ಪ್ರಧಾನಿ ಮೋದಿ ಬಿಗಿದಪ್ಪಿ ಆಶೀರ್ವದಿಸಿದ ಜಗದ್ಗುರು ರಾಮಚಂದ್ರಾಚಾರ್ಯ, ವಿಡಿಯೋ ವೈರಲ್!
ಸದ್ಗುರು ಸೇವಾ ಸಂಘ ಟ್ರಸ್ಟ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯನ್ನು ಚಿತ್ರಕೂಟದ ಜಗದ್ಗುರು ರಾಮಚಂದ್ರಚಾರ್ಯ ಬಿಗಿದಪ್ಪಿ ಆಶೀರ್ವದಿಸಿದ್ದಾರೆ.

ಚಿತ್ರಕೂಟ(ಅ.27) ತುಳಸಿ ಪೀಠದ ಸದ್ಗುರು ಸೇವಾ ಸಂಘ ಟ್ರಸ್ಟ್ ಆಯೋಜಿಸಿದ ಕಾರ್ಯಕ್ರಮ ವಿಶೇಷ ಘಟನೆಗೆ ಸಾಕ್ಷಿಯಾಗಿತ್ತು. ಸಂಸ್ಕೃತ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯನ್ನು ತುಳಸಿ ಪೀಠದ ಜಗದ್ಗುರು ಶ್ರೀ ರಾಮಚಂದ್ರಾಚಾರ್ಯರು ಬಿಗಿದಪ್ಪಿ ಆಶೀರ್ವದಿಸಿದ ಅಪರೂಪದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.
ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ತುಳಸಿ ಮಠಕ್ಕೆ ತೆರಳಿದ ಪ್ರಧಾನಿ ಮೋದಿ, ಕಂಚ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಷ್ಟಾಧ್ಯಾಯಿ ಭಾಷಾ, ರಾಮಚಂದ್ರಾಚಾರ್ಯ ಚಿತ್ರಂ ಹಾಗೂ ಭಗವಾನ್ ಶ್ರೀ ಕೃಷ್ಠ ಕಿ ರಾಷ್ಟ್ರಲೀಲಾ ಎಂಬು ಮೂರು ಪುಸ್ತಕ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಮೋದಿಗೆ ಜಗದ್ಗುರುಗಳೇ ಹರಿಸಿದ್ದಾರೆ.
ಪುಸ್ತಕು ಬಿಡುಗಡೆಗೊಳಿಸಿ ಮಾತನಾಡಿದ ಮೋದಿ, ಮೊಘಲರು, ಸುಲ್ತಾರು, ಬ್ರಿಟಿಷರ್ ಸೇರಿದಂತೆ ಸರಿಸುಮಾರು 1,000 ವರ್ಷಗಳ ಕಾಲ ನಾವು ಗುಲಾಮರಾಗಿದ್ದೇವು. ಈ ದಾಳಿಕೋರರರು, ನಮ್ಮನ್ನು ಆಳಿದ ಎಲ್ಲರೂ ಮೊದಲು ಸಂಸ್ಕೃತ ಭಾಷೆಯನ್ನು ಸರ್ವ ನಾಶ ಮಾಡವು ಎಲ್ಲಾ ಪ್ರಯತ್ನ ಮಾಡಿದರು. ಒಂದು ಭಾಷೆಯನ್ನು ನಾಶ ಮಾಡಿದರೆ ಒಂದು ಸಂಸ್ಕೃತಿ ಅಳಿಸಿದಂತೆ. ಭಾರತ ಭಾರತ ಮತ್ತೆ ಪುಟಿದೇಳುತ್ತಿದೆ. ಇದೀಗ ಸಂಸ್ಕೃತ ಭಾಷೆ ನಳನಳಿಸಲು ಆರಂಭಿಸಿದೆ ಎಂದು ಮೋದಿ ಹೇಳಿದ್ದಾರೆ.
ದೇಶದಲ್ಲಿ ಮೊದಲ ಉಪಗ್ರಹ ಆಧಾರಿತ ಜಿಯೋ ಸ್ಪೇಸ್ ಫೈಬರ್ ಪರಿಚಯಿಸಿದ ರಿಲಯನ್ಸ್ ಜಿಯೋ
ಶ್ರೀರಾಮ ಆಶೀರ್ವಾದ ದೇಶದ ಮೂಲೆ ಮೂಲೆಯಲ್ಲಿ ಸಿಕ್ಕಿದೆ. ಇದೀಗ ಜಗದ್ಗುರುಗಳು ಆಶೀರ್ವಾದ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಕಾರ್ಯದಲ್ಲೂ ಶ್ರೀ ರಾಮಚಂದ್ರಾಚಾರ್ಯ ಜಗದ್ಗುರು ಸೇರಿದಂತೆ ಹಲವು ಗುರುಗಳು ಕೊಡುಗೆ ಸಲ್ಲಿಸಿದ್ದಾರೆ. ಇದೀಗ ತುಳಸಿ ಪೀಠದ ಜಗದ್ಗುರುಗಳಿಗೆ ಆಯೋಧ್ಯೆ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಲು ಆಹ್ವಾ ನೀಡಲಾಗಿದೆ. ಈ ವೇಳೆ ವೈಯುಕ್ತಿತವಾಗಿ ನಾನು ಶ್ರೀಗಳನ್ನು ಆಯೋಧ್ಯೆಗೆ ಆಹ್ವಾನಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.