ನವದೆಹಲಿ(ಜೂ.26): ದೇಶದಲ್ಲಿ ಕೊರೋನಾ ವೈರಸ ಮೀತಿ ಮೀರುತ್ತಿದೆ. ಆದರೆ ಇತರ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕಡಿಮೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಯೋಗಿ ಆದಿತ್ಯನಾಥ್ ಯುಪಿ ಸರ್ಕಾರಕ್ಕೆ ಬೆಸ್ಟ್ ಸರ್ಟಿಫಿಕೆಟ್ ನೀಡಿದ್ದಾರೆ. ಯುರೋಪ್‌ನ ನಾಲ್ಕು ದೇಶಗಳನ್ನು ಒಟ್ಟಗೂಡಿಸಿದರೆ 24 ಕೋಟಿ ಜನಂಖ್ಯೆ ಆಗಲಿದೆ. ಇತ್ತ ಉತ್ತರ ಪ್ರದೇಶದಲ್ಲೂ 24 ಕೋಟಿ ಜನ ಸಂಖ್ಯೆ ಇದೆ ಆದರೆ ಕೊರೋನಾ ಸಾವಿನ ಪ್ರಮಾಣ ಯುಪಿಯಲ್ಲಿ ಅತ್ಯಂತ ಕಡಿಮೆ ಎಂದಿದ್ದಾರೆ.

ಕರ್ನಾಟಕದಲ್ಲಿ ಶುಕ್ರವಾರ ಕೊರೋನಾ ಸ್ಫೋಟ: 11 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಯುರೋಪ್ ರಾಷ್ಟ್ರಗಳಾದ ಇಂಗ್ಲೆಂಡ್ ಫ್ರಾನ್ಸ್, ಇಟಲಿ ಹಾಗೂ ಸ್ಪೇನ್ ಜನಸಂಖ್ಯೆ ಒಟ್ಟು 24 ಕೋಟಿ. ಉತ್ತರ ಪ್ರದೇಶದಲ್ಲಿ 24 ಕೋಟಿ ಜನಸಂಖ್ಯೆ ಇದೆ. ಆದರೆ ಯುರೋಪ್‌ನ 4 ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಸಾವಿನ ಸಂಖ್ಯೆ 1,30,000. ಇತ್ತ ಉತ್ತರ ಪ್ರದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆ 600.

ಬೆಂಗಳೂರಲ್ಲಿ ಲಾಕ್‌ಡೌನ್ ಇಲ್ಲ, ಪೆಟ್ರೋಲ್-ಡೀಸೆಲ್ ಕೈಗೆಟುಕುತ್ತಿಲ್ಲ; ಜೂ.26ರ ಟಾಪ್ 10 ಸುದ್ದಿ!

ಸಾವಿನ ಪ್ರಮಾಣ ಕಡಿಮೆ ಇದೆ ನಿಜ. ಆದರೆ ಪ್ರತಿ ಜೀವಕ್ಕೂ ಅಷ್ಟೇ ಬೆಲೆ ಇದೆ. ಕಡಿಮೆ ಸಾವು ಎಂದು ಸಮಾಧಾನ ಪಟ್ಟುಕೊಳ್ಳುವುದಲ್ಲ. ಬದಲಾಗಿ ಒಂದೂ ಸಾವಾಗದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಆತ್ಮನಿರ್ಭರ್ ಉತ್ತರ ಪ್ರದೇಶ ರೋಝ್‌ಗಾರ್ ಅಭಿಯಾನ ಉದ್ಘಾಟಿಸಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಉತ್ತರ ಪ್ರದೇಶ ನಿವಾಸಿಗಳ ಜೊತೆ ಮಾತನಾಡಿದ ಮೋದಿ, ಕೊರೋನಾ ಹೊಡೆದೋಡಿಸಲು ಪ್ರತಿಯೊಬ್ಬ ನಾಗರೀಕ ಸಹಕರಿಸಬೇಕು ಎಂದು ಮನವಿ ಮಾಡಿದರು. ಯೋಗಿ ಆದಿತ್ಯನಾಥ್ ಸರ್ಕಾರ ಕೊರೋನಾ ವೈರಸ್ ವಿರುದ್ಧ ಶಕ್ತವಾಗಿ ಹೋರಾಡುತ್ತಿದೆ. ಇದಕ್ಕೆ ನಿಮ್ಮ ಬೆಂಬಲವೂ ಬೇಕಿದೆ. ಪ್ರತಿಯೊಬ್ಬ ಉತ್ತರ ಪ್ರದೇಶದ ಪ್ರಜೆಯೂ ಕೊರೋನಾ ವಾರಿಯರ್. ಹೀಗಾಗಿ ಸಾಕಷ್ಟು ಎಚ್ಚರ ವಹಿಸಬೇಕು ಎಂದರು.