ಜಗತ್ತಿನ ಅತ್ಯಂತ ಎತ್ತರದ ರೈಲ್ವೇ ಸೇತುವೆ: ಕೆಲಸದ ಸಂಸ್ಕೃತಿ ಬದಲಾಗಿದೆ ಎಂದ ಮೋದಿ
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ | 1,486 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ
ಚೆನಾಬ್ ನದಿಯ ತಟದಿಂದ 359 ಮೀಟರ್ ಎತ್ತರದ ಸೇತುವೆಯ ಕಮಾನು ನಿರ್ಮಾಣವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದು ದೇಶದ ಬದಲಾದ ಕೆಲಸದ ಸಂಸ್ಕೃತಿಯ ಉದಾಹರಣೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಟ್ವೀಟ್ ನಲ್ಲಿ ಮೋದಿ, ಭಾರತೀಯರ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಜಗತ್ತಿಗೆ ಒಂದು ಉದಾಹರಣೆಯನ್ನು ನೀಡುತ್ತಿದೆ. ಈ ನಿರ್ಮಾಣ ಕಾರ್ಯವು ಆಧುನಿಕ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಭಾರತದ ಶಕ್ತಿಯನ್ನು ತೋರಿಸುತ್ತದೆ. ಇದು ಕೆಲಸದ ಸಂಸ್ಕೃತಿಯ ಬದಲಾವಣೆಯ ಉದಾಹರಣೆಯಾಗಿದೆ ಎಂದಿದ್ದಾರೆ.
ಬೇಟೆ ವೇಳೆ ಸ್ನೇಹಿತ ಬಲಿ, ನೊಂದ 3 ಸ್ನೇಹಿತರ ಆತ್ಮಹತ್ಯೆ!
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಲಿರುವ 1.3 ಕಿ.ಮೀ ಸೇತುವೆಯು ಕಾಶ್ಮೀರ ಕಣಿವೆಯ ತಡೆರಹಿತ ರೈಲ್ವೆ ಸಂಪರ್ಕದ ಪ್ರಮುಖ ಹೆಜ್ಜೆಯಾಗಿದೆ. ಇದನ್ನು ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್‌ನ ಭಾಗವಾಗಿ 1,486 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು (ಯುಎಸ್‌ಬಿಆರ್‌ಎಲ್) ಯೋಜನೆ.
ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ದೆಹಲಿಯಿಂದ ವೀಡಿಯೊ ಲಿಂಕ್ ಮೂಲಕ ಕೇಬಲ್ ಕ್ರೇನ್ ಮೂಲಕ ಕಮಾನು ಮುಚ್ಚುವ ಭಾಗವನ್ನು ವೀಕ್ಷಿಸಿದರು. ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದ ಈ ಸೇತುವೆ ಒಂದು ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.