ನವದೆಹಲಿ(ನ.26): ಸೆಂಟ್ರಲ್‌ ವಿಸ್ತಾ ಮರು ಅಭಿವೃದ್ಧಿ ಯೋಜನೆಯಡಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಿರ್ಮಾಣ ಮಾಡಲು ನಿಶ್ಚಯಿಸಿರುವ ಹೊಸ ಸಂಸತ್ತಿನ ಕಟ್ಟಡ ಕಾಮಗಾರಿಗೆ ಡಿಸೆಂಬರ್‌ ಮೊದಲ ಮಧ್ಯಂತರ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಹೊಸ ಸಂಸತ್ತಿನ ನಿರ್ಮಾಣ ಕಾಮಗಾರಿಗೆ ಅನುಕೂಲವಾಗುವಂತೆ ಈಗಾಗಲೇ ಸಂಸತ್ತಿನ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮಗಾಂಧೀಜಿ, ಡಾ. ಭೀಮರಾವ್‌ ಅಂಬೇಡ್ಕರ್‌ ಸೇರಿ ಒಟ್ಟಾರೆ 5 ಪ್ರತಿಮೆಗಳನ್ನು ಇತರೆ ಸ್ಥಳಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಸಾಧ್ಯತೆಯಿದೆ.

21 ತಿಂಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಸಂಸತ್ತಿನ ರೀತಿ ಸುಪ್ರೀಂ ಕೋರ್ಟಿಗೂ ಹೊಸ ಕಟ್ಟಡ?

ಹೊಸ ಸಂಸತ್‌ ಕಟ್ಟಡ ನಿರ್ಮಾಣವಾಗುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ, ಹೊಸ ಸುಪ್ರೀಂ ಕೋರ್ಟ್‌ ಕಟ್ಟಡಕ್ಕೂ ಬೇಡಿಕೆ ಕೇಳಿಬಂದಿದೆ.

17 ಎಕರೆ ವಿಶಾಲ ವ್ಯಾಪ್ತಿಯಲ್ಲಿ 1958ರಲ್ಲಿ ನಿರ್ಮಿತವಾದ ಸುಪ್ರೀಂ ಕೋರ್ಟ್‌ ಕಟ್ಟಡ ಈಗ ಯಾತಕ್ಕೂ ಸಾಲುತ್ತಿಲ್ಲ. ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಅದಕ್ಕೆಂದೇ ಸುಪ್ರೀಂ ಕೋರ್ಟ್‌ಗೆ ಹೊಸ ಕಟ್ಟಡ ಬೇಕು ಎಂಬ ಬೇಡಿಕೆಯನ್ನು ಭಾರತದ ಮುಖ್ಯ ನ್ಯಾಯಾಧೀಶ ಎಸ್‌.ಎ.ಬೋಬ್ಡೆ ಅವರು ಸರ್ಕಾರದ ಮುಂದೆ ಇಟ್ಟಿದ್ದಾರ