Asianet Suvarna News Asianet Suvarna News

Lata Mangeshkar: ಲತಾ ಮಂಗೇಶ್ಕರ್ ನಿಧನ, ಮೋದಿ ಸೇರಿ ಗಣ್ಯರ ಕಂಬನಿ!

* ಬಾರದ ಲೋಕಕ್ಕೆ ಗಾನ ಕೋಗಿಲೆಯ ಪಯಣ

* ಭಾರತದ ನೈಂಟಿಂಗೇಲ್ ಲತಾ ಮಂಗೇಶ್ಕರ್ ನಿಧನ

* ಲತಾ ದೀದೀ ನಿಧನಕ್ಕೆ ಪಿಎಂ ಮೋದಿ ಸಂತಾಪ

PM Modi mourns Lata Mangeshkar death says my interactions with her will remain unforgettable pod
Author
Bangalore, First Published Feb 6, 2022, 10:26 AM IST | Last Updated Feb 6, 2022, 11:48 AM IST

ನವದೆಹಲಿಫೆ.06): ಭಾರತದ ನೈಟಿಂಗೇಲ್‌ (India’s nightingale) ಎಂದೇ ಹೆಸರುವಾಸಿಯಾಗಿರುವ ಲತಾ ಮಂಗೇಶ್ಕರ್‌ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾನಕೋಗಿಲೆ ಇಹಲೋಕ ತ್ಯಜಿಸಿದ್ದಾರೆ. ತನ್ನ 13ನೇ ವಯಸ್ಸಿಗೆ ಹಾಡಲು ಪ್ರಾರಂಭಿಸಿದ ಲತಾ ಮಂಗೇಶ್ಕರ್ ಇದುವರೆಗೂ ಹಿಂದಿ ಭಾಷೆಯೊಂದರಲ್ಲೇ 1000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ, ಭಾರತದ 36 ವಿವಿಧ ಭಾಷೆಗಳಲ್ಲಿ ಇವರು ಹಾಡಿದ್ದಾರೆ. ಕನ್ನಡದ (kannada) 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ 'ಬೆಳ್ಳನೆ ಬೆಳಗಾಯಿತು..' ಹಾಡನ್ನು ಹಾಡಿ ಸ್ಯಾಂಡಲ್‌ವುಡ್‌ಗೂ (Sandalwood) ಲತಾ ಪ್ರವೇಶ ಮಾಡಿದ್ದರು. ಇವರ ಗಾನಕ್ಕೆ ತಲೆದೂಗದವರೇ ಇಲ್ಲ. ಜನವರಿಯ ಆರಂಭದಲ್ಲಿ ಲತಾ ಮಂಗೇಶ್ಕರ್ (Lata Mangeshkar) ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಬಳಿಕ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ, ಚಿಕಿತ್ಸೆ ಮುಂದುವರೆಸಲಾಗಿತ್ತು.

Lata Mangeshkar: ಶಾರದೆಯ ಪಾದ ಸೇರಿದ ಲತಾ ಮಂಗೇಶ್ಕರ್, ಹಾಡು ನಿಲ್ಲಿಸಿದ ಗಾನ ಕೋಗಿಲೆ

ಇನ್ನು ಅಗಲಿದ ಗಾಯಕಿಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಮೋದಿ 'ನಾನು ಹೇಳಲಾಗದಷ್ಟು ದುಃಖಿತನಾಗಿದ್ದೇನೆ. ದಯೆ ಮತ್ತು ಕಾಳಜಿಯುಳ್ಳ ಲತಾ ದೀದಿ ನಮ್ಮನ್ನು ಅಗಲಿದ್ದಾರೆ. ಅವರ ಅಗಲುವಿಕೆ ನಮ್ಮ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಮುಂಬರುವ ಪೀಳಿಗೆ ಅವರನ್ನು ಭಾರತೀಯ ಸಂಸ್ಕೃತಿಯ ನಿಷ್ಠಾವಂತೆ ಎಂದು ನೆನಪಿಸಿಕೊಳ್ಳುತ್ತವೆ, ಅವರ ಮಧುರ ಧ್ವನಿಯು ಜನರನ್ನು ಮಂತ್ರಮುಗ್ಧಗೊಳಿಸುವ ಅಪ್ರತಿಮ ಸಾಮರ್ಥ್ಯವನ್ನು ಹೊಂದಿತ್ತು' ಎಂದಿದ್ದಾರೆ.

