ನವದೆಹಲಿ[ನ.27]: ಮಹಾರಾಷ್ಟ್ರದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕು, ಸರ್ಕಾರದಲ್ಲಿ ಪೂರ್ಣ ಅಧಿಕಾರ ತಾನೇ ಹೊಂದಬೇಕು ಎಂಬ ಮಹದಾಸೆಯೇ, ಬಿಜೆಪಿಯನ್ನು ಮಹಾರಾಷ್ಟ್ರದಲ್ಲಿ ಅಧಿಕಾರದಿಂದ ವಂಚಿತ ಮಾಡಿದೆ. ಜೊತೆಗೆ ಬಂಡಾಯ ನಾಯಕ ಅಜಿತ್‌ ಪವಾರ್‌ ಜೊತೆ ಮೈತ್ರಿ ಬೆಳೆಸಲು ಮಾಡಿದ ಅವಸರ ಕೂಡಾ ಪಕ್ಷಕ್ಕೆ ಮುಖಭಂಗ ಉಂಟುಮಾಡಲು ಕಾರಣವಾಗಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಶಿವಸೇನೆ ಜೊತೆ ಮೈತ್ರಿ ಸಾಧ್ಯವಾಗದೇ ಹೋದಾಗ ಬಿಜೆಪಿ ಇನ್ನಷ್ಟುತಾಳ್ಮೆ ತೋರಬಹುದಿತ್ತು. ಆದರೆ ಮಿತ್ರ ಪಕ್ಷ ಶಿವಸೇನೆ, ಎನ್‌ಸಿಪಿ- ಕಾಂಗ್ರೆಸ್‌ ಜೊತೆ ಸಮಾಲೋಚನೆ ಆರಂಭಿಸುತ್ತಲೇ, ಎನ್‌ಸಿಪಿಯಲ್ಲಿನ ಬಂಡಾಯವನ್ನು ಲಾಭ ಮಾಡಿಕೊಳ್ಳಲು ಮುಂದಾದ ಬಿಜೆಪಿ, ಅಜಿತ್‌ ಪವಾರ್‌ ಜೊತೆ ರಹಸ್ಯ ಮಾತುಕತೆ ಆರಂಭಿಸಿತು. ಈ ವೇಳೆ ಅಜಿತ್‌ ಕೂಡಾ, ಸರ್ಕಾರ ರಚನೆಗೆ ಅಗತ್ಯವಾದಷ್ಟುಶಾಸಕರನ್ನು ಕರೆತರುವ ಭರವಸೆಯನ್ನು ಬಿಜೆಪಿಗೆ ನೀಡಿಬಿಟ್ಟರು. ಮತ್ತೊಂದೆಡೆ ಬಿಜೆಪಿಯೊಳಗಿನ ಕೆಲ ಹಿರಿಯರು ಕೂಡಾ ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿಯಲ್ಲಿನ ಕೆಲ ಶಾಸಕರನ್ನು ಸೆಳೆಯುವ ದೊಡ್ಡ ಮಾತುಗಳನ್ನು ಆಡಿದರು.

ದೆಹಲಿ ಚಾಣಕ್ಯನ ಮಣಿಸಿದ ’ಮಹಾ’ ಚಾಣಾಕ್ಷ ಪವಾರ್‌!

ಈ ಬಗ್ಗೆ ಹೆಚ್ಚಿನ ಪರಾಮರ್ಶೆ ಮಾಡದ ಬಿಜೆಪಿ ನಾಯಕರು, ತಾವೇ ಹೀನಾಯವಾಗಿ ನಿಂದಿಸಿದ್ದ, ಟೀಕಿಸಿದ್ದ ಅಜಿತ್‌ ಪವಾರ್‌ ಜೊತೆಗೂಡಿ ಸರ್ಕಾರ ರಚನೆ ನಿರ್ಧಾರ ಮಾಡಿದರು. ಜೊತೆಗೆ ರಹಸ್ಯವಾಗಿಯೇ ರಾಜ್ಯಪಾಲರ ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಿದರು. ಅದಕ್ಕೆ ಕೇಂದ್ರವೂ ಬೆಂಬಲವಾಗಿ ನಿಂತು, ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆ ಹಿಂದಕ್ಕೆ ಪಡೆಯುವ ಶಿಫಾರಸು ಮಾ ಾಲದೆಂಬಂತೆ ಜನ ನಿದ್ದೆಯಿಂದ ಏಳುವ ಮುನ್ನವೇ ನೂತನ ಸಿಎಂ ಮತ್ತು ಡಿಸಿಎಂ ಪ್ರಮಾಣ ವಚನ ಸ್ವೀಕರಿಸುವಂತೆ ಮಾಡುವ ಮೂಲಕ ಅಚ್ಚರಿ ಮತ್ತು ಟೀಕೆ ಎರಡಕ್ಕೂ ಗುರಿಯಾಯಿತು.

ಆದರೆ ಅಂತಿಮವಾಗಿ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಉರುಳಿಸಿದ ದಾಳದ ಮುಂದೆ ಅಜಿತ್‌ ಮಂಡಿಯೂರಿದರು. ಪ್ರಕರಣ ಕೋರ್ಟ್‌ ಮೆಟ್ಟಿಲೇರಿತು. ಕೋರ್ಟ್‌ ಕೂಡಾ ತಕ್ಷಣವೇ ವಿಶ್ವಾಸಮತ ಯಾಚನೆಗೆ ಸೂಚಿಸುವ ಮೂಲಕ ಬಿಜೆಪಿಗೆ ಸರ್ಕಾರ ರಚನೆಗೆ ಯಾವುದೇ ಪರಾರ‍ಯಯ ಯತ್ನದ ಅವಕಾಶ ನಿರಾಕರಿಸಿತು. ಖಚಿತವಿಲ್ಲದ ಮೈತ್ರಿ, ಆತುರದ ನಿರ್ಧಾರಕ್ಕೆ ಬಿದ್ದ ಬಿಜೆಪಿ ಇಲ್ಲದ ವಿವಾದ ಮೈಮೇಲೆ ಎಳೆದುಕೊಂಡಿತು ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು