ಪ್ಯಾಲೆಸ್ತಿನ್ ಅಧ್ಯಕ್ಷರ ಜೊತೆ ಮೋದಿ ದೂರವಾಣಿ ಮಾತುಕತೆ, ಗಾಜಾಗೆ ಮಾನವೀಯ ನೆರವು ಘೋಷಣೆ!
ಗಾಜಾ ಆಸ್ಪತ್ರೆ ಮೇಲಿನ ದಾಳಿಯನ್ನು ಖಂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಪ್ಯಾಲೆಸ್ತಿನ್ ಅಧ್ಯಕ್ಷರ ಜೊತೆ ತುರ್ತು ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಗಾಜಾ ಜನರಿಗೆ ಭಾರತ ಮಾನವೀಯತೆ ನೆರವನ್ನು ಘೋಷಿಸಿದ್ದಾರೆ.

ನವದೆಹಲಿ(ಅ.19) ಭಯೋತ್ಪಾಧನೆಯನ್ನು ಖಂಡಿಸಿದ ಪ್ರಧಾನಿ ನರೇಂದ್ರ ಜಗತ್ತಿಗೆ ಸ್ಪಷ್ಟ ಸಂದೇಶ ನೀಡಿದ್ದರು. ಹಮಾಸ್ ಇಸ್ರೇಲ್ ಮೇಲೆ ನಡೆಸಿದ ನರಮೇಧವನ್ನು ಖಂಡಿಸಿದ್ದು ಮಾತ್ರವಲ್ಲ, ಗಾಜಾ ಆಸ್ಪತ್ರೆ ಮೇಲೆ ನಡೆದ ದಾಳಿಯನ್ನು ಮೋದಿ ಖಂಡಿಸಿದ್ದರು. ಅಮಾಯಕ ನಾಗರೀಕರ ಮೇಲಿನ ದಾಳಿಗೆ ಆತಂಕ ವ್ಯಕ್ತಪಡಿಸಿದ್ದರು. ಇಂದು ಪ್ರಧಾನಿ ನರೇಂದ್ರ ಮೋದಿ ಪ್ಯಾಲೆಸ್ತಿನ್ ಅಧ್ಯಕ್ಷ ಮಹಮೌದ್ ಅಬ್ಬಾಸ್ ಜೊತೆ ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ. ಈ ವೇಳೆ ಗಾಜಾದಲ್ಲಿ ಸಂತ್ರಸ್ಥರಾಗಿರುವ ಪ್ಯಾಲೆಸ್ತಿನ್ ಜನತೆಗೆ ಮಾನವೀಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಮಾತುಕತೆ ವೇಳೆ ಗಾಜಾ ಆಸ್ಪತ್ಪೆ ಮೇಲೆ ನಡೆದ ದಾಳಿಯನ್ನು ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಇದೇ ವೇಳೆ ಗಾಜಾದಲ್ಲಿನ ಪ್ಯಾಲೆಸ್ತಿನ್ ಜನತೆಗೆ ಮಾನವೀಯ ನೆರವನ್ನು ಭಾರತ ನೀಡಲಿದೆ. ಗಾಜಾ ಜನತೆಗೆ ಪರಿಹಾರ ಸಾಮಾಗ್ರಿಗಳನ್ನು ಭಾರತ ಕಳುಹಿಸಿಕೊಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ. ಇದೇ ವೇಳೆ ಭಯೋತ್ಪಾದನೆಯನ್ನು ಖಂಡಿಸಿದ ಪ್ರಧಾನಿ ಮೋದಿ ಭಾರತ ಹಾಗೂ ಪ್ಯಾಲೆಸ್ತಿನ್ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
ನಾಗರೀಕರ ಸಾವು ನೋವು ಆಘಾತ ತಂದಿದೆ, ಗಾಜಾ ಆಸ್ಪತ್ರೆ ಮೇಲಿನ ದಾಳಿ ಮರುಗಿದ ಮೋದಿ!
