ದೇಶಾದ್ಯಂತ ಏರುತ್ತಿರುವ ಕೊರೋನಾ ಪ್ರಕರಣಗಳ ಮಧ್ಯೆ ಲಸಿಕಾ ಅಭಿಯಾನ| ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಎರಡನೇ ಡೋಸ್ ಲಸಿಕೆ ಪಡೆದ ಮೋದಿ| ಮೋದಿಗೆ ಪುದುಚೇರಿ, ಪ<ಜಾಬ್ ನರ್ಸ್‌ಗಳಿಂದ ಲಸಿಕೆ
ನವದೆಹಲಿ(ಏ.08): ದೇಶಾದ್ಯಂತ ವೇಗವಾಗಿ ಕೊರೋನಾ ಸೋಂಕು ಹಬ್ಬುತ್ತಿರುವ ನಡುವೆಯೇ ಲಸಿಕೆ ಅಭಿಯಾನವೂ ಜೋರಾಗೇ ನಡೆಯುತ್ತಿದೆ. ಸದ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರದಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ. ಟ್ವೀಟ್ ಮೂಲಕ ಪಿಎಂ ಮೋದಿ ಈ ಬಗ್ಗೆ ಮಾಃಇತಿ ಹಂಚಿಕೊಂಡಿದ್ದಾರೆ.
ಟ್ವೀಟ್ ಮಾಡಿರುವ ಪಿಎಂ ಮೋದಿ 'ಇಂದು ನನಗೆ ಏಮ್ಸ್‌ನಲ್ಲಿ ಕೊರೋನಾ ಲಸಿಕೆಯ ಎರಡನೇ ಡೋಸ್ ನೀಡಲಾಯ್ತು. ಈ ಲಸಿಕೆ ಕೊರೋನಾ ಮಣಿಸುವ ಕೆಲ ಉಪಾಯಗಳಲ್ಲಿ ಒಂದು. ಒಂದು ವೇಳೆ ನೀವೂ ಲಸಿಕೆ ಪಡೆಯಲು ಯೋಗ್ಯರಾದಲ್ಲಿ ಶೀಘ್ರವೇ ನೋಂದಾವಣೆ ಮಾಡಿಸಿ ಲಸಿಕೆ ಪಡೆದುಕೊಳ್ಳಿ' ಎಂದಿದ್ದಾರೆ.
"
ಇದಕ್ಕೂ ಮುನ್ನ ಪ್ರಧಾನ ಮಂತ್ರಿ ಏಮ್ಸ್‌ನಲ್ಲೇ ಮಾರ್ಚ್ 1 ರಂದು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದರು. ಇನ್ನು ಇಂದು, ಗುರುವಾರ ಪಡೆದ ಎರಡನೇ ಡೋಸ್‌ನ್ನು ಪುದುಚೇರಿಯ ನರ್ಸ್ ಪಿ. ನಿವೇದಾ ಹಾಗೂ ಪಂಜಾಬ್‌ನ ನರ್ಸ್ ನಿಶಾ ಪಿಎಂ ಮೋದಿಗೆ ನೀಡಿದ್ದಾರೆ. ಇನ್ನು ಮೊದಲ ಡೋಸ್ ಕೂಡಾ ಪಿ. ನಿವೇದಾ ಅವರೇ ನೀಡಿದ್ದರೆಂಬುವುದು ಉಲ್ಲೇಖನೀಯ. ಪ್ರಧಾನಿ ಮೋದಿ ಬಯೋಟೆಕ್‌ನ ಕೋವ್ಯಾಕ್ಸಿನ್ ಪಡೆದಿದ್ದಾರೆ.
