82 ವರ್ಷದ ಬಿಲ್ಕಿಸ್ ಬಾನು ಜಗತ್ತಿನ 100 ಜನ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರು ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಜಗತ್ತಿನ 100 ಜನ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರು ಬಂದಿದೆ. ಈ ಬಗ್ಗೆ 82 ವರ್ಷದ ಬಿಲ್ಕಿಸ್ ಬಾನು ಸಂತಸ ವ್ಯಕ್ತಪಡಿಸಿದ್ದಾರೆ. ಶಾಹೀನ್ ಬಾಗ್‌ನ ದಾದಿ ಎಂದೇ ಕರೆಯಲ್ಪಡುವ ಬಿಲ್ಕಿಸ್ ಬಾನು ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭ ಪ್ರತಿಭಟನೆಯಲ್ಲಿ ಕುಳಿತುಕೊಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟೈಮ್ ರಿಲೀಸ್ ಮಾಡಿದ 100 ಜನ ಲಿಸ್ಟ್‌ನಲ್ಲಿ ಪ್ರಧಾನಿ ಮೋದಿ, ನಟ ಆಯುಷ್ಮಾನ್ ಖುರಾನ, ರವೀಂದ್ರ ಗುಪ್ತ, ಸುಂದರ್ ಪಿಚ್ಚೈ ಕೂಡಾ ಇದ್ದಾರೆ. ನಾನು ಖರಾನ್ ಶರೀಫ್ ಮಾತ್ರ ಓದಿದ್ದು, ಶಾಲೆಗೆ ಹೋಗಿಲ್ಲ. ಇಂದು ನನಗೆ ಖುಷಿಯಾಗ್ತಿದೆ.

ಪ್ರಧಾನಿ ಮೋದಿ ಕುರಿತು ಹಾಡು ಹಾಡಿದ ದುಬೈ ಹುಡುಗಿ..!

ಈ ಲಿಸ್ಟ್‌ನಲ್ಲಿರೋದಕ್ಕೆ ಪ್ರಧಾನಿಗೆ ಶುಭಾಶಯ. ಅವರೂ ನನ್ನ ಮಗ. ನಾನು ಜನ್ಮ ನೀಡಿರದಿದ್ದರೆ ಏನಾಯ್ತು..? ನನ್ನ ಸಹೋದರಿ ಜನ್ಮ ನೀಡಿದ್ದಾಳೆ. ಅವರ ದೀರ್ಘಾಯಸ್ಸು ಮತ್ತು ಸಂತೋಷಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಶಾಹೀನ್ ಬಾಗ್ ಪ್ರತಿಭಟನೆ 101 ದಿನ ನಡೆದಿತ್ತು. ಮಾರ್ಚ್‌ 24ರಂದು ದೆಹಲಿ ಪೊಲೀಸರು ಕೊರೋನಾ ವೈರಸ್ ಹಿನ್ನೆಲೆ ಪ್ರತಿಭಟನಾಕಾರರನ್ನು ಚದುರಿಸಿದ್ದರು.