ನವದೆಹಲಿ[ಜ.27]: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣದಲ್ಲಿ ಕರ್ನಾಟಕದ ಪದ್ಮಶ್ರೀ ಪುರಸ್ಕಾರ ವಿಜೇತೆ ಸಾಲುಮರದ ತಿಮ್ಮಕ್ಕ ಅವರನ್ನು ಸ್ಮರಿಸಿ, ಅವರ ಸಾಧನೆಯನ್ನು ಕೊಂಡಾಡಿದರು.

‘ಕಳೆದ ವರ್ಷ ಮಾಚ್‌ರ್‍ನಲ್ಲಿ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವಿಡಿಯೋ ಭಾರೀ ಸುದ್ದಿ ಮಾಡಿತು. ಹೇಗೆ 107 ವರ್ಷ ವಯಸ್ಸಿನ ಮಾತೃಸ್ವರೂಪಿ ಮಹಿಳೆಯೊಬ್ಬರು ಶಿಷ್ಟಾಚಾರವನ್ನು ಮುರಿದು ರಾಷ್ಟ್ರಪತಿಗೆ ಆಶೀರ್ವದಿಸಿದರು ಎಂಬುದೇ ಆ ಸುದ್ದಿಯಾಗಿತ್ತು. ಆ ಮಹಿಳೆಯೆಂದರೆ ಸಾಲುಮರದ ತಿಮ್ಮಕ್ಕ. ಕರ್ನಾಟಕದಲ್ಲಿ ಅವರನ್ನು ವೃಕ್ಷಮಾತೆ ಎಂದು ಕರೆಯುತ್ತಾರೆ. ಅದು ಪದ್ಮಶ್ರೀ ಪುರಸ್ಕಾರ ಪ್ರದಾನ ಸಂದರ್ಭದಲ್ಲಿ ನಡೆದ ಪ್ರಸಂಗವಾಗಿತ್ತು. ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರ ಅತ್ಯದ್ಭುತ ಕೊಡುಗೆಯನ್ನು ದೇಶ ಗುರುತಿಸಿ ಗೌರವಿಸಿದೆ’ ಎಂದು ಮೋದಿ ಹೇಳಿದರು.

ಖಾದಿ ಉಜ್ವಲ ಭವಿಷ್ಯಕ್ಕಿರುವ ಹಾದಿ: ಮನ್ ಕಿ ಬಾತ್‌ನಲ್ಲಿ ಮೋದಿ!

‘ಈ ವರ್ಷ ಕೂಡ ಇದೇ ರೀತಿ ಸಾಮಾನ್ಯ ಹಿನ್ನೆಲೆಯಿಂದ ಬಂದವರನ್ನು ಗುರುತಿಸಿ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ. ಇದು ಧನ್ಯತಾ ಭಾವ ಮೂಡಿಸುತ್ತದೆ. ಪುರಸ್ಕೃತರು ಮಾಡಿದ ಸಾಧನೆಯನ್ನು ಓದಿರಿ. ಅದು ಸಮಾಜಕ್ಕೆ ಉತ್ತೇಜನ ನೀಡುತ್ತದೆ’ ಎಂದರು.

ಕಳೆದ ವರ್ಷ ತಿಮ್ಮಕ್ಕ ಅವರು ಪದ್ಮಶ್ರೀ ಸ್ವೀಕರಿಸುವಾಗ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಹಿರಿಯರು ತಮಗಿಂತ ಕಿರಿಯರನ್ನು ಆಶೀರ್ವದಿಸಿ ಹರಸುವುದು ಭಾರತದ ಸಂಸ್ಕೃತಿ ಎಂದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು.

ಸಾಲು ಮರದ ತಿಮ್ಮಕ್ಕ ಬಗ್ಗೆ ಗೊತ್ತಿಲ್ವಾ? ತಮಿಳು ವೇದಿಕೆ ಮೇಲೆ ತಡಬಡಾಯಿಸಿದ ರಶ್ಮಿಕಾ!