ಲತಾ ದೀದಿ ಅವರ ಹಾಡುಗಳು ವಿವಿಧ ಭಾವನೆಗಳಿಂದ ತುಂಬಿರುತ್ತಿದ್ದವು. ದಶಕಗಳ ಕಾಲ ಭಾರತೀಯ ಚಲನಚಿತ್ರ ಪ್ರಪಂಚದ ಸ್ಥಿತ್ಯಂತರಗಳನ್ನು ಅವರು ನಿಕಟವಾಗಿ ವೀಕ್ಷಿಸಿದ್ದರು. ಚಲನಚಿತ್ರಗಳ ಆಚೆಗೆ, ಅವರು ಯಾವಾಗಲೂ ಭಾರತದ ಬೆಳವಣಿಗೆಯ ಬಗ್ಗೆ ಉತ್ಸುಕರಾಗಿದ್ದರು. ಅವರು ಯಾವಾಗಲೂ ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನೋಡಲು ಬಯಸಿದ್ದರು.

Film Fare ಪ್ರಶಸ್ತಿಯನ್ನೊಮ್ಮೆ ನಿರಾಕರಿಸಿದ್ದ ಗಾನ ಕೋಗಿಲೆ ಲತಾ ಮಂಗೇಶ್ಕರ್!

ಲತಾ ದೀದಿಯವರಿಂದ ನಾನು ಯಾವಾಗಲೂ ಅಪಾರ ಪ್ರೀತಿಯನ್ನು ಪಡೆದಿದ್ದೇನೆ ಎಂಬುವುದು ಗೌರವವೆಂದು ಪರಿಗಣಿಸುತ್ತೇನೆ. ಅವರೊಂದಿಗಿನ ನನ್ನ ಸಂವಾದಗಳು ಅವಿಸ್ಮರಣೀಯವಾಗಿ ಉಳಿಯುತ್ತವೆ. ಲತಾ ದೀದಿ ಅವರ ನಿಧನಕ್ಕೆ ನನ್ನ ಸಹ ಭಾರತೀಯರೊಂದಿಗೆ ನಾನು ದುಃಖಿಸುತ್ತೇನೆ. ಅವರ ಕುಟುಂಬದವರೊಂದಿಗೆ ಮಾತನಾಡಿ ಸಾಂತ್ವನ ಹೇಳುತ್ತೇನೆ ಓಂ ಶಾಂತಿ ಎಂದಿದ್ದಾರೆ.

ಕೊರೋನಾ ರಿಲೀಫ್ ಫಂಡ್‌ಗೆ 7 ಲಕ್ಷ ನೀಡಿದ ಲತಾ ಮಂಗೇಶ್ಕರ್

ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ (Home Minister Amit Shah) ಈ ಬಗ್ಗೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಕಾಲಕಾಲಕ್ಕೆ ಲತಾ ದೀದಿಯವರ ವಾತ್ಸಲ್ಯ ಮತ್ತು ಆಶೀರ್ವಾದವನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಅಪ್ರತಿಮ ದೇಶಭಕ್ತಿ, ಮಧುರವಾದ ಮಾತು, ಸಜ್ಜನಿಕೆಯಿಂದ ಸದಾ ನಮ್ಮ ನಡುವೆ ಇರುತ್ತಾಳೆ. ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಓಂ ಶಾಂತಿ ಎಂದು ಲತಾ ದೀದೀಗೆ ನಮನ ಸಲ್ಲಿಸಿದ್ದಾರೆ. 

ಲತಾ ಮಂಗೇಶ್ಕರ್ ಮದುವೆಯಾಗಲಿಲ್ಲ ಯಾಕೆ? ಅದೊಂದು ನವಿರಾದ ಪ್ರೇಮಕಥೆ

ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಕೂಡಾ ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಅಪ ಸೂಚಿಸಿ, 'ಗಾನ ಕೋಗಿಲೆ' ಲತಾ ಮಂಗೇಶ್ಕರ್ ಅವರ ಸಾವಿನಿಂದ ಭಾರತದ ಧ್ವನಿ ಕಳೆದುಹೋಗಿದೆ. ಲತಾಜಿ ತಮ್ಮ ಜೀವನದುದ್ದಕ್ಕೂ ಸಂಗೀತ ಅಭ್ಯಾಸ ಮಾಡಿದರು. ಅವರು ಹಾಡಿದ ಹಾಡುಗಳನ್ನು ಭಾರತದ ಹಲವು ತಲೆಮಾರುಗಳು ಕೇಳಿದ್ದಾರೆ ಮತ್ತು ಹಾಡಿದ್ದಾರೆ. ಅವರ ಅಗಲಿಕೆ ನಾಡಿನ ಕಲೆ ಮತ್ತು ಸಂಸ್ಕೃತಿ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ ಎಂದು ಬರೆದಿದ್ದಾರೆ.

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ (A. R. Rahman) ಕೂಡಾ ಅಗಲಿದ ಗಾನ ಕೋಗಿಲೆಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಎ. ಆರ್‌. ರಹಮಾನ್ ಪ್ರೀತಿ, ಗೌರವ ಮತ್ತು ಪ್ರಾರ್ಥನೆಗಳು ಎಂದು ಬರೆದಿದ್ದು, ಲತಾ ಮಂಗೇಶ್ಕರ್ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios