ಶಹೀದ್ ದಿವಸ್: ಗಾಂಧಿ ಸಮಾಧಿಗೆ ಪ್ರಧಾನಿ ಮೋದಿ ನಮನ
ಹುತಾತ್ಮ ದಿನ ಅಂಗವಾಗಿ ಮಹಾತ್ಮಾ ಗಾಂಧಿ ಸಮಾಧಿಗೆ ಮೋದಿ ಪುಷ್ಪ ನಮನ| ಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿಜೀ ಸಮಾಧಿ| ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರಿಂದ ರಾಷ್ಟ್ರಪಿತನಿಗೆ ಗೌರವ ನಮನ| ಹುತಾತ್ಮ ದಿನದ ಅಂಗವಾಗಿ ಪ್ರಧಾನಿ ಮೋದಿ ಟ್ವೀಟ್|
ನವದೆಹಲಿ(ಜ.30): ಮಹಾತ್ಮಾ ಗಾಂಧಿಜೀ ಅವರ ಪುಣ್ಯತಿಥಿ ಅಂಗವಾಗಿ ಪ್ರಧಾನಿ ಮೋದಿ, ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿಜೀ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
ಮಹಾತ್ಮಾ ಗಾಂಧಿಜೀ ಪುಣ್ಯತಿಥಿಯನ್ನು ಶಹೀದ್ ದಿವಸ್(ಹುತಾತ್ಮ ದಿನ) ಎಂದು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಗಾಂಧಿ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.
ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಹಿರಿಯ ಬಿಜೆಪಿ ನಾಯಕ ಎಲ್ ಕೆ ಆಡ್ವಾಣಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮೂರೂ ಸೇನಾಪಡೆ ಮುಖ್ಯಸ್ಥರು ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರಿಗೆ ಗೌರವ ನಮನ ಸಲ್ಲಿಸಿದರು.
ಸ್ವಾತಂತ್ರ್ಯ ಸಿಕ್ಕ ದಿನ ಪಾಕ್‌ನಲ್ಲಿ ಇರಲು ಬಯಸಿದ್ದರು ಗಾಂಧಿ!
ಇದಕ್ಕೂ ಮೊದಲು ಹುತಾತ್ಮ ದಿನದ ಅಂಗವಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಬಾಪು ಅವರ ವ್ಯಕ್ತಿತ್ವ, ಸಿದ್ಧಾಂತ ಮತ್ತು ತತ್ವಗಳು ಯಾವಾಗಲೂ ಶ್ರೀಮಂತ ಭಾರತದ ಅಭ್ಯದಯಕ್ಕಾಗಿ ಪ್ರಯತ್ನಿಸಲು ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.