'ಮಿಸ್ಟರ್ ಮಿನಿಸ್ಟರ್, ಇದು ಪ್ರಧಾನಿಯ ಕರ್ತವ್ಯ, ಪುಕ್ಕಟೆ ಪ್ರಚಾರ ಬದಿಗಿಡಿ'
ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ/ ರೈಲ್ವೆ ಸಚಿವ ಪಿಯೂಶ್ ಗೋಯಲ್ ಗೆ ಅದ್ಭುತ ಸಲಹೆ/ ಪ್ರಧಾನ ಮಂತ್ರಿಗಳು ಅವರ ಕರ್ತವ್ಯ ಮಾಡಿದ್ದಾರೆ/ ಈ ರೀತಿ ಹೊಗಳುತ್ತ ಸಾಗಿದರೆ ಅಂತ್ಯ ಎಲ್ಲಿ?
ನವದೆಹಲಿ (ಏ. 26) ಕೊರೋನಾ ಎರಡನೇ ಅಲೆ ಇಡೀ ದೇಶವನ್ನು ವ್ಯಾಪಿಸುತ್ತಿದೆ. ಈ ನಡುವೆ ಟ್ವಿಟರ್ ನಲ್ಲಿ ಸಣ್ಣ ಮಟ್ಟದ ಸಲಹಾ ಸಮರವೂ ನಡೆದಿದೆ. ಕೇಂದ್ರ ರೈಲ್ವೆ ಸಚಿವರಿಗೆ ಅದ್ಭುತ ಸಲಹೆ ನೀಡಲಾಗಿದೆ.
ಟ್ವೀಟ್ ಮಾಡಿದ್ದ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ , ಆಕ್ಸಿಜನ್ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಮೇಲಿನ ಕಸ್ಟಮ್ ಡ್ಯೂಟಿ ಮತ್ತು ಸೆಸ್ ತೆಗೆದು ಹಾಕಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ. ಕೊರೋನಾ ಲಸಿಕೆಗಳು ಸಹ ಕಸ್ಟಮ್ ಡ್ಯೂಟಿಯಿಂದ ಮುಕ್ತವಾಗಿವೆ. ಇದು ಕಡಿಮೆ ದರದಲ್ಲಿ ಎಲ್ಲ ಕಡೆ ಸಿಗುವಂತೆ ಆಗಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದರು.
ಮತ್ತೆ ಲಾಕ್ ಡೌನ್, ಯಾವುದಕ್ಕೆ ಮಾತ್ರ ಅವಕಾಶ?
ಆದರೆ ಇದಕ್ಕೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ ಮೇಜರ್ ಜನರಲ್ ಡಾ. ಯಶ್ ಮೋರ್, ಇದು ಅವರ ಕರ್ತವ್ಯ ಮಿಸ್ಟರ್ ಮಿನಿಸ್ಟರ್, ಎಲ್ಲ ಸಂಸ್ಥೆಗಳು ಈ ರೀತಿ ಹೊಗಳುವುದು, ಪೂಜೆ ಮಾಡುವುದನ್ನು ಆರಂಭಿಸಿದರೆ ಇದಕ್ಕೊಂದು ಅಂತ್ಯ ಇದೆಯೇ? ಪ್ರಚಾರವನ್ನು ಬದಿಗಿಟ್ಟು ಕೆಲಸದಲ್ಲಿ ತೊಡಗಿಕೊಳ್ಳಿ. ಈ ರೀತಿ ವ್ಯಕ್ತಿ ಹೊಗಳಿಕೆ ನೆಗೆಟಿವ್ ಪರಿಣಾಮ ಉಂಟುಮಾಡಬಲ್ಲದು. ದೇಶವೇ ವಿಪತ್ತು ಎದುರಿಸುತ್ತಿರುವಾಗ ಇದೆಲ್ಲ ಬೇಡ.. ದಯವಿಟ್ಟು ನನ್ನ ಸಲಹೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ, ಎಂದು ಸಲಹೆ ಕೊಟ್ಟಿದ್ದಾರೆ.
ಆಕ್ಸಿನಕ್ ಗೆ ಸಂಬಂಧಿಸಿದ ವಸ್ತುಗಳು ಸೆಸ್ ನಿಂದ ಮುಕ್ತವಾದವು ಎನ್ನುವುದು ಒಂದು ಸುದ್ದಿಯಾದರೆ ರಾಷ್ಟ್ರೀಯ ಪವಿಪತ್ತು ಸಂದರ್ಭದಲ್ಲಿ ಅಧಿಕಾರದಲ್ಲಿ ಇರುವವರು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮೇಜರ್ ತಿಳಿಸಿಕೊಟ್ಟಿದ್ದಾರೆ.