ಮುಂಬೈ(ಡಿ.03): ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಅಂತ್ಯಗೊಂಡು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ, ಸರ್ಕಾರ ರಚನೆಯ ಕಸರತ್ತಿನ ಸಂದರ್ಭದ ರಾಜಕೀಯ ದಾಳಗಳು ಇದೀಗ ಒಂದೊಂದಾಗಿ ಹೊರಬರುತ್ತಿವೆ.

ಸರ್ಕಾರ ರಚನೆಗೆ ಬಿಜೆಪಿಗೆ ನೆರವಾಗುವಂತೆ ಖುದ್ದು ಪ್ರಧಾನಿ ಮೋದಿ ಎನ್’ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.

ಖಚಿತವಿಲ್ಲದ ಮೈತ್ರಿಗೆ ಮಣೆ: ದುಡುಕಿ ಎಡವಿದ ಬಿಜೆಪಿ!

ಬಿಜೆಪಿ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದರೆ, ಕೇಂದ್ರದಲ್ಲಿ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಪ್ರಧಾನಿ ಮೋದಿ ಆಮಿಷವೊಡ್ಡಿದ್ದರು ಎಂದು ಖುದ್ದು ಶರದ್ ಪವಾರ್ ಹೇಳಿದ್ದಾರೆ.

ಬಿಜೆಪಿ ಜೊತೆ ಸರ್ಕಾರ ರಚಿಸುವಂತೆ ಕೋರಿ ಖುದ್ದು ಪ್ರಧಾನಿ ಮೋದಿ ತಮಗೆ ಫೋನ್ ಕರೆ ಮಾಡಿದ್ದರು ಎಂದು ಶರದ್ ಹೇಳಿದ್ದಾರೆ. ಆದರೆ ಬಿಜೆಪಿ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಮೋದಿಗೆ ಸ್ಪಷ್ಟಪಡಿಸಿದ್ದಾಗಿ ಪವಾರ್ ತಿಳಿಸಿದ್ದಾರೆ.

ದೆಹಲಿ ಚಾಣಕ್ಯನ ಮಣಿಸಿದ ’ಮಹಾ’ ಚಾಣಾಕ್ಷ ಪವಾರ್‌!

ತಮ್ಮ ವೈಯಕ್ತಿಕ ಸಂಬಂಧ ಚೆನ್ನಾಗಿದ್ದು, ಅದು ಹಾಗೆಯೇ ಮುಂದುವರೆಯುತ್ತದೆ. ಆದರೆ ರಾಜಕೀಯವಾಗಿ ನಿಮ್ಮನ್ನು ವಿರೋಧಿಸುವುದನ್ನು ಮುಂದುವರೆಸುವುದಾಗಿ ಪ್ರಧಾನಿ ಮೋದಿ ಅವರಿಗೆ ನೇರವಾಗಿ ಹೇಳಿದ್ದಾಗಿ ಪವಾರ್ ಹೇಳಿದ್ದಾರೆ. 

2022ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಪವಾರ್ NDA ಅಭ್ಯರ್ಥಿ: RSS ಚಿಂತಕನ ಭವಿಷ್ಯ!

ಇನ್ನು ಸುಪ್ರಿಯಾ ಸುಳೆ ಕೂಡ ತಂದೆಯ ಮಾತಿಗೆ ಧ್ವನಿಗೂಡಿಸಿದ್ದು, ಸೈದ್ಧಾಂತಿಕ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಸೇರುವ ಮೋದಿ ಆಮಿಷವನ್ನು ತಂದೆ ಶರದ್ ಪವಾರ್ ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.

ಡಿಸೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