ಪ್ರಧಾನಿ ಮೋದಿ ಮತ್ತೆ ವಿಶ್ವದ ನಂ.1 ಜನಪ್ರಿಯ ನಾಯಕ, ಜಾಗತಿಕ ಅಪ್ರೂವಲ್ ರೇಟಿಂಗ್ ಬಿಡುಗಡೆ!

ಮಾರ್ನಿಂಗ್‌ ಕನ್ಸಲ್ಟ್‌ ಸಂಸ್ಥೆ ನಡೆಸುವ ವಿಶ್ವದ ಅತಿ ಜನಪ್ರಿಯ ನಾಯಕರ ಸಮೀಕ್ಷೆ ವರದಿ ಬಹಿರಂಗವಾಗಿದೆ. ಜನಪರಿ 30 ರಿಂದ ಫೆ.5ರ ಅವಧಿಯಲ್ಲಿ ನಡೆಸಿದ ಈ ಸಮೀಕ್ಷಾ ವರದಿಯಲ್ಲಿ ಮತ್ತೆ ಪ್ರಧಾನಿ ಮೋದಿ ಗರಿಷ್ಠ ಅಪ್ರೂವಲ್ ರೇಟಿಂಗ್ ಮೂಲಕ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ.
 

PM Modi retain most popular leader in world title US based morning consult announces approval rating ckm

ನವದೆಹಲಿ(ಫೆ.22) ಪ್ರಧಾನಿ ನರೇಂದ್ರ ಮೋದಿ ಮತ್ತೆ ಜಾಗತಿಕ ಮಟ್ಟದ ಅತ್ಯಂತ ಜನಪ್ರಿಯ ನಾಯಕ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಮೆರಿಕ ಮೂಲದ ಗ್ಲೋಬಲ್ ಡಿಸಿಶನ್ ಇಂಟಲಿಜೆನ್ಸಿ ಎಜೆನ್ಸಿ ಆಗಿರುವ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸುವ ವಿಶ್ವದ ಅತೀ ಜನಪ್ರಿಯ ನಾಯಕರ ಸಮೀಕ್ಷಾ ವರದಿ ಬಿಡುಗಡೆಯಾಗಿದೆ. ಪ್ರಧಾನಿ ಮೋದಿ ಶೇಕಡಾ 77.5 ರಷ್ಟು ಅಪ್ರೂವಲ್ ಪಡೆಯುವ ಮೂಲಕ ಮತ್ತೆ ನಂ.1 ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದಾರೆ. ಮೋದಿ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಶೇಕಡಾ 37 ಅಪ್ರೂವಲ್ ರೇಟಿಂಗ್‌ನೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.

ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗ ಬಿಡುಗಡೆಯಾಗಿರುವ ಈ ಅಧ್ಯಯನ ವರದಿ ಬಿಜೆಪಿಯ ಉತ್ಸಾಹ ಮತ್ತಷ್ಟು ಡಬಲ್ ಮಾಡಿದೆ. ಜನವರಿ 30 ರಿಂದ ಫೆಬ್ರವರಿ 5ರವರೆಗೆ ಅವಧಿಯಲ್ಲಿ ಮಾರ್ನಿಂಗ್ ಕನ್ಸಲ್ಟ್ ಈ ಅಧ್ಯಯನ ಸಮೀಕ್ಷೆ ನಡೆಸಿದೆ. ಇದೀಗ ಮತ್ತೆ ಪ್ರಧಾನಿ ಮೋದಿಯೋ ವಿಶ್ವದ ಜನಪ್ರಿಯ ನಾಯಕ ಅನ್ನೋದು ಮತ್ತೆ ಸಾಬೀತಾಗಿದೆ.  

ಪುಟ್ಟ ಮಗುವನ್ನು ಎತ್ತಿ ಹಿಡಿದು ತೊಂದರೆಕೊಡಬೇಡಿ, ಭಾಷಣದ ನಡುವೆ ಮೋದಿ ಹೃದಯಸ್ಪರ್ಶಿ ನಡೆ!

ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೆ ಮಾನ್ಯುಯೆಲ್ ಲೊಪೆಜ್ 64.5 ಶೇಕಡಾ ಅಪ್ರೂವಲ್ ರೇಟಿಂಗ್ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಬ್ರಿಟನ್ ಪ್ರಧಾನಿ ರಿಶಿ ಸುನಕ್ ಶೇಕಡಾ 27 ರಷ್ಟು ಅಪ್ರೂವಲ್ ರೇಟಿಂಗ್‌ನೊಂದಿಗೆ 12 ಸ್ಥಾನದಲ್ಲಿದ್ದಾರೆ. ಜರ್ಮನಿಯ ಚಾನ್ಸಲರ್ ಒಲಾಫ್ ಸ್ಕೂಲ್ಜ್ ಶೇಕಡಾ 20 ರಷ್ಟು ಅಪ್ರೂವಲ್ ರೇಟಿಂಗ್‌ನೊಂದಿಗೆ 15ನೇ ಸ್ಥಾನದಲ್ಲಿದ್ದಾರೆ.

 

 

ಮಾರ್ನಿಂಗ್ ಕನ್ಸಲ್ಟ್ ಸರ್ವೇ ವರದಿ ಬಹಿರಂಗವಾದ ಬೆನ್ನಲ್ಲೇ ಜಾಗತೀಕ ಮಟ್ಟದ ರಾಜಕೀಯ ವಿಶ್ಲೇಷಕರು, ಮಾಜಿ ರಾಯಭಾರಿಗಳು ಪಾಶ್ಚಿಮಾತ್ಯ ದೇಶಗಳ ಮಾಧ್ಯಮಗಳಿಗೆ ತಿಳಿ ಹೇಳಿದ್ದಾರೆ. ಪ್ರಧಾನಿ ಮೋದಿ ಸತತ ಜನಪ್ರಿಯ ನಾಯಕ ಪಟ್ಟ ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಶೇಕಡಾ 77 ರಷ್ಟು ಅಪ್ರೋವಲ್ ರೇಟಿಂಗ್ ಪಡೆದಿದ್ದಾರೆ. ಹೀಗಾಗಿ ಸದಾ ಮೋದಿ ವಿರುದ್ಧ ನೆಗೆಟೀವ್ ಸುದ್ದಿಗಳನ್ನೇ ಬಿತ್ತರ ಮಾಡುವ ಮಾಧ್ಯಮಗಳೇ ಅವರ ಪಾಸಿಟೀವ್ ಕುರಿತು ಜನರಿಗೆ ತೋರಿಸಿ ಎಂದು ಪಾಶ್ಚಿಮಾತ್ಯ ಮಾಧ್ಯಮಗಳ ಕಾಲೆಳೆದಿದ್ದಾರೆ.

ಕೇಂದ್ರದ ನಿಯಮಕ್ಕೆ ತಲೆಬಾಗಿದ ಚೀನಾ ಮೊಬೈಲ್‌ ದೈತ್ಯ, ಭಾರತದ ಕಂಪನಿಗಳ ಜೊತೆ ಒಪ್ಪಂದ!

2023ರ ಡಿಸೆಂಬರ್ ತಿಂಗಳಲ್ಲಿ ಮಾರ್ನಿಂಗ್ ಕನ್ಸಲ್ಟ್ ಬಿಡುಗಡೆ ಮಾಡಿದ್ದ ವರದಿಯಲ್ಲೂ ಮೋದಿ ವಿಶ್ವದ ನ.1 ಜನಪ್ರಿಯ ನಾಯಕರಾಗಿ ಗುರುತಿಸಿಕೊಂಡಿದ್ದರು. ಈವೇಳೆ ಮೋದಿ ಶೇಕಡಾ 76 ರಷ್ಟು ಅಪ್ರೂವಲ್ ರೇಟಿಂಗ್ ಪಡೆದಿದ್ದಾರೆ. ಇದೀಗ ಮೋದಿ ರೇಟಿಂಗ್ ಮತ್ತೆ ಹೆಚ್ಚಾಗಿದೆ. 
 

Latest Videos
Follow Us:
Download App:
  • android
  • ios