Asianet Suvarna News Asianet Suvarna News

ಜಪಾನ್ ಪ್ರಧಾನಿ ಜೊತೆ ಮೋದಿ ಫೋನ್ ಮಾತುಕತೆ: ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಮಹತ್ವದ ಚರ್ಚೆ!

ಪ್ರಧಾನಿ ನರೇಂದ್ರ ಮೋದಿ ಇಂದು ಜಪಾನ್ ಪ್ರಧಾನಿ ಸುಗಾ ಯೋಶಿಹಿಡಾ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷೀಯ ಸಂಬಂಧ, ಇಂಡೋ-ಪೆಸಿಫಿಕ್ ಆರ್ಥಿಕತೆ ಸೇರಿದಂತೆ ಹಲವು ವಿಚಾರಗಳ ಕುರಿತು ಮೋದಿ ಚರ್ಚೆ ನಡೆಸಿದ್ದಾರೆ. ಮೋದಿ ದೂರವಾಣಿ ಮಾತುಕತೆ ವಿವರ ಇಲ್ಲಿದೆ.

PM modi phone call with Japan PM Yoshihide on Special Strategic Global Partnership ckm
Author
Bengaluru, First Published Mar 9, 2021, 9:04 PM IST

ನವದೆಹಲಿ(ಮಾ.09): ಭಾರತ ಹಾಗೂ ಜಪಾನ್ ನಡುವಿನ ಹಲವು ದ್ವಿಪಕ್ಷೀಯ ವ್ಯವಹಾರಗಳ ಕುರಿತು ಮಹತ್ವದ ಚರ್ಚೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಸುಗಾ ಯೋಶಿಹಿಡಾ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಜಪಾನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಸುಗಾ ಯೋಶಿಹಿಡಾಗೆ ಅಭಿನಂದನೆ ತಿಳಿಸಿದ ಮೋದಿ, ಮುಂದಿನ ಪಥ ಸುಗಮ ಹಾಗೂ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕೊರೋನಾ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ: ಮಾ.26ಕ್ಕೆ ಬಾಂಗ್ಲಾಗೆ ಭೇಟಿ!

ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವವು ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಪ್ರಗತಿ ಸಾಧಿಸಿದೆ.  ಪರಸ್ಪರ ನಂಬಿಕೆ ಮತ್ತು ಹಂಚಿಕೆಯ ಮೌಲ್ಯಗಳ ಆಧಾರದ ಮೇಲೆ ಭಾರತ ಹಾಗೂ ಜಪಾನ್ ಸಂಬಂಧ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲು ಮೋದಿ ಹಾಗೂ ಸುಗಾ ಸಮ್ಮತಿಸಿದರು.

ಮೋದಿಗೆ CERAWeek ಪ್ರಶಸ್ತಿ: ಇದು ಸಮಸ್ತ ಭಾರತೀಯರಿಗೆ ಸಂದ ಅವಾರ್ಡ್ ಎಂದ ಪ್ರಧಾನಿ!

ಭಾರತ ಹಾಗೂ ಜಪಾನ್ ಜಂಟಿಯಾಗಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ನಡೆಸುತ್ತಿದೆ.  ಇಂಡೋ-ಪೆಸಿಫಿಕ್ ಪ್ರದೇಶದ ಆರ್ಥಿಕ ಸ್ಥಿತಿಗತಿ,  ಪೂರೈಕೆ ಸರಪಳಿ ಕುರಿತು ಮಹತ್ವದ ಚರ್ಚೆ ನಡೆಸಿದರು.  ಇದೇ ವೇಳೆ ಭಾರತ, ಜಪಾನ್ ಮತ್ತು ಇತರ ಸಮಾನ ಮನಸ್ಕ ದೇಶಗಳ ನಡುವಿನ ಸಹಕಾರವನ್ನು ಮೋದಿ ಸ್ವಾಗತಿಸಿದರು.

ಭಾರತ ಹಾಗೂ ಜಪಾನ್ ಉತ್ತಮ ಸಂಬಂಧದಿಂದ ಆರ್ಥಿಕ ಸಹಭಾಗಿತ್ವ ಸಾಧಿಸಿದೆ. ಈ ಸಹಭಾಗಿತ್ವದಿಂದ ದೇಶದಲ್ಲಿರುವ ಆಗಿರುವ ಪ್ರಗತಿಯನ್ನು ಉಭಯ ನಾಯಕರು ಶ್ವಾಘಿಸಿದ್ದಾರೆ. ಇನ್ನು ಕೌಶಲ್ಯ ಅಭಿವೃದ್ಧಿ ಕುರಿತ  ಒಪ್ಪಂದ ಅಂತಿಮ ರೂಪ ನೀಡುವ ಕುರಿತು ಮೋದಿ ಚರ್ಚಿಸಿದರು.

21 ವಿದ್ವಾಂಸರ ವ್ಯಾಖ್ಯಾನಗಳೊಂದಿಗೆ ಭಗವದ್ಗೀತೆಯ 11 ಸಂಪುಟ ಲೋಕಾರ್ಪಣೆ ಮಾಡಿದ ಮೋದಿ!

ಇದೇ ವೇಳೆ ಕೊರೋನಾ ವೈರಸ್ ಕಡಿಮೆಯಾದ ಬಳಿಕ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಸುಗಾ ಅವರಿಗೆ ಮೋದಿ ಆಹ್ವಾನವನ್ನು ನೀಡಿದರು. ಈ ಮೂಲಕ ಭಾರತ ಹಾಗೂ ಜಪಾನ್ ದ್ವಿಪಕ್ಷೀಯ ಬಾಂದವ್ಯ ಅಭಿವೃದ್ಧಿಗೆ  ಮತ್ತಷ್ಟು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Follow Us:
Download App:
  • android
  • ios