ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 76% ಅನುಮೋದನೆ ರೇಟಿಂಗ್‌ನೊಂದಿಗೆ ಮತ್ತೆ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ಈ ರೇಟಿಂಗ್ ವಿಶ್ವದಲ್ಲೇ ಅತಿ ಹೆಚ್ಚು ಎಂಬುದನ್ನು ಗಮನಿಸಬೇಕಾಗಿದೆ. 

ಹೊಸದೆಹಲಿ (ಸೆಪ್ಟೆಂಬರ್ 15, 2023): ಇತ್ತೀಚೆಗಷ್ಟೇ ಪ್ರಧಾನಿ ಮೋದಿ ದೆಹಲಿಯಲ್ಲಿ ಜಿ - 20 ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇದಕ್ಕೆ ಹಲವು ಜಾಗತಿಕ ನಾಯಕರು ನರೇಂದ್ರ ಮೋದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಮತ್ತೊಂದು ಜಾಗತಿಕ ಸಮೀಕ್ಷೆ ಹೊರಬಿದ್ದಿದ್ದು, ಪ್ರಧಾನಿ ಮೋದಿಯೇ ಮತ್ತೆ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 76% ಅನುಮೋದನೆ ರೇಟಿಂಗ್‌ನೊಂದಿಗೆ ಮತ್ತೆ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ಈ ರೇಟಿಂಗ್ ವಿಶ್ವದಲ್ಲೇ ಅತಿ ಹೆಚ್ಚು ಎಂಬುದನ್ನು ಗಮನಿಸಬೇಕಾಗಿದೆ. 

ಇದನ್ನು ಓದಿ: ದ್ವಾರಕಾದಲ್ಲಿ ‘ಯಶೋಭೂಮಿ’ಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿರೋ ಪ್ರಧಾನಿ ಮೋದಿ: ವೈಶಿಷ್ಟ್ಯತೆ ಹೀಗಿದೆ..

ಮಾರ್ನಿಂಗ್ ಕನ್ಸಲ್ಟ್ ಬಿಡುಗಡೆ ಮಾಡಿದ “ಗ್ಲೋಬಲ್ ಲೀಡರ್ ಅಪ್ರೂವಲ್” ಸಮೀಕ್ಷೆಯ ಪ್ರಕಾರ, ಪಿಎಂ ಮೋದಿ ಅವರ ಅನುಮೋದನೆ ರೇಟಿಂಗ್ ಪಟ್ಟಿಯಲ್ಲಿನ ಎರಡನೇ ಸ್ಥಾನದಲ್ಲಿರುವ ನಾಯಕನಿಗಿಂತ 12 ಶೇಕಡಾ ಪಾಯಿಂಟ್‌ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ಮೋದಿ ಸತತವಾಗಿ ಅಗ್ರಸ್ಥಾನದಲ್ಲಿದ್ದಾರೆ.

ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, 40% ಅನುಮೋದನೆಯ ರೇಟಿಂಗ್‌ನೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಮಾರ್ಚ್‌ನಿಂದ ಇದು ಅವರ ಅತ್ಯಧಿಕ ಶ್ರೇಯಾಂಕವಾಗಿದೆ. 

ಇದನ್ನೂ ಓದಿ: G20 ಸಭೆಯಲ್ಲಿ ಮೋದಿ ಗೆಲುವು, ಹೂಡಿಕೆಯಲ್ಲಿ ಅದಾನಿ ಕಂಪನಿ ಗೆಲುವು: ಒಂದೇ ದಿನದಲ್ಲಿ 3.4 ಲಕ್ಷ ಕೋಟಿ ಲಾಭ

ಗಮನಾರ್ಹವಾಗಿ, ಸೆಪ್ಟೆಂಬರ್ 6-12, 2023 ರಿಂದ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ಪ್ರಧಾನಿ ಮೋದಿ ಅವರು ಈ ಪಟ್ಟಿಯಲ್ಲಿ ಅತ್ಯಂತ ಕಡಿಮೆ ಅಸಮ್ಮತಿ ರೇಟಿಂಗ್ ಅನ್ನು ಸಹ ಹೊಂದಿದ್ದಾರೆ. ನರೇಂದ್ರ ಮೋದಿ ಕೇವಲ 18% ಅಸಮ್ಮತಿ ರೇಟಿಂಗ್ ಹೊಂದಿದ್ದರೆ, ಪಟ್ಟಿಯಲ್ಲಿರುವ ಅಗ್ರ 10 ನಾಯಕರಲ್ಲಿ, ಕೆನಡಾದ ಜಸ್ಟಿನ್ ಟ್ರೂಡೋ ಅವರು 58% ರಷ್ಟು ಅಂದರೆ, ಅತಿ ಹೆಚ್ಚು ಅಸಮ್ಮತಿಯನ್ನು ಹೊಂದಿದ್ದಾರೆ.

ರಾಜಕೀಯ ಗುಪ್ತಚರ ಸಂಶೋಧನಾ ಸಂಸ್ಥೆಯು ಸಂಗ್ರಹಿಸಿದ ದತ್ತಾಂಶವು 22 ಜಾಗತಿಕ ನಾಯಕರ ಸಮೀಕ್ಷೆಯನ್ನು ಆಧರಿಸಿದೆ. ಈ ಪಟ್ಟಿಯಲ್ಲಿ ಕೇವಲ 20% ಅನುಮೋದನೆಯೊಂದಿಗೆ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸಿಯೋಕ್-ಯೂಲ್ ಮತ್ತು ಜೆಕ್ ಗಣರಾಜ್ಯದ ಅಧ್ಯಕ್ಷ ಪೆಟ್ರ್ ಪಾವೆಲ್ ಜಾಗತಿಕ ನಾಯಕರಲ್ಲಿ ಕಡಿಮೆ ಅನುಮೋದನೆ ರೇಟಿಂಗ್‌ಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: G20 ಶೃಂಗಸಭೆ ಯಶಸ್ವಿಯಾಗಿ ಅಂತ್ಯ: ಬ್ರೆಜಿಲ್‌ ಅಧ್ಯಕ್ಷರಿಗೆ ಅಧ್ಯಕ್ಷತೆ ಹಸ್ತಾಂತರಿಸಿದ ಪ್ರಧಾನಿ ಮೋದಿ