11 ಸಾವಿರ ಅಡಿ ಎತ್ತರದ ನೀಮೂಗೆ ನಮೋ ಭೇಟಿ; ಮೋದಿ ಫಿಟ್ನೆಸ್ ಸಿಕ್ರೆಟ್ ಇದು..!
ಯುದ್ಧ ಪರಿಸ್ಥಿತಿಯಲ್ಲಿ ಗಡಿಗೆ ಹೋಗಿ ಸ್ವತಃ ಸೈನಿಕರ ಮನೋಬಲ ಹಿಗ್ಗಿಸುವುದು ಯಾವುದೇ ದೇಶದ ಯುದ್ಧಕಾಲದ ನಾಯಕತ್ವ ಮಾಡಲೇಬೇಕಾದ ಕೆಲಸ. 1971ರಲ್ಲಿ ಪೂರ್ವ ಪಾಕಿಸ್ತಾನವನ್ನು ಬೇರ್ಪಡಿಸುವ ಮುಂಚೆ ಇಂದಿರಾಗಾಂಧಿ ಲೇಹ್‌ಗೆ ಹೋಗಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿ ಬಂದಿದ್ದರು.
ನವದೆಹಲಿ (ಜು. 04): ಯುದ್ಧ ಪರಿಸ್ಥಿತಿಯಲ್ಲಿ ಗಡಿಗೆ ಹೋಗಿ ಸ್ವತಃ ಸೈನಿಕರ ಮನೋಬಲ ಹಿಗ್ಗಿಸುವುದು ಯಾವುದೇ ದೇಶದ ಯುದ್ಧಕಾಲದ ನಾಯಕತ್ವ ಮಾಡಲೇಬೇಕಾದ ಕೆಲಸ. 1971ರಲ್ಲಿ ಪೂರ್ವ ಪಾಕಿಸ್ತಾನವನ್ನು ಬೇರ್ಪಡಿಸುವ ಮುಂಚೆ ಇಂದಿರಾಗಾಂಧಿ ಲೇಹ್‌ಗೆ ಹೋಗಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿ ಬಂದಿದ್ದರು. ಈಗ ಅದೇ ಲೇಹ್‌ಗೆ ಮೋದಿ ಹೋಗಿ ಬಂದಿದ್ದಾರೆ.
ಗಡಿಯಲ್ಲಿ ಮೋದಿ ಘರ್ಜನೆ; ಲಡಾಖ್ ಭೇಟಿಯ ಸಂದೇಶವೇನು?
ದಿಲ್ಲಿ, ಜಮ್ಮು, ಶ್ರೀನಗರ, ಮನಾಲಿಯಿಂದ ಲೇಹ್-ಲಡಾಖ್‌ಗೆ ವಿಮಾನದ ಮೂಲಕ ಹೋಗುವವರು ಕನಿಷ್ಠ 24 ಗಂಟೆ ಮುಂಚೆ ಅಲ್ಲಿಗೆ ಹೋಗಿ ಆ ವಾತಾವರಣಕ್ಕೆ ಒಗ್ಗಿಕೊಳ್ಳುವತನಕ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕ ಪೂರೈಕೆ ಕಡಿಮೆ ಇರುವುದರಿಂದ 60 ವರ್ಷ ಮೇಲ್ಪಟ್ಟವರಿಗಂತೂ ಕನಿಷ್ಠ 24ರಿಂದ 48 ಗಂಟೆ ವಿಶ್ರಾಂತಿ ಬೇಕು. ಆದರೆ 69 ವರ್ಷದ ಮೋದಿ ದಿಲ್ಲಿಯಿಂದ ಎರಡೂವರೆ ಗಂಟೆ ಪ್ರಯಾಣ ಮಾಡಿ ಲೇಹ್‌ನಲ್ಲಿ ಇಳಿದು 6 ಗಂಟೆ ಸೇನಾ ನೆಲೆಯಲ್ಲಿ ಓಡಾಡಿ, ಭಾಷಣ ಮಾಡಿ, ಆಸ್ಪತ್ರೆಗೆ ಭೇಟಿ ನೀಡಿ, ಪುನಃ ವಿಮಾನ ಹತ್ತಿ ದೆಹಲಿಗೆ ಬಂದು, ಸಂಜೆ ಸೇನಾ ಮುಖ್ಯಸ್ಥರ ಸಭೆ ನಡೆಸಿದ್ದಾರೆ. ಗಟ್ಟಿಮುಟ್ಟಾದ ಫಿಟ್ನೆಸ್ ಇಲ್ಲದೆ ಹೀಗೆಲ್ಲ ಎತ್ತರದ ಪ್ರದೇಶಗಳಲ್ಲಿ ತಿರುಗಾಡಲು ಸಾಧ್ಯವಿಲ್ಲ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