ಬೆಂಗಳೂರು, (ಜೂನ್.26): ರಾಜ್ಯದಲ್ಲಿ  24 ಗಂಟೆಯ ಅವಧಿಯಲ್ಲಿ 445 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 10 ಮಂದಿ ಮೃತಪಟ್ಟಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಇಂದು (ಶುಕ್ರವಾರ) ಕೊರೋನಾ ಹೆಲ್ತ್ ಬುಲೆಟಿನ್ ಪ್ರಕಟಿಸಿದ್ದು, ರಾಜ್ಯದಲ್ಲಿ ಒಂದೇ ದಿನ 445 ಹೊಸ ಪ್ರಕರಣಗಳು ಕಂಡು ಬಂದಿವೆ. ಈ ಮೂಲಕ ಸೋಂಕಿತರ ಸಂಖ್ಯೆ 11,005ಕ್ಕೆ ಏರಿಕೆಯಾಗಿದೆ.

ಬೆಂಗಳೂರಲ್ಲಿ ಲಾಕ್‌ಡೌನ್ ಇಲ್ಲ, ಪೆಟ್ರೋಲ್-ಡೀಸೆಲ್ ಕೈಗೆಟುಕುತ್ತಿಲ್ಲ; ಜೂ.26ರ ಟಾಪ್ 10 ಸುದ್ದಿ!

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 10 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 180ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ 6,916 ಜನ ಗುಣಮುಖರಾಗಿದ್ದು, 3905 ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ 144 ಮಂದಿಗೆ ಸೋಂಕು ಕಂಡು ಬಂದಿದ್ದು, 3 ಮಂದಿ ಬಲಿಯಾಗಿದ್ದಾರೆ. ಇದರಿಂದ ರಾಜಧಾನಿಯಲ್ಲಿ ಸಾವಿನ ಸಂಖ್ಯೆ 81ಕ್ಕೆ ಏರಿಕೆಯಾಗಿದೆ.
"

ಶುಕ್ರವಾರದ ಜಿಲ್ಲಾವಾರು ಅಂಕಿ-ಅಂಶ
ಬೆಂಗಳೂರಿನಲ್ಲಿ 144, ಬಳ್ಳಾರಿ 47, ಕಲಬುರಗಿ 42, ಕೊಪ್ಪಳ 36, ದಕ್ಷಿಣ ಕನ್ನಡ 33, ಧಾರವಾಡ 30, ರಾಯಚೂರು 14, ಗದಗ 12, ಚಾಮನರಾಜನಗರ 11, ಉಡುಪಿ 9, ಶಿವಮೊಗ್ಗ, ಕೋಲಾರ, ಬಾಗಲಕೋಟೆ, ಮಂಡ್ಯ, ಶಿವಮೊಗ್ಗ, ಉತ್ತರ ಕನ್ನಡ ತಲಾ  6, ಮೈಸೂರು 5, ಚಿಕ್ಕಮಗಳೂರು 4, ಕೊಡಗು 4, ಬೆಂಗಳೂರು ಗ್ರಾಮಾಂತರ 3, ವಿಜಯಪುರ, ತುಮಕೂರು, ಹಾವೇರಿ ತಲಾ 2, ರಾಮನಗರ, ದಾವಣಗೆರೆ, ಚಿತ್ರದುರ್ಗ, ಬೆಳಗಾವಿ, ಬೀದರ್ ಜಿಲ್ಲೆಯಲ್ಲಿ ತಲಾ 1 ಪ್ರಕರಣಗಳು ಕಂಡು ಬಂದಿವೆ.