ಪ್ಯಾಲೆಸ್ತಿನ ನಾಗರೀಕ ಸುರಕ್ಷತೆ ಕುರಿತು ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಮೋದಿ ನೆರವಿಗೆ ಪ್ಯಾಲೆಸ್ತಿನ್ ಅಧ್ಯಕ್ಷ ಮೊಹಮೊದ್ ಅಬ್ಬಾಸ್ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಶಾಂತಿ ಸ್ಥಾಪನೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ಅಕ್ಟೋಬರ್ 7 ರಂದು ಗಾಜಾದ ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿ ಅಮಾಯಕರ ಮೇಲೆ ದಾಳಿ ನಡೆಸಿದ್ದರು. 1,300ಕ್ಕೂ ಹೆಚ್ಚು ಜನರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. 100ಕ್ಕೂ ಹೆಚ್ಚು ಮಕ್ಕಳ ಹತ್ಯೆಯಾಗಿತ್ತು. ಹಲವು ಕುಟುಂಬಗಳನ್ನು ಜೀವಂತವಾಗಿ ಸುಡಲಾಗಿತ್ತು. 200ಕ್ಕೂ ಹೆಚ್ಚು ಇಸ್ರೇಲ್ ಯೋಧರು ಹತ್ಯೆಯಾಗಿದ್ದರು. ಈ ದಾಳಿಯನ್ನು ಪ್ರಧಾನಿ ಮೋದಿ ಹಮಾಸ್ ಉಗ್ರರ ದಾಳಿಯನ್ನು ಖಂಡಿಸಿದ್ದರು. ಇದೇ ವೇಳೆ ಇಸ್ರೇಲ್‌ಗೆ ಬೆಂಬಲ ಘೋಷಿಸಿದ್ದರು.
ಇಸ್ರೇಲ್ ಮೇಲೆ ಉಗ್ರ ದಾಳಿಯಿಂದ ಭಾರತ ಅಲರ್ಟ್, ಗ್ಲೈಡರ್ಸ್ ಹಾರಾಟಕ್ಕೆ ಕಠಿಣ ನಿಯಮ ಜಾರಿ!
1,000ಕ್ಕೂ ಹೆಚ್ಚು ಇಸ್ರೇಲ್ ನಾಗರೀಕರನ್ನು ಒತ್ತೆಯಾಳಾಗಿ ವಶದಲ್ಲಿಡಲಾಗಿತ್ತು. ಈ ಪೈಕಿ ತೀವ್ರಗಾಯಗೊಂಡ ಹಲವರು ಮೃತಪಟ್ಟರೆ, ಮತ್ತೆ ಕೆಲವರನ್ನು ಹತ್ಯೆ ಮಾಡಲಾಗಿದೆ. ಸದ್ಯ ಹಮಾಸ್ ಉಗ್ರರ ಕೈಯಲ್ಲಿ 200ಕ್ಕೂ ಹೆಚ್ಚು ಇಸ್ರೇಲ್ ಒತ್ತೆಯಾಳುಗಳಿದ್ದಾರೆ. ಈ ನರಮೇಧಕ್ಕೆ ಮರುಗಿದ ಇಸ್ರೇಲ್, ಹಮಾಸ್ ಉಗ್ರರ ವಿರುದ್ಧ ಪ್ರತಿದಾಳಿ ಆರಂಭಿಸಿತು.ಹಮಾಸ್ ಉಗ್ರರ ಅಡಗುತಾಣಗಳನ್ನು ಹುಡುಕಿ ಹುಡುಕಿ ಹತ್ಯೆ ಮಾಡಲು ಆರಂಭಿಸಿತು. ಏರ್‌ಸ್ಟ್ರೈಕ್ ಮೂಲಕ ದಾಳಿ ಮುಂದುವರಿಸಿದೆ.