ಅಂಬೇಡ್ಕರ್‌ ಅವರೇ ಬಂದ್ರೂ ದೇಶದ ಸಂವಿಧಾನ ಬದಲಾಯಿಸೋಕೆ ಆಗಲ್ಲ, ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ!


ಬಿಜೆಪಿ ಅಧಿಕಾರಕ್ಕೆ ಬಂದ್ರೆ ದೇಶದ ಸಂವಿಧಾನ ಬದಲಾಯಿಸಲಿದೆ ಎಂದು ಪ್ರಚಾರ ಮಾಡುತ್ತಿರುವ ವಿಪಕ್ಷಗಳ ವಿರುದ್ಧ ರಾಜಸ್ಥಾನದ ಸಮಾವೇಶದಲ್ಲಿ ಹರಿಹಾಯ್ದಿರುವ ಮೋದಿ, ನಾನಲ್ಲ, ಸ್ವತಃ ಅಂಬೇಡ್ಕರ್‌ ಅವರೇ ಬಂದ್ರೂ ದೇಶದ ಸಂವಿಧಾನ ಬದಲಾಯಿಸೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
 

PM Modi slams Opposition Babasaheb Ambedkar himself cant abolish Constitution now san

ನವದೆಹಲಿ (ಏ.12): ಸಂವಿಧಾನವನ್ನು ನಾಶಮಾಡಲು ಬಿಜೆಪಿ ಹೊರಟಿದೆ ಎಂಬ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಎನ್‌ಡಿಎ ಸರ್ಕಾರ ದೇಶದ ಸಂವಿಧಾನವನ್ನು ಗೌರವಿಸುತ್ತದೆ. ಈಗ ಈ ಪವಿತ್ರ ಗ್ರಂಥವನ್ನು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಬಂದರೂ ಬದಲಾಯಿಸೋಕೆ ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.ರಾಜಸ್ಥಾನದ ಬಾರ್ಮರ್‌ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಬಿಜೆಪಿ ಸರ್ಕಾರಕ್ಕೆ ದೇಶದ ಸಂವಿಧಾನವೇ ಸರ್ವಸ್ವವಾಗಿದ್ದು, ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಬಂದರೂ ಸಂವಿಧಾನವನ್ನು ರದ್ದುಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೂರನೇ ಬಾರಿಗೆ ಗೆದ್ದರೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎಂದು ಹೇಳಿದ್ದಕ್ಕಾಗಿ ಪ್ರಧಾನಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವ ಮೂಲಕ ಸಂವಿಧಾನವನ್ನು ನಾಶಪಡಿಸಲು ಯತ್ನಿಸಿದ್ದು ಕಾಂಗ್ರೆಸ್, ಇದೀಗ ಸಂವಿಧಾನದ ಹೆಸರಿನಲ್ಲಿ ಮೋದಿಯನ್ನು ನಿಂದಿಸಲು ಪ್ರಯತ್ನ ಮಾಡುವ ಮೂಲಕ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳುತ್ತಿದೆ ಎಂದರು. ಇನ್ನು ತಮ್ಮ ಭಾಷಣದಲ್ಲಿ ಬಿಜೆಪಿಯ ಟಾಪ್ ಸ್ಟಾರ್ ಪ್ರಚಾರಕರಾಗಿರುವ ಪಿಎಂ ಮೋದಿ, ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಕಾಂಗ್ರೆಸ್ ಈಗ ಮನವಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

“ಬಾಬಾ ಸಾಹೇಬರು ಬದುಕಿದ್ದಾಗ ಅವರನ್ನು ಚುನಾವಣೆಯಲ್ಲಿ ಸೋಲುವಂತೆ ಮಾಡಿದ ಕಾಂಗ್ರೆಸ್, ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲು ಕೂಡ ಬಿಡಲಿಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ಅಂತ್ಯಗೊಳಿಸಲು ಯತ್ನಿಸಿದ ಕಾಂಗ್ರೆಸ್ ಇಂದು ಸಂವಿಧಾನದ ಹೆಸರಿನಲ್ಲಿ ಮೋದಿಯನ್ನು ನಿಂದಿಸಲು ಕೇವಲ ಸುಳ್ಳು ಹೇಳುತ್ತಿದೆ' ಎಂದು ಪ್ರಧಾನಿ ಹೇಳಿದ್ದಾರೆ.

“ದೇಶದಲ್ಲಿ ಪ್ರಪ್ರಥಮ ಬಾರಿಗೆ ಸಂವಿಧಾನ ದಿನಾಚರಣೆಗೆ ಚಾಲನೆ ನೀಡಿದವರು ಮೋದಿ, ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಯಾತ್ರಾಸ್ಥಳಗಳನ್ನು ನಾನು ಅಭಿವೃದ್ಧಿಪಡಿಸಿದ್ದೇನೆ, ಆದ್ದರಿಂದ ಕಾಂಗ್ರೆಸ್ ಮತ್ತು ಭಾರತ ಮೈತ್ರಿಕೂಟದ ಸುಳ್ಳುಗಳ ಬಗ್ಗೆ ಎಚ್ಚರದಿಂದಿರಬೇಕು. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅವರು  ಅವಮಾನಿಸಿದ್ದಾರೆ,'' ಎಂದು ಅವರು ಹೇಳಿದರು.

200 ಕೋಟಿಯ ಆಸ್ತಿ ದಾನ ಮಾಡಿ ಜೈನ ಮುನಿಯಾದ ಗುಜರಾತ್‌ ಉದ್ಯಮಿ!

"ನರೇಂದ್ರ ಮೋದಿ ಮತ್ತು ಬಿಜೆಪಿಯ ಅಂತಿಮ ಗುರಿ ಬಾಬಾಸಾಹೇಬರ ಸಂವಿಧಾನವನ್ನು ನಾಶಪಡಿಸುವುದು" ಎಂದು ರಾಹುಲ್ ಗಾಂಧಿ ಹೇಳಿದ ಕೆಲವೇ ವಾರಗಳಲ್ಲಿ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ದೊಡ್ಡ ಪ್ರಮಾಣದ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನವನ್ನು ತಿದ್ದುಪಡಿ ಮಾಡಲು ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿದ ನಂತರ ಸಂವಿಧಾನದ ಮೇಲಿನ ಗದ್ದಲ ಆರಂಭವಾಗಿತ್ತು. ಆದರೆ, ಬಿಜೆಪಿ ಹೆಗಡೆಯವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಇದನ್ನು ‘ವೈಯಕ್ತಿಕ ಅಭಿಪ್ರಾಯ’ ಎಂದು ಬಣ್ಣಿಸಿ ಅವರಿಂದ ಸ್ಪಷ್ಟನೆ ಕೇಳಿದೆ.

ರಸ್ತೆಯಲ್ಲಿ ಬ್ಯೂಟಿ ಪ್ರಾಡಕ್ಟ್‌ ಮಾರಿಯೇ ಬಿಲಿಯನೇರ್‌ ಆಗಿದ್ದ ಉದ್ಯಮಿಗೆ ಗಲ್ಲು ಶಿಕ್ಷೆ!

Latest Videos
Follow Us:
Download App:
  • android
  • ios