ದೇಶದಲ್ಲಿ ಮೊದಲ ಉಪಗ್ರಹ ಆಧಾರಿತ ಜಿಯೋ ಸ್ಪೇಸ್ ಫೈಬರ್ ಪರಿಚಯಿಸಿದ ರಿಲಯನ್ಸ್ ಜಿಯೋ

ಮುಕೇಶ್ ಅಂಬಾನಿ ಶೀಘ್ರದಲ್ಲೇ ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್ ತರಹದ ಸೇವೆಯನ್ನು ಭಾರತದಲ್ಲಿ ಪ್ರಾರಂಭಿಸಲಿದ್ದಾರೆ. ರಿಲಯನ್ಸ್ ಜಿಯೋ, ದೇಶದಲ್ಲಿ ಮೊದಲ ಉಪಗ್ರಹ ಆಧಾರಿತ ಜಿಯೋ ಸ್ಪೇಸ್ ಫೈಬರ್ ಪರಿಚಯಿಸಲಿದೆ. ಈ ಬಗ್ಗೆ ಆಕಾಶ್ ಅಂಬಾನಿ ಪ್ರಧಾನಿ ಮೋದಿಗೆ ಡೆಮೊ ನೀಡಿದರು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Mukesh Ambani soon launch Elon Musks Starlink like service, Akash Ambani gives demo to PM Modi Vin

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಈಗಾಗಲೇ ಭಾರತದ ಇಂಟರ್‌ನೆಟ್‌ ಲೋಕದಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಕಳೆದ ಕೆಲವು ವರ್ಷಗಳಿಂದ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಹಲವಾರು ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ. ದೂರದ ಪ್ರದೇಶಗಳಿಗೆ ಜಿಯೋಫೈಬರ್ ಸಂಪರ್ಕವನ್ನು ತರುವ ಸಮಸ್ಯೆಗಳನ್ನು ಪರಿಹರಿಸಲು ಮುಕೇಶ್ ಅಂಬಾನಿ ಇತ್ತೀಚೆಗೆ ರಿಲಯನ್ಸ್ ಜಿಯೋ ಏರ್‌ಫೈಬರ್‌ನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಸದ್ಯ ಕಂಪನಿಯು ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್‌ನಂತಹ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪ್ರಾರಂಭಿಸಲು ಮುಂದಾಗಿದೆ.

ಪ್ರಗತಿ ಮೈದಾನದ 'ಭಾರತ ಮಂಟಪ'ದಲ್ಲಿ ಏಳನೇ ಆವೃತ್ತಿಯ 'ಇಂಡಿಯಾ ಮೊಬೈಲ್ ಕಾಂಗ್ರೆಸ್' (ಐಎಂಸಿ)ನ್ನು ಪ್ರಧಾನಿ ನರೇಂದ್ರ ಮೋದಿ ಇಂದು  ಉದ್ಘಾಟಿಸಿದರು. ಜಿಯೋ ಸ್ಪೇಸ್ ಫೈಬರ್‌,ಭಾರತದ ಮೊದಲ ಉಪಗ್ರಹ ಆಧಾರಿತ ಗಿಗಾ ಫೈಬರ್ ಸೇವೆಯಾಗಿದೆ. ಮುಕೇಶ್ ಅಂಬಾನಿ ಅವರ ಪುತ್ರ ಮತ್ತು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಆಕಾಶ್ ಅಂಬಾನಿ, ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಂಬರುವ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಪ್ರದರ್ಶಿಸಿದರು.

ಮನರಂಜನಾ ಉದ್ಯಮದಲ್ಲೂ ಅಂಬಾನಿಯದ್ದೇ ಸಾಮ್ರಾಜ್ಯ: ಡಿಸ್ನಿ ಹಾಟ್‌ಸ್ಟಾರ್‌ ಕೂಡ ರಿಲಯನ್ಸ್ ಪಾಲು!

ದೇಶದಾದ್ಯಂತದ ಆಯ್ದ ಶಿಕ್ಷಣ ಸಂಸ್ಥೆಗಳಿಗೆ 100 '5ಜಿ ಲ್ಯಾಬ್‌' ಗಳನ್ನು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿತರಿಸಿದರು. ಬಳಿಕ ಮಾತನಾಡಿದ ಅವರು, ತಂತ್ರಜ್ಞಾನದಲ್ಲಿನ ದೈನಂದಿನ ಬದಲಾವಣೆಗಳೊಂದಿಗಿನ ಭವಿಷ್ಯ ಇಲ್ಲಿದೆ. ದೇಶದಲ್ಲಿ ನಾವು 5ಜಿ ಸೇವೆ ವಿಸ್ತರಿಸುವುದು ಮಾತ್ರವಲ್ಲದೆ 6ಜಿ ತಂತ್ರಜ್ಞಾನದಲ್ಲೂ ಮುಂಚೂಣಿಯತ್ತ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು. 

ಈ ವೇಳೆ ಅಧಿಕ ವೇಗದ ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ಒದಗಿಸಲು ಉಪಗ್ರಹ ಆಧಾರಿತ ಭಾರತದ ಮೊದಲ ಗಿಗಾ ಫೈಬರ್‌ ಸೌಕರ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ ಎಂದು ರಿಲಯನ್ಸ್ ಜಿಯೊ ಘೋಷಿಸಿದೆ. 'ಭಾರತದಲ್ಲಿ ಮೊದಲ ಬಾರಿಗೆ ಬ್ರಾಡ್‌ಬ್ಯಾಂಡ್ ಇಂಟರ್ನೆಟ್‌ನ್ನು ಅಭಿವೃದ್ಧಿಪಡಿಸಲು ಜಿಯೋ ಲಕ್ಷಾಂತರ ವ್ಯವಹಾರಗಳನ್ನು ಸಕ್ರಿಯಗೊಳಿಸಿದೆ. ಜಿಯೋ ಸ್ಪೇಸ್ ಫೈಬರ್‌ ನೊಂದಿಗೆ, ಇನ್ನೂ ಲಕ್ಷಾಂತರ ಜನರನ್ನು ಕವರ್ ಮಾಡಲು ನಾವು ನಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತೇವೆ' ಎಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿದರು. 

ಅಂಬಾನಿಯ ಐಷಾರಾಮಿ ಜಿಯೋ ಮಾಲ್‌ನಲ್ಲಿ ಮಳಿಗೆ ತೆರೆಯಲಿರೋ ವಿಶ್ವದ ನಂ. 1 ಶ್ರೀಮಂತ ವ್ಯಕ್ತಿ: ತಿಂಗಳ ಬಾಡಿಗೆ ಎಷ್ಟು ನೋಡಿ..

JioSpaceFiber ಆನ್‌ಲೈನ್ ಸರ್ಕಾರ, ಶಿಕ್ಷಣ, ಆರೋಗ್ಯ ಮತ್ತು ಮನರಂಜನಾ ಸೇವೆಗಳಿಗೆ ಗಿಗಾಬಿಟ್ ಪ್ರವೇಶದೊಂದಿಗೆ ಹೊಸ ಡಿಜಿಟಲ್ ಸಮಾಜದಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಎಲ್ಲರಿಗೂ ಅವಕಾಶ ನೀಡುತ್ತದೆ' ಎಂದು ಮಾಹಿತಿ ನೀಡಿದರು. ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ (ಐಎಂಸಿ) ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿದ್ದು, ಇಂದಿನಿಂದ ಅಕ್ಟೋಬರ್‌ 29ರ ವರೆಗೆ ನಡೆಯುತ್ತಿದೆ.

Latest Videos
Follow Us:
Download App:
  • android
  • ios