ವಿದೇಶಾಂಗ ಸಚಿವ ಜೈಶಂಕರ್‌ಗೆ ಭದ್ರತೆ ಹೆಚ್ಚಿಸಿದ ಕೇಂದ್ರ ಸರ್ಕಾರ, Y ಕೆಟಗರಿಯಿಂದ Z ಸೆಕ್ಯೂರಿಟಿ!
ಗುಪ್ತಚರ ಇಲಾಖೆ ನೀಡಿದ ವರದಿ ಆಧರಿಸಿ ಕೇಂದ್ರ ಸರ್ಕಾರ ವಿದೇಶಾಂಗ ಸಚಿವರ ಭದ್ರತೆಯನ್ನು ಹೆಚ್ಚಿಸಿದೆ. ವೈ ಕೆಟಗರಿ ಭದ್ರತೆಯಿಂದ ಇದೀಗ ಝೆಡ್ ಕೆಟಗರಿ ಭದ್ರತೆ ಒದಗಿಸಲಾಗಿದೆ.
ನವದೆಹಲಿ(ಅ.12) ವಿದೇಶಾಂಗ ಸಚಿವ ಎಸ್ ಜೈಶಂಕರ್ ತಮ್ಮ ನೇರ ನುಡಿ, ತೀಕ್ಷ್ಣ ಪ್ರತಿಕ್ರಿಯೆಗಳಿಂದ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಭಾರತದ ತಂಡ ಅತ್ಯುತ್ತಮ ವಿದೇಶಾಂಗ ಸಚಿವ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಭಾರತದ ಸುರಕ್ಷತೆ, ಭಾರತೀಯರ ಸುರಕ್ಷತೆ, ದೇಶದ ನೀತಿ, ನಿಯಮ, ವಿದೇಶಾಂಗ ಪಾಲಿಸಿಗಳಲ್ಲಿ ರಾಜಿಯಾಗದ ಜೈಶಂಕರ್‌ಗೆ ಮೇಲಿಂದ ಮೇಲೆ ಬೆದರಿಕೆಗಳು ಬರುತ್ತಿದೆ. ಇದರ ಪರಿಣಾಮ ಕೇಂದ್ರ ಸರ್ಕಾರ ಜೈಶಂಕರ್ ಭದ್ರತೆ ಹೆಚ್ಚಿಸಿದೆ. ವೈ ಸೆಕ್ಯೂಟಿರಿಯಿಂದ ಇದೀಗ ಝೆಡ್ ಸೆಕ್ಯೂರಿಟಿಗೆ ಭದ್ರತೆ ಹೆಚ್ಚಿಸಲಾಗಿದೆ.
ಇಂಟಲಿಜೆನ್ಸ್ ವಿಭಾಗ ನೀಡಿದ ವರದಿ ಆಧರಿಸಿ ಕೇಂದ್ರ ಸರ್ಕಾರ ಜೈಶಂಕರ್ ಭದ್ರತೆ ಹೆಚ್ಚಿಸಿದೆ. ಭಾರತದ ವಿದೇಶಾಂಗ ನೀತಿ ಹಾಗೂ ಇತರ ದೇಶಗಳ ಜೊತೆಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಯಲ್ಲಿ ಜೈಶಂಕರ್ ಪಾತ್ರ ಮಹತ್ವದ್ದಾಗಿದೆ. ರಾಯಭಾರಿಯಾಗಿದ್ದ ಜೈಶಂಕರ್‌ಗೆ ವಿದೇಶಾಂಗ ಸಚಿವ ಸ್ಥಾನ ನೀಡಿ ಸೂಕ್ತ ವ್ಯಕ್ತಿಯನ್ನು ಸೂಕ್ತ ಸ್ಥಾನಕ್ಕೆ ನೇಮಿಸಿಕೊಂಡ ಮೋದಿ ಸರ್ಕಾರ ಇದೀಗ ಭದ್ರತೆಯನ್ನೂ ಹೆಚ್ಚಿಸಿದೆ.
ಮಾತುಕತೆಗೆ ಸಿದ್ಧ, ಉಗ್ರವಾದ ನಿಲ್ಲಿಸಿ: ಕೆನಡಾಗೆ ಜೈಶಂಕರ್ ತಿರುಗೇಟು
ಝೆಡ್ ಕೆಟಗರಿ ಭದ್ರತೆಯಲ್ಲಿ 22 ಭದ್ರತಾ ಕಮಾಂಡೋಗಳು, 4 ರಿಂದ 6 ಎನ್‌ಎಸ್‌ಜಿ ಕಮಾಂಡೋ ಹಾಗೂ ಪೊಲೀಸರು ಜೈಶಂಕರ್‌ಗೆ ಭದ್ರತೆ ನೀಡಲಾಗುತ್ತದೆ. ಇದುವರೆಗೆ ಜೈಶಂಕರ್‌ಗೆ ವೈ ಕೆಟಗರಿ ಭದ್ರತೆ ನೀಡಲಾಗಿತ್ತು. ಈ ಕೆಟಗರಿಯಲ್ಲಿ 8 ಪೊಲೀಸರು ಹಾಗೂ 1 ರಿಂದ 2 ಎನ್‌ಎಸ್‌ಜಿ ಕಮಾಂಡೋ ಪಡೆಗಳು ಸಚಿವರಿಗೆ ಭದ್ರತೆ ಒದಗಿಸುತಿತ್ತು.
ಕೆನಡಾ ವಿಚಾರದಲ್ಲಿ ಭಾರತದ ನಿಲುವ, ರಷ್ಯಾದಿಂದ ತೈಲ ಖರೀದಿ ಒಪ್ಪಂದ, ಭಯೋತ್ಪಾದಕರ ವಿರುದ್ದದ ಪ್ರಕರ ಮಾತುಗಳು ಸೇರಿದಂತೆ ಹಲವು ವಿಚಾರದಲ್ಲಿ ಜೈಶಂಕರ್ ವಿಶ್ವಾದ್ಯಂತ ಪ್ರಸಿದ್ಧಿಯಾಗಿದ್ದಾರೆ. ಇದೇ ವೇಳೆ ಜೈಶಂಕರ್ ವಿರುದ್ದ ಬೆದರಿಕೆಗಳು ಹೆಚ್ಚಾಗಿದೆ. ಇತ್ತೀಚೆಗೆ ಕೆನಾಡ ವಿದೇಶಾಂಗ ಸಚಿವರ ಜೊತೆ ಜೈಶಂಕರ್ ರಹಸ್ಯ ಸಭೆ ನಡೆಸಿದ್ದಾರೆ ಅನ್ನೋ ವರದಿ ಬಹಿರಂಗವಾಗಿತ್ತು.
ಭಾರತ, ಕೆನಡಾ ಬಿಕ್ಕಟು ನಡುವೆಯೇ ಅಮೆರಿಕಾ ವಿದೇಶಾಂಗ ಸಚಿವರ ಭೇಟಿ ಮಾಡಿದ ಜೈಶಂಕರ್
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಚಾರದಲ್ಲಿ ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಸಂಘರ್ಷ ತಾರಕಕ್ಕೇರುತ್ತಿರುವ ನಡುವೆಯೇ ಉಭಯ ದೇಶಗಳ ವಿದೇಶಾಂಗ ಸಚಿವರು ವಾಷಿಂಗ್ಟನ್ ನಗರದಲ್ಲಿ ರಹಸ್ಯ ಸಭೆ ನಡೆಸಿ ಸಂಧಾನಕ್ಕೆ ಯತ್ನಿಸಿದ್ದಾರೆ ಎಂದು ಬ್ರಿಟನ್ ಪತ್ರಿಕೆ ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ. ಎಸ್. ಜೈಶಂಕರ್ ಹಾಗೂ ಮೆಲೇನಾ ಜ್ಯೂಲಿ ನಡೆಸಿದ್ದಾರೆ ಎನ್ನಲಾದ ರಹಸ್ಯ ಸಭೆಯನ್ನು ಉಭಯ ದೇಶಗಳು ಅಧಿಕೃತವಾಗಿ ಪ್ರಕಟಿಸಿಲ್ಲವಾದರೂ ಇತ್ತೀಚೆಗೆ ಕೆನಡಾ ದೇಶದ ನಾಯಕರು ಭಾರತದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳುತ್ತಿದ್ದುದು ಈ ಬೆಳವಣಿಗೆ ನಡೆದಿರಬಹುದು ಎಂಬುದಕ್ಕೆ ಪುಷ್ಟಿ ನೀಡುವಂತಿದೆ.
ಜೈಶಂಕರ್ ಜೊತೆ ಚತ್ತೀಸಘಡ ಮೊದಲ ಸಿಎಂ ಅಜಿತ್ ಜೋಗಿ ಪುತ್ರ, ಮಾಜಿ ಶಾಸಕ ಅಮಿತ್ ಜೋಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.