ನವದೆಹಲಿ(ಅ.16): ವಿಶ್ವ ಸಂಸ್ಥೆಯ ಅಂಗವಾಗಿರುವ ಆಹಾರ ಮತ್ತು ಕೃಷಿ ಸಂಸ್ಥೆಯ( Food and Agriculture Organisation)75ನೇ ವರ್ಷಾಚರಣೆ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ 75 ರೂಪಾಯಿ ನಾಣ್ಯ ಬಿಡುಗಡೆ ಮಾಡಿದ್ದಾರೆ. ವರ್ಚುವಲ್ ಕ್ರಾಯಕ್ರಮದ  ಮೂಲಕ ಪ್ರಧಾನಿ ಮೋದಿ ವಿಶೇಷ ನಾಣ್ಯ ಬಿಡುಗಡೆ ಮಾಡಿ ಭಾಷಣ ಮಾಡಿದರು.

ರಾಜಮಾತೆ ಸಿಂಧಿಯಾ ಜಯಂತಿ, 100 ರೂ. ನಾಣ್ಯ ಬಿಡುಗಡೆ ಮಾಡಿದ ಮೋದಿ

ಕೃಷಿ ಹಾಗೂ ಆಹಾರ ಸಂಸ್ಥೆಯ ವಜ್ರಮಹತ್ಸೋವ ಕಾರ್ಯಕ್ರಮದಲ್ಲಿ ಮೋದಿ,  17 ಹೊಸ ಜೈವಿಕ ಬಲವರ್ಧಿತ ಬೆಳೆ ಪ್ರಭೇದಗಳನ್ನು ಬಿಡುಗಡೆ ಮಾಡಿದರು.  ಇದೇ ವೇಳೆ ಕೃಷಿ ಬೆಳೆಗಳನ್ನು ಬೆಂಬಲ ಬೆಲೆಗೆ ಖರೀದಿಸುವ ಬಗ್ಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.

ಅಪ್ಪಟ ಬಂಗಾರ ಡಾ.ರಾಜ್‌ ಕುಮಾರ್‌ಗೆ 22 ಕ್ಯಾರೆಟ್ ಚಿನ್ನದ ನಾಣ್ಯದ ಗೌರವ! 

ರೈತರ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸುವ ಯೋಜನೆ ದೇಶದ ಆಹಾರ ಭದ್ರತೆ ಭಾಗವಾಗಿದೆ. ಹೀಗಾಗಿ ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಬದ್ಧವಾಗಿದೆ ಎಂದು ಮೋದಿ ಹೇಳಿದರು. ಇದೇ ವೇಳೆ ದೇಶದಲ್ಲಿ ಅಪೌಷ್ಟಿಕತೆ ನಿವಾರಿಸಲು ರಾಗಿ ಸೇರಿದಂತೆ ಪೌಷ್ಥಿಕ ಬೆಳೆಗಳನ್ನು ಬೆಳೆಯಲು ಕೇಂದ್ರ ಉತ್ತೇಜಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಎಪಿಎಂಸಿ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯ ಹಾಗೂ ಇತರ ಸೌಲಭ್ಯ ಹೆಚ್ಚಿಸಲು ಕೇಂದ್ರ ಸರ್ಕಾರ ಅವಿರತ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ. ಭಾರತದಲ್ಲಿ ಕೃಷಿ ಮಸೂಧೆ ವಿರೋಧದ ಬೆನ್ನಲ್ಲೇ ಪ್ರಧಾನಿ ಮೋದಿ ಭಾಷಣ ಇದೀಗ ಪ್ರಾಮುಖ್ಯತೆ ಪಡೆದುಕೊಂಡಿದೆ.