೋವಿಡ್‌ನಿಂದ ತಬ್ಬಲಿಯಾದ ಮಕ್ಕಳ ಸಬಲೀಕರಣಕ್ಕೆ ಹೊಸ ಯೋಜನೆ ಘೋಷಿಸಿದ ಮೋದಿ!.

ಸ್ವಲ್ಪ ಸಮಯದ ಹಿಂದೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಮಾತನಾಡಿದೆ.  ಜಾಗತಿಕ ಲಸಿಕೆ ಹಂಚಿಕೆಯ ಭಾಗವಾಗಿ ಅಮೆರಿಕ ಭಾರತಕ್ಕೆ ಲಸಿಕೆ ಪೂರೈಕೆ ಭರವಸೆ ನೀಡಿದೆ. ಅಮೆರಿಕದ ಈ ನಡೆಯನ್ನು ನಾನು ಪ್ರಶಂಸಿಸುತ್ತೇನೆ. ಭಾರತೀಯರ ಹಾಗೂ ಭಾರತೀಯ ವಸಲೆಗಾರರ ಬೆಂಬಲಕ್ಕೆ ನಿಂತ ಅಮೆರಿಕಾಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕ ಅಗತ್ಯವಿರುವ ಕೆಲ ರಾಷ್ಟ್ರಗಳಿಗೆ ಜಾಗತಿಕ ಲಸಿಕೆ ಹಂಚಿಕ ಭಾಗವಾಗಿ ಕೋವಿಡ್ ಲಸಿಕೆ ಪೂರೈಕೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಅಮೆರಿಕ ಭಾರತ ಸೇರಿದಂತೆ ಮೆಕ್ಸಿಕೋ, ಗ್ವಾಟಮಾಲ, ಟ್ರಿನಿಡ್ಯಾಡ್ ಅಂಡ್ ಟೊಬ್ಯಾಗೋ ರಾಷ್ಟ್ರಕ್ಕೂ ಅಮರಿಕ ಲಸಿಕೆ ಪೂರೈಕೆ ಮಾಡುತ್ತಿದೆ.

ಕೋವಿಡ್‌ನಿಂದ ದುಡಿಯುವ ಸದಸ್ಯನ ಕಳೆದುಕೊಂಡ ಕುಟುಂಬಕ್ಕೆ ಪಿಂಚಣಿ ನೆರವು!

ಜೂನ್ ತಿಂಗಳ ಅಂತ್ಯದೊಳಗೆ ಬಾರತ, ಮೆಕ್ಸಿಕೋ ಸೇರಿದಂತೆ ಕೆಲ ರಾಷ್ಟ್ರಗಳಿಗೆ ಒಟ್ಟು 80 ಮಿಲಿಯನ್ ಕೋವಿಡ್ ಲಸಿಕೆಯನ್ನು ಅಮೆರಿಕ ಸರಬರಾಜು ಮಾಡಲಿದೆ.