ಮೋದಿಯಿಂದ ಇಸ್ರೇಲ್‌ಗೆ ಶಾಂತಿ ಮಂತ್ರ: ಉಗ್ರವಾದಕ್ಕೆ ಜಾಗವಿಲ್ಲ

ಇಸ್ರೇಲ್‌- ಹಮಾಸ್‌- ಹಿಜ್ಬುಲ್ಲಾ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ, ಇಸ್ರೇಲ್‌ ಪ್ರಧಾನಿಗೆ ಕರೆ ಮಾಡಿರುವ ಪ್ರಧಾನಿ ಮೋದಿ, ಶಾಂತಿಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ ಮತ್ತು ಉಗ್ರವಾದವನ್ನು ಖಂಡಿಸಿದ್ದಾರೆ. ಪ್ರಾದೇಶಿಕ ಸ್ಥಿರತೆ ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಭಾರತ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

PM Modi says Terrorism Has No Place In Our World mrq

ನವದೆಹಲಿ: ಇಸ್ರೇಲ್‌- ಹಮಾಸ್‌- ಹಿಜ್ಬುಲ್ಲಾ ಉಗ್ರರ ನಡುವೆ ಮತ್ತೊಂದು ಸುತ್ತಿನ ಭೀಕರ ಯುದ್ಧದ ಭೀತಿ ಎದುರಾಗಿರುವ ಹೊತ್ತಿನಲ್ಲೇ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೆ ಶಾಂತಿ ಮಂತ್ರ ಜಪಿಸಿದ್ದಾರೆ. ಜೊತೆಗೆ ಜಗತ್ತಿನಲ್ಲಿ ಉಗ್ರವಾದಕ್ಕೆ ಸ್ಥಾನವಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಹಿಜ್ಬುಲ್ಲಾ ಉಗ್ರರ ಮೇಲಿನ ದಾಳಿಯನ್ನು ಇಸ್ರೇಲ್‌ ತೀವ್ರಗೊಳಿಸಿರುವ ಹೊತ್ತಿನಲ್ಲಿ ನಡೆದ ಈ ಮಾತುಕತೆಯಲ್ಲಿ ಪಶ್ಮಿಮ ಏಷ್ಯಾದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಗಿದ್ದು, ಜಗತ್ತಿನಲ್ಲಿ ಉಗ್ರವಾದಕ್ಕೆ ಜಾಗವಿಲ್ಲ ಎಂದು ಮೋದಿ ಹೇಳಿದ್ದಾರೆ.

60 ಅಡಿ ಆಳದಲ್ಲಿದ್ದರೂ ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆಗೈದ ಇಸ್ರೇಲ್‌! ಬಾಂಬ್‌ ಶಬ್ದಕ್ಕೆ ಬೆಚ್ಚಿ ಸತ್ತಿರುವ ಶಂಕೆ

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಪ್ರಾದೇಶಿಕ ಉಲ್ಬಣಗಳನ್ನು ತಡೆಗಟ್ಟಲು ಮತ್ತು ಎಲ್ಲಾ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಇದು ನಿರ್ಣಾಯಕ. ಶಾಂತಿ ಮತ್ತು ಸ್ಥಿರತೆಯ ಮರು ಸ್ಥಾಪನೆ ಮಾಡುವ ಪ್ಯಯತ್ನಗಳನ್ನು ಬೆಂಬಲಿಸಲು ಭಾರತ ಬದ್ಧವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಕಳೆದ ವಾರ ಹಿಜ್ಬುಲ್ಲಾಗಳ 7 ಉನ್ನತ ಶ್ರೇಣಿಯ ಕಮಾಂಡರ್‌ಗಳನ್ನು ಹಾಗೂ ಅದರ ಪ್ರಮುಖ ನಾಯಕ ಹಸನ್‌ ನಸ್ರಲ್ಲಾನನ್ನು ಇಸ್ರೇಲ್‌ ಸೇನೆ ಹತ್ಯೆಗೈದಿತ್ತು. ಇದರ ಬೆನ್ನಲ್ಲೇ ಮೋದಿ- ನೆತನ್ಯಾಹು ನಡುವೆ ಯುದ್ಧ ಸಂಬಂಧಿತ ಮಾತುಕತೆ ನಡೆದಿದೆ. ಈ ಮೊದಲು ರಷ್ಯಾ- ಉಕ್ರೇನ್‌ ಯುದ್ಧದ ವಿಷಯದಲ್ಲೂ ಮೋದಿ ‘ಇದು ಯುದ್ಧದ ಯುಗವಲ್ಲ’ ಎನ್ನುವ ಮೂಲಕ ಶಾಂತಿ ಸ್ಥಾಪನೆಗೆ ಕರೆ ನೀಡಿದ್ದರು.

ಕೆಣಕಿದವರು ಉಳಿದವರಿಲ್ಲ; ಹಿಜ್ಬುಲ್ಲಾ ಟಾಪ್‌ ಬಾಸ್‌ಗಳನ್ನ ಮಟಾಷ್ ಮಾಡಿರೋ ಇಸ್ರೇಲ್ ಸಾಮಾರ್ಥ್ಯ ಕೇಳಿದ್ರೆ ಶಾಕ್ ಆಗ್ತೀರಿ

Latest Videos
Follow Us:
Download App:
  • android
  • ios