2014ರಲ್ಲಿ ಅಧಿಕಾರಕ್ಕೆ ಏರಿದ ದಿನದಿಂದ ಪ್ರಧಾನಿ ಮೋದಿಗೆ ಇಲ್ಲಿಯವರೆಗೂ 14 ದೇಶದಿಂದ ಶ್ರೇಷ್ಠ ಗೌರವ!
ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಗುರುತಿಸಿ 2014 ರಿಂದ 14 ದೇಶಗಳ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಸ್ಟಾರ್ ಆಫ್ ಕಿಂಗ್ ಅಬ್ದುಲ್ಲಾಜೀಜ್ (Star of the Order of Abdulaziz Al Saud), 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ದೇಶದ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಸೌದಿ ಅರೇಬಿಯಾ ಗೌರವಿಸಿತ್ತು.
State Order of Ghazi Amir Amanullah Khan ಈ ಗೌರವವನ್ನು ಅಫ್ಘಾನಿಸ್ತಾನ ದೇಶದ 2016ರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿತ್ತು.
Grand Collar of the State of Palestine ಇದನ್ನು 2018ರ ಫೆಬ್ರವರಿಯಲ್ಲಿ ಪ್ಯಾಲೆಸ್ತೇನ್ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿತ್ತು.
ಇದು ದೇಶದ ವ್ಯಾಪ್ತಿಗೆ ಬರೋದಿಲ್ಲವಾದರೂ, 2018ರ ಅಕ್ಟೋಬರ್‌ನಲ್ಲಿ ವಿಶ್ವಸಂಸ್ಥೆಯು ಪ್ರಧಾನಿ ಮೋದಿ ಅವರಿಗೆ UN Champion of the Earth Award ಗೌರವ ನೀಡಿತ್ತು.
Order of Zayed 2019ರ ಏಪ್ರಿಲ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಧಾನಿ ಮೋದಿ ಅವರಿಗೆ ತನ್ನ ಶ್ರೇಷ್ಠ ಆರ್ಡರ್ ಆಫ್ ಜಯೇದ್ ಗೌರವ ನೀಡಿತ್ತು.
Order of St Andrew ಇದನ್ನು ರಷ್ಯಾ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2019ರ ಏಪ್ರಿಲ್‌ನಲ್ಲಿ ನೀಡಿತ್ತು. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇದನ್ನು ಪ್ರದಾನ ಮಾಡಿದ್ದರು.
Order of the Distinguished Rule of Izzuddin 2019ರ ಜೂನ್ ತಿಂಗಳಿನಲ್ಲಿ ಭಾರತದ ನೆರೆಯ ದೇಶ ಮಾಲ್ಡೀವ್ಸ್ ಈ ಗೌರವವನ್ನು ಮೋದಿ ಅವರಿಗೆ ನೀಡಿತ್ತು.
King Hamad Order of the Renaissance ಈ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ 2019ರ ಆಗಸ್ಟ್‌ನಲ್ಲಿ ಬಹರೇನ್ ದೊರೆ ನೀಡಿದ್ದರು.
Legion of Merit ಅಮೆರಿಕದ ಪ್ರತಿಷ್ಠಿತ ಗೌರವ 2020ರ ಡಿಸೆಂಬರ್‌ನಲ್ಲಿ ಮೋದಿಗೆ ಅವರಿಗೆ ಸಿಕ್ಕಿತ್ತು. ಮೋದಿ ಅವರ ಅನುಪಸ್ಥಿತಿಯಲ್ಲಿ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಇದನ್ನು ಸ್ವೀಕರಿಸಿದ್ದರು.
Order of the Dragon King ಈ ಗೌರವವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆರೆಯ ದೇಶ ಭೂತಾನ್‌ನ ದೊರೆ 2021ರ ಡಿಸೆಂಬರ್‌ನಲ್ಲಿ ನೀಡಿದ್ದರು.
Order of Fiji ಹೆಸರೇ ಹೇಳುವಂತೆ ಫಿಜಿ ದೇಶದ ಅಧ್ಯಕ್ಷರಿಂದ ಪ್ರಧಾನಿ ಮೋದಿ ಸ್ವೀಕರಿಸಿದ್ದರು. 2023ರ ಮೇ ತಿಂಗಳಲ್ಲಿ ಈ ಕಾರ್ಯಕ್ರಮ ನಡೆದಿತ್ತು.
Order of Logohu ಪುಟ್ಟ ದೇಶ ಪಪುವಾ ನ್ಯೂಗಿನಿ ದೇಶದ ಅಧ್ಯಕ್ಷರು ಪ್ರಧಾನಿ ಮೋದಿಗೆ ನೀಡಿದ್ದರು.ಮೇ 2023ರಲ್ಲಿ ಮೋದಿ ಇದನ್ನು ಸ್ವೀಕರಿಸಿದ್ದರು.
Order of the Nile ಈಜಿಪ್ಟ್ ದೇಶ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದ ಶ್ರೇಷ್ಠ ಗೌರವ. ಜೂನ್ 2023ರಲ್ಲಿ ದೇಶದ ಅಧ್ಯಕ್ಷರೇ ಇದನ್ನು ಪ್ರದಾನ ಮಾಡಿದ್ದರು.
Grand Cross of the Legion of Honour ಅನ್ನು ಫ್ರಾನ್ಸ್ ಸರ್ಕಾರ ನೀಡಿತ್ತು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದ ವೃದ್ಧಿಯಲ್ಲಿ ಪ್ರಧಾನಿ ಮೋದಿ ಅವರ ಕಾರ್ಯವನ್ನು ಗಮನಿಸಿ ಮ್ಯಾಕ್ರನ್ ಸರ್ಕಾರ ಜೂನ್ 2023ರಲ್ಲಿ ಈ ಗೌರವ ನೀಡಿತ್ತು.
Grand Cross of the Order of Honour ಗ್ರೀಸ್ ದೇಶದಿಂದ ಪ್ರಧಾನಿ ಮೋದಿಗೆ ಸಿಕ್ಕ ಶ್ರೇಷ್ಠ ಗೌರವ. 2023ರ ಆಗಸ್ಟ್ ತಿಂಗಳಲ್ಲಿ ಇದನ್ನು ಸ್ವೀಕಾರ ಮಾಡಿದ್ದರು.