Asianet Suvarna News Asianet Suvarna News

ಕೊರೋನಾ ವಿರುದ್ಧ ಹೋರಾಟದಲ್ಲಿ ಭಾರತೀಯ ಸಶಸ್ತ್ರ ಪಡೆ; ಮೋದಿ ಶ್ಲಾಘನೆ!

ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ತನ್ನೆಲ್ಲಾ ಶಕ್ತಿಗಳನ್ನು ಬಳಸಿಕೊಳ್ಳುತ್ತಿದೆ. ಭಾರತೀಯ ಸೇನೆ, ನೌಕಾಪಡೆ, ವಾಯುಸೇನೆ ಪರಿಸ್ಥಿತಿ ನಿಯಂತ್ರಣಕ್ಕೆ ಅವಿರತ ಪ್ರಯತ್ನ ಮಾಡುತ್ತಿದೆ. ಮೂರು ಭದ್ರತಾ ಪಡೆಗಳ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. 

PM Modi praise Indian armed forces for strengthening fight against COVID 19 ckm
Author
Bengaluru, First Published May 6, 2021, 7:30 PM IST

ನವದೆಹಲಿ(ಮೇ.06): ದೇಶದಲ್ಲಿ ಕೆಳೆದ ಕೆಲ ವಾರಗಳಿಂದ ಕೊರೋನಾ ಪ್ರಕರಣ ಗಣನೀಯವಾಗಿ ಏರಿಕೆಯಾಗಿದೆ. ದೇಶದಲ್ಲಿ ಎದುರಾಗಿರುವ ತುರ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ತನ್ನ ಎಲ್ಲಾ ಶಕ್ತಿ ಬಳಸಿಕೊಂಡಿದೆ. ಇದರಲ್ಲಿ ಪ್ರಮುಖವಾಗಿ ಭೂ ಸೇನೆ, ವಾಯುಸೇನೆ ಹಾಗೂ ನೌಕಾಸೇನೆ ಗಡಿಯಾರದಂತೆ ಕೆಲಸ ಮಾಡುತ್ತಿದೆ. ಈ ಮೂಲಕ ದೇಶದ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಹೋರಾಡುತ್ತಿದೆ. ಮೂರು ಭದ್ರತಾ ಪಡೆಗಳ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ನೌಕಾಪಡೆ ಕಾರ್ಯಾಚರಣೆ ಪರಿಶೀಲಿಸಿದ ಪ್ರಧಾನಿ ಮೋದಿ!

ಜಲ, ಭೂ ಹಾಗೂ ವಾಯು...ಕೊರೋನಾ ವಿರುದ್ಧದ ನಮ್ಮ ಹೋರಾಟವನ್ನು ಬಲಪಡಿಸುವಲ್ಲಿ ನಮ್ಮ ಸಶಸ್ತ್ರ ಪಡೆಗಳು ನಿರಂತರ ಕೆಲಸ ಮಾಡುತ್ತಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

'Jal', 'Thal' and 'Nabh'...our armed forces have left no stone unturned in strengthening the fight against COVID-19. https://t.co/JOcRRrhJgR

— Narendra Modi (@narendramodi) May 6, 2021

ವೈಜ್ಞಾನಿಕ ಸಮುದಾಯ, ಆರೋಗ್ಯ ವೃತ್ತಿಪರರು, ನಾಗರಿಕ ಆಡಳಿತ, ಸಶಸ್ತ್ರ ಪಡೆಗಳು ಒಟ್ಟಾಗಿ ಹೋರಾಟ ಮಾಡುತ್ತಿದೆ. ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯದ DG AFMS, DRDO, OFB, DPSU, NCC, ಕಂಟೋನ್ಮೆಂಟ್ ಬೋರ್ಡ್‌ ಜೊತೆಯಾಗಿ ದೇಶಕ್ಕೆ ಎದುರಾಗಿರುವ ಸಾಂಕ್ರಾಮಿಕ ಪಿಡುಗು ತೊಲಗಿಸಲು ಕಾರ್ಯಸನ್ನದ್ಧವಾಗಿದೆ. 

ಕೊರೋನಾ ಎದುರಿಸಲು ಸೇನಾ ಪಡೆ ಸಿದ್ಧತೆ ಪರಿಶೀಲಿಸಿದ ಪ್ರಧಾನಿ ಮೋದಿ!

ವಿದೇಶಗಳಿಂದ ಆಮ್ಲಜನಕ ಸೇರಿದಂತೆ ವೈದ್ಯಕೀಯ ಸಲಕರಣೆಗಳನ್ನು ವಾಯುಸೇನೆ, ನೌಕಾಪಡೆ ಭಾರತಕ್ಕೆ ಸರಬರಾಜು ಮಾಡುತ್ತಿದೆ.  ಇನ್ನು ಡಿಆರ್‌ಡಿಒ ವಿದೇಶಗಳಿಂದ ಆಮದು ಮಾಡಿಕೊಂಡಿರುವ ಆಕ್ಸಿಜನ್ ಉತ್ಪಾದಕ ಘಟಕಗಳ ಸ್ಥಾಪನೆಯಲ್ಲಿ ತೊಡಗಿದೆ.  ಬಿಕ್ಕಟ್ಟು ಎದರಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆಯಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೂರು ಪಡೆಗಳಿಗೆ ನಿರ್ದೇಶ ನೀಡಿದ್ದಾರೆ. 

ಕೊರೋನಾ ನಿರ್ವಹಿಸಲು ಸೇನೆ ಸಜ್ಜು, ತಯಾರಿ ಪರಿಶೀಲಿಸಿದ ಪಿಎಂ!.

ಕೋವಿಡ್ ಕೇರ್ ಸೆಂಟರ್‌ಗೆ ವೈದ್ಯಕೀಯ ಸೌಲಭ್ಯಗಳ ತಕ್ಷಣದ ಅಗತ್ಯವನ್ನು ಪೂರೈಸಲು ಸಶಸ್ತ್ರ ಪಡೆ ಸನ್ನದ್ಧವಾಗಿದೆ. ತುರ್ತು ಅಗತ್ಯತೆಗಳನ್ನು ಪೂರೈಸೋ ಮೂಲಕ ದೇಶದಲ್ಲಿ ಎದುರಾದ ಕೊರತೆಯನ್ನು ನೀಗಿಸುತ್ತಿದೆ.  ಇದರ ಜೊತೆ ಮಿಲಿಟರಿ ಆಸ್ಪತ್ರೆಗಳನ್ನು ಸಾರ್ವಜನಿಕ ಬಳಕೆಗೆ ತೆರೆಯಲಾಗಿದೆ.

ವಿವಿಧ ಮಿಲಿಟರಿ ಆಸ್ಪತ್ರೆಗಳಲ್ಲಿ ಸುಮಾರು 750 ಹಾಸಿಗೆಗಳನ್ನು ನಾಗರಿಕ ಬಳಕೆಗಾಗಿ ಮೀಸಲಿಡಲಾಗಿದ್ದು, ಎಎಫ್‌ಎಂಎಸ್ 19 ಆಸ್ಪತ್ರೆಗಳು, 4,000 ಕ್ಕೂ ಹೆಚ್ಚು ಹಾಸಿಗೆಗಳು ಮತ್ತು 585 ಐಸಿಯು ಘಟಕಗಳನ್ನು ದೇಶಾದ್ಯಂತ ಮೀಸಲಿಟ್ಟಿದೆ. ದೆಹಲಿಯ ಮೂಲ ಆಸ್ಪತ್ರೆಯನ್ನು ಸಿಒವಿಐಡಿ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದ್ದು, ಸಾಮರ್ಥ್ಯವನ್ನು ಸುಮಾರು 400 ರಿಂದ 1,000 ಹಾಸಿಗೆಗಳಿಗೆ ಹೆಚ್ಚಿಸಲಾಗಿದೆ.

Follow Us:
Download App:
  • android
  • ios